ಬೆಂಗಳೂರು: ಕರೊನಾ ಸೋಂಕು ಹರಡುತ್ತಿರುವುದು ಗೊತ್ತಾದ ಬೆನ್ನಲ್ಲೆ ಲಾಕ್​ಡೌನ್ ಘೋಷಣೆಯಾಗಿತ್ತು. ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿದ್ದರು. ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದ ಡನ್ಜೋ ಸಂಸ್ಥೆ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದೆ. ಅದೇನು ಗೊತ್ತೆ? ಬೆಂಗಳೂರು, ಪುಣೆ, ಚೆನ್ನೈ, ಜೈಪುರ, ಮುಂಬೈ, ಹೈದರಾಬಾದ್​ಗಳಲ್ಲಿ ಅತಿ ಹೆಚ್ಚು ಪೂರೈಕೆಯಾ ವಸ್ತುಗಳ ವಿವರವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದೆ. ಇದು ಅಚ್ಚರಿಯನ್ನು ಹುಟ್ಟುಹಾಕಿದೆ!
ಚೆನ್ನೈ ಮತ್ತು ಜೈಪುರದಲ್ಲಿರುವವರು ಹೆಚ್ಚಾಗಿ ಕೈಗಳ ಶುಚಿತ್ವದ ಬಗ್ಗೆ ಗಮನಹರಿಸಿದ್ದು ಕಂಡುಬಂದಿದ್ದು ಅತಿಹೆಚ್ಚು ಹ್ಯಾಂಡ್​ ವಾಷ್​ ಖರೀದಿಸಿದ್ದಾರೆ. ಅದೇ ರೀತಿ ಮುಂಬೈನಲ್ಲಿ ಲಾಕ್​ಡೌನ್, ಸೋಷಿಯಲ್ ಡಿಸ್ಟೆನ್ಸಿಂಗ್​ನ ಬೇಸರ ನೀಗಿಸಲು ಜನ ಸುರಕ್ಷಿತ ಲೈಂಗಿಕ ಚಟುವಟಿಕೆಗಳಲ್ಲಿ ವ್ಯಸ್ತರಾದುದು ಬಹಿರಂಗವಾಗಿದೆ. ಆ ನಗರದಲ್ಲಿ ಅತಿಹೆಚ್ಚು ಕಾಂಡೋಮ್ ಸರಬರಾಜು ಆಗಿರುವುದನ್ನು ಡನ್ಜೋ ಬಹಿರಂಗಪಡಿಸಿದೆ. ಇನ್ನು ಹೈದರಾಬಾದ್​ನಲ್ಲಿ ಐ ಪಿಲ್ ಗುಳಿಗೆಗಳು ಹೆಚ್ಚು ಮಾರಾಟವಾಗಿವೆ.
ಇದೇ ರೀತಿ ಪುಣೆ ಮತ್ತು ಬೆಂಗಳೂರುಗಳಲ್ಲಿ ಕೂಡ ಜನ ಬೇಸರ ಕಳೆಯಲು ಲೈಂಗಿಕ ಚಟುವಟಿಕೆಗೆ ಮೊರೆ ಹೋಗಿದ್ದು ಕಂಡುಬಂದಿದೆ. ಇಲ್ಲಿ ಕಾಂಡೋಮ್​ಗಿಂತ ಹೆಚ್ಚು ಪ್ರೆಗ್ನೆನ್ಸಿ ಕಿಟ್​ಗಳು ಪೂರೈಕೆಯಾಗಿವೆ. ಈ ಕುರಿತ ವಿವರವನ್ನೂ ಡನ್ಜೋ ಸಂಸ್ಥೆ ಬಹಿರಂಗಪಡಿಸಿದೆ. ಕಾಂಡೋಮ್ ಬಳಕೆ ಹೆಚ್ಚಾಗಿರುವ ವಿಷಯ ಲಾಕ್​ಡೌನ್ ಘೋಷಣೆಯಾದ ಬೆನ್ನಿಗೇ ವರದಿಯಾಗಿತ್ತು. (ಏಜೆನ್ಸೀಸ್)
ಕರೊನಾ ಎಫೆಕ್ಟ್- ಗರ್ಲ್​ಫ್ರೆಂಡ್​ಗೋಸ್ಕರ ಏನ್​ ಮಾಡಿದ ನೋಡಿ..

Some Indian cities med the most of it during the lockdown, this March. Delivering from pharmacies is clearly no child's play.🏥#Contraceptives#Condoms#PregancyKits#HandWash#IPill#Pharmacies#Medicines#Lockdown2020#quarantinelife#quarantineandchillpic.twitter.com/6fEvKMJniC
— Dunzo (@DunzoIt)April 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
