ಲಖನೌ:ಅದು ಎಂಎಲ್​ಸಿ ಒಬ್ಬರ ಮನೆ. ಅಲ್ಲಿ ಅದ್ದೂರಿಯಾಗಿ ಆಚರಣೆ ಆಗುತ್ತಿದ್ದ ಹುಟ್ಟುಹಬ್ಬ. ಹುಟ್ಟಿದ್ದಕ್ಕೇ ಹಬ್ಬದಂತಿದ್ದ ಆ ಮನೆಯ ಆವರಣದಲ್ಲಿ ಇದ್ದಕ್ಕಿದ್ದಂತೆ ಸಾವಿನ ಶೋಕ. ಅದಕ್ಕೆಲ್ಲ ಕಾರಣ ಅಲ್ಲಿ ಸಿಡಿದ ಗುಂಡು!
ಹೌದು.. ವಿಧಾನಪರಿಷತ್ ಸದಸ್ಯರೊಬ್ಬರ ಮನೆಯಲ್ಲಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದಲ್ಲಿ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಕಂಟ್ರಿಮೇಡ್​ ಪಿಸ್ತೂಲ್​ ಹಿಡಿದು ತೋರಿಸಿದ್ದಷ್ಟೇ, ಒಬ್ಬ ಹೆಣವಾಗಿ ಮಲಗಿಬಿಟ್ಟ.
ಅಷ್ಟಕ್ಕೂ ಇಷ್ಟೆಲ್ಲ ಸಂಭವಿಸಿದ್ದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಎಂಎಲ್​ಸಿ ಅಮಿತ್ ಯಾದವ್ ಅವರ ಮನೆಯಲ್ಲಿ. ಅವರ ಸಂಬಂಧಿ ಪಂಕಜ್​ ಯಾದವ್ ಅವರ ಸ್ನೇಹಿತ ವಿನಯ್ ಯಾದವ್ ಅವರ ಜನ್ಮದಿನವನ್ನು ಶುಕ್ರವಾರ ರಾತ್ರಿ ಆ ಮನೆಯಲ್ಲಿ ಆಯೋಜಿಸಲಾಗಿತ್ತು.
ಅಲ್ಲಿ ಐವರು ಸೇರಿ ಆಚರಿಸುತ್ತಿದ್ದ ಜನ್ಮದಿನಾಚರಣೆ ಸಂದರ್ಭ ಪಂಕಜ್ ಯಾದವ್ ತನ್ನ ಬಳಿ ಇರುವ ಕಂಟ್ರಿಮೇಡ್ ಪಿಸ್ತೂಲ್ಅನ್ನು ಗೆಳೆಯರಿಗೆ ತೋರಿಸುತ್ತಿದ್ದಾಗ ಅಕಸ್ಮಾತ್ ಆಗಿ ಅದರಿಂದ ಗುಂಡು ಚಿಮ್ಮಿದೆ. ಪರಿಣಾಮ, ಅಲ್ಲಿದ್ದ ರಾಕೇಶ್ ರಾವತ್ ಎಂಬಾತ ಸಾವಿಗೀಡಾಗಿದ್ದಾನೆ.
ಪ್ರಕರಣ ಸಂಬಂಧ ಅಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಗನ್​ ಪಂಕಜ್​ಗೆ ಸೇರಿದ್ದು, ಅದರ ಮ್ಯಾಗಜಿನ್​ ಹಾಗೂ 3 ಕಾರ್ಟ್​ರಿಜ್​ಗಳನ್ನು ಕೂಡ ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸೋಮನ್ ವರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್​)
ಇದು ಖತರ್ನಾಕ್​ ಜೋಡಿಯ ಕಹಾನಿ! ಯುವಕ-ಯುವತಿಯ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ!

5 ವರ್ಷ ನಿಗೂಢವಾಗಿದ್ದ ಯುವತಿ ನಾಪತ್ತೆ ಪ್ರಕರಣ ರಹಸ್ಯ ಬಯಲು: ಕೊಲೆಗಾರ ಪತಿ ಸಿಕ್ಕಿ ಬಿದ್ದಿದ್ದೆ ರೋಚಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 11 =
Remember me
