ನವದೆಹಲಿ:ದೇಶದ ಪ್ರಮುಖ ನಗರಗಳಲ್ಲಿ ಕಳೆದ ಐದು ತಿಂಗಳಿನಿಂದ ಸ್ಥಗಿತವಾಗಿರುವ ಮೆಟ್ರೋ ರೈಲು ಮತ್ತೆ ಸಂಚಾರಕ್ಕೆ ಸಜ್ಜಾಗಿವೆ. ಏಕೆಂದರೆ ಕೇಂದ್ರದ ಅನ್​ಲಾಕ್​ 4.0 ನಲ್ಲಿ ಮೆಟ್ರೋ ಮೇಲಿನ ನಿರ್ಬಂಧ ತೆರವಾಗುವ ಸಾಧ್ಯತೆಗಳಿವೆ.
ಒಂದು ವೇಳೆ ಸಂಚಾರ ಮರು ಆರಂಭಕ್ಕೆ ಕೇಂದ್ರದ ಅನುಮತಿ ದೊರೆತದ್ದೇ ಮೆಟ್ರೋ ಸಂಚಾರವೂ ಹೊಸ ಅನುಭವವಗಲಿದೆ. ಹಲವು ಹೊಸತನಗಳನ್ನು ಒಳಗೊಳ್ಳಲಿದೆ ಎಂದೇ ಹೇಳಲಾಗುತ್ತಿದೆ.
ದೆಹಲಿಯಲ್ಲಿ ಮೆಟ್ರೋ ಸಂಸ್ಥೆ ಕೇಂದ್ರದ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪ್ರಾಮಾಣಿಕೃತ ನಿರ್ವಹಣಾ ಕಾರ್ಯಸೂಚಿ (ಎಸ್​ಒಪಿ) ಸಿದ್ಧಪಡಿಸಿದೆ. ಇದರಂತೆ, ವಿಶೇಷ ಮಾರ್ಗಸೂಚಿಗಳನ್ನು ಪ್ರಯಾಣಿಕರು ಪಾಲಿಸಬೇಕಾಗುತ್ತದೆ.
ಇದನ್ನೂ ಓದಿ;ನೀಟ್​, ಜೆಇಇ ಮುಂದೂಡಿ; ಸುಪ್ರೀಂಕೋರ್ಟ್​ ಮೊರೆ ಹೋಗಲು ಮುಂದಾದ ರಾಜ್ಯಗಳು
ಯಾವಾಗ ಆರಂಭ?:ಮುಖ್ಯವಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದ ಒಂದೆರಡು ದಿನಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಶುರುವಾಗಲಿದೆ. ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಅನುಮತಿ ನೀಡುವುದನ್ನೇ ಕಾಯುತ್ತಿವೆ.
ಹೆಚ್ಚುತ್ತಿರುವ ಕರೊನಾ ಪ್ರಕರಣಗಳು ಅಡ್ಡಿಯಾಗುವುದಿಲ್ಲವೇ?:ಈಗಾಗಲೇ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಲಾಗಿದೆ. ನಿಗದಿತ ಮಾರ್ಗದಲ್ಲಿ ರೈಲುಗಳು ಕೂಡ ಸಂಚರಿಸುತ್ತಿವೆ. ಜೆತೆಗೆ, ಅಂತಾರಾಷ್ಟ್ರೀಯ ವಿಮಾನ ಸಂಚಾರವಕ್ಕೂ ಅನುಮತಿ ಸಿಗಬಹುದು. ಹೀಗಾಘಿ ಹೆಚ್ಚುತ್ತಿರುವ ಕರೊನಾ ಮೆಟ್ರೋ ಪುನರಾರಂಭಕ್ಕೆ ತೊಂದರೆಯಾಗದು.
ನಿಗದಿತ ಗೇಟ್​ಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶವಿರಲಿದೆ. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು, ಥರ್ಮಲ್​ ಸ್ಕ್ರೀನಿಂಗ್​ ಕಡ್ಡಾಯವಾಗಲಿದೆ. ಜತೆಗೆ, ಆರೋಗ್ಯ ಸೇತು ಆ್ಯಪ್​ ಹೊಂದುವಂತೆ ಸೂಚಿಸಬಹುದು. ಜತೆಗೆ, ಲಿಫ್ಟ್​ನಲ್ಲಿ ಕೆಲವೇ ಜನರಿಗೆ ಅವಕಾಶವಿರಲಿದೆ.
ಇದನ್ನೂ ಓದಿ;ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!
ಟೋಕನ್​ ವ್ಯವಸ್ಥೆ ಇರುವುದಿಲ್ಲ:ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್​ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಸ್ಮಾರ್ಟ್​ ಕಾರ್ಡ್​ ಹಾಗೂ ಕ್ಯಾಶ್​ಲೆಸ್​ ಮೋಡ್​ಗೆ ಉತ್ತೇಜನ ನೀಡಲಾಗುತ್ತದೆ.
ಆರಂಭದಲ್ಲಿ ರೈಲುಗಳ ಸಂಖ್ಯೆ ಕಡಿಮೆ ಇರಲಿದೆ ಹಾಗೂ ನಿಗದಿತ ಸಂಖ್ಯೆಯ ಪ್ರಯಾಣಿಕರಿಗಷ್ಟೇ ಅವಕಾಶ ಇರಲಿದೆ. ನಿಲ್ದಾಣಗಳಲ್ಲಿ ಮೊದಲಿಗಿಂತಲೂ ಹೆಚ್ಚು ಕಾಳ ನಿಲ್ಲಲಿವೆ. ಕೆಲ ದಿನಗಳ ಮಟ್ಟಿಗೆ ಪ್ರಾಯೋಗಿಕವಾಗಿ ಸಂಚಾರ ನಡೆಸಲಿವೆ. ಹಂತಹಂತವಾಗಿ ಇವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
