ನವದೆಹಲಿ:ರಾಜ್ಯದಲ್ಲಿ ಭಾರೀ ಗದ್ದಲಕ್ಕೆ ಒಳಗಾಗಿದ್ದು, ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಕ್ರಿಪ್ಟೋಕರೆನ್ಸಿ ಬಿಟ್​​ಕಾಯಿನ್​ಗೆ ಭಾರತದಲ್ಲಿ ಮಾನ್ಯತೆ ಸಿಗುತ್ತದೆಯೇ ಎಂಬ ಪ್ರಶ್ನೆ ಇಂದು ಸಂಸತ್ತಿನಲ್ಲಿ ಎದುರಾಯಿತು. ಈ ಪ್ರಶ್ನೆಗೆ ಬಂದಿರುವ ಉತ್ತರವೆಂದರೆ, ಬಿಟ್​ಕಾಯಿನ್​ಗಳನ್ನು ಒಂದು ಕರೆನ್ಸಿಯಾಗಿ ಗುರುತಿಸುವ ಯಾವುದೇ ಪ್ರಸ್ತಾವನೆ ಹಣಕಾಸು ಸಚಿವಾಲಯದ ಮುಂದಿಲ್ಲ ಎಂಬುದು.
ಪ್ರಸ್ತುತ ಸಂಸತ್​ ಅಧಿವೇಶನದಲ್ಲಿ ಖಾಸಗಿ ವರ್ಚುವಲ್​ ಕರೆನ್ಸಿಯನ್ನು ನಿಷೇಧಿಸುವ ಕಾನೂನನ್ನು ಕೇಂದ್ರ ಸರ್ಕಾರ ತರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಭವಿಷ್ಯದ ಬಗ್ಗೆ ಅದಾಗಲೇ ಅನಿಶ್ಚಿತತೆ ಮೂಡಿದೆ. ಇದೀಗ ಸರ್ಕಾರದ ಈ ಹೇಳಿಕೆಯು ದೇಶದಲ್ಲಿ ಕ್ರಿಪ್ಟೊಕರೆನ್ಸಿ ವಹಿವಾಟು ನಡೆಸುತ್ತಿರುವ ಕಂಪೆನಿಗಳಿಗೆ ಮತ್ತಷ್ಟು ಆಘಾತ ನೀಡಿದೆ.
ಇದನ್ನೂ ಓದಿ:ಮತ್ತೆ ಸ್ಫೋಟಿಸಿತು ಕರೊನಾ! ಮೊರಾರ್ಜಿ ವಸತಿ ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಸೋಂಕು
ಚಳಿಗಾಲದ ಅಧಿವೇಶನದ ಮೊದಲ ದಿನದಂದು ಬಿಟ್​ಕಾಯಿನ್​ ಬಗೆಗಿನ ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯ ಲಿಖಿತ ಉತ್ತರ ನೀಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ಬಿಟ್​ಕಾಯಿನ್​ ವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆಯೇ ಎಂಬ ಪ್ರಶ್ನೆಗೆ ಅಂತಹ ವಹಿವಾಟುಗಳ ಡೇಟಾವನ್ನು ಸರ್ಕಾರ ಸಂಗ್ರಹಿಸುವುದಿಲ್ಲ ಎಂದು ಸಚಿವಾಲಯ ಹೇಳಿದೆ. ಬಿಟ್​ಕಾಯಿನ್​ಅನ್ನು ಕರೆನ್ಸಿಯಾಗಿ ಗುರುತಿಸುವ ಯಾವುದಾದರೂ ಪ್ರಸ್ತಾವನೆ ಇದೆಯೇ ಎಂಬ ಪ್ರಶ್ನೆಗೆ ಸಚಿವಾಲಯ ಇಲ್ಲ ಎಂದು ಉತ್ತರಿಸಿದೆ ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ವಿವಾದಿತ ಕೃಷಿ ಕಾಯ್ದೆಗಳು ರದ್ದು; ಗದ್ದಲದ ನಡುವೆ ಮಸೂದೆ ಅಂಗೀಕರಿಸಿದ ಸರ್ಕಾರ

30 ರೂಪಾಂತರಗಳನ್ನು ಹೊಂದಿರುವ ಒಮಿಕ್ರಾನ್​! ಲಸಿಕೆಯನ್ನೂ ಬೈಪಾಸ್​ ಮಾಡುವುದೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
