ಕುರುಕ್ಷೇತ್ರ:ಹನ್ನೆರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಡ್ರಗ್ಸ್​ ನೀಡಿ ಅರ್ಧ ಎಚ್ಚರದ ಸ್ಥಿತಿಯಲ್ಲಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವೊಂದು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಿಂದ ವರದಿಯಾಗಿದೆ. ಬಾಲಕಿಯ ಸ್ನೇಹಿತೆಯ ಸೋದರಸಂಬಂಧಿ ಸೇರಿದಂತೆ ಐವರು ಯುವಕರು ಈ ಹೇಯ ಕೃತ್ಯ ಎಸಗಿದ್ದು, ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಹುಡುಕಾಟ ನಡೆದಿದೆ ಎನ್ನಲಾಗಿದೆ.
ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಹಳ್ಳಿಯೊಂದರ ನಿವಾಸಿ 17 ವರ್ಷದ ಬಾಲಕಿಯ ತಂದೆ ಫೆಬ್ರವರಿ 22 ರ ಬೆಳಿಗ್ಗೆ 7 ಗಂಟೆಗೆ ಆಕೆಯನ್ನು ಎಂದಿನಂತೆ ಶಾಲೆಗೆ ಡ್ರಾಪ್ ಮಾಡಿದ್ದರು. ಶಾಲೆಯ ನಂತರ 1.30 ರಿಂದ 4 ಗಂಟೆಯವರೆಗೆ ಇಂಗ್ಲೀಷ್ ಸಂಭಾಷಣೆ ಕಲಿಯಲು ಕೋಚಿಂಗ್ ಸೆಂಟರ್​ಗೆ ಹೋಗಿಬರುತ್ತಿದ್ದ ಬಾಲಕಿ ಆ ದಿನ ಸಂಜೆಯಾದರೂ ಬರಲಿಲ್ಲ. ಪಾಲಕರು ಕೋಚಿಂಗ್ ಸೆಂಟರ್​ಗೆ ಹೋಗಿ ವಿಚಾರಿಸಿದಾಗ ಅಂದು ಆಕೆ ಕ್ಲಾಸಿಗೆ ಹೋಗೇ ಇಲ್ಲ ಎಂದು ತಿಳಿದುಬಂತು.
ಇದನ್ನೂ ಓದಿ:ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!
ಮಗಳನ್ನು ಎಲ್ಲೆಡೆ ಹುಡುಕಿ ಸುಸ್ತಾದ ಪಾಲಕರು ಪೊಲೀಸರಿಗೆ ದೂರು ಸಲ್ಲಿಸಲು ಹೊರಟಿದ್ದಾಗ, 7 ಗಂಟೆಯ ವೇಳೆಗೆ ಇಬ್ಬರು ಹುಡುಗರು ಬೈಕಿನಲ್ಲಿ ಆಕೆಯನ್ನು ಕೂರಿಸಿಕೊಂಡು ಬರುತ್ತಿದ್ದುದು ಕಂಡುಬಂದಿದೆ. ಯೂನಿಫಾರಂನಲ್ಲಿದ್ದ ಮಗಳನ್ನು ಗುರುತಿಸಿದ ತಂದೆ ಬೈಕ್ ನಿಲ್ಲಿಸಿದಾಗ ಹಿಂದೆ ಕೂತಿದ್ದ ಹುಡುಗನು ಕಂಟ್ರಿ ಪಿಸ್ತೋಲನ್ನು ಆಕೆಯ ತಲೆಗೆ ಹಿಡಿದಿದ್ದ. ಆತನೊಂದಿಗೆ ಸೆಣಸಾಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ರಕ್ಷಿಸಲಾಯಿತು ಎನ್ನಲಾಗಿದೆ.
ನಡೆದದ್ದೇನು ?: ಬಾಲಕಿಯು ಶಾಲೆಯ ನಂತರ ಕೋಚಿಂಗ್ ಸೆಂಟರ್​ಗೆ ಹೋಗುವ ಮೊದಲು ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದಾಳೆ. ಅಲ್ಲಿ ತಲೆ ಸುತ್ತಿದಂತೆ ಆದಾಗ, ಸ್ನೇಹಿತೆ ತನ್ನ ಕಸಿನ್ ಆಕೆಯನ್ನು ಬೈಕ್​ ಮೇಲೆ ಮನೆಗೆ ಬಿಟ್ಟುಬರುವುದಾಗಿ ಕಳುಹಿಸಿದ್ದಾಳೆ. ಆದರೆ ಆತ ಅವಳನ್ನು ಕುರುಕ್ಷೇತ್ರದ ಉಮ್ರಿ ಚೌಕ್​ ಬಳಿಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅದಾಗಲೇ ನಾಲ್ವರು ಯುವಕರು ಬಂದು ಕಾಯುತ್ತಿದ್ದು, ಎಲ್ಲರೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಪರಾಧ ಎಸಗುವ ವೇಳೆಯಲ್ಲಿ ಬಾಲಕಿಗೆ ಮಾದಕ ದ್ರವ್ಯಗಳನ್ನು ನೀಡಲಾಗಿತ್ತು ಎಂದು ತನಿಖೆ ನಡೆಸುತ್ತಿರುವ ಸಬ್​ಇನ್ಸ್​ಪೆಕ್ಟರ್ ಪ್ರವೀನ್ ಕೌರ್ ಹೇಳಿದ್ದಾರೆ.
ಇದನ್ನೂ ಓದಿ:8 ತಿಂಗಳ ಹಿಂದೆ ಕಳೆದುಹೋಗಿದ್ದ, ಒಂದೇ ಒಂದು ಪದ ಉಸುರಿದ್ದರಿಂದ ಮತ್ತೆ ಮನೆ ಸೇರಿದ!; ಅಪರಿಚಿತನಿಗೆ ನೆರವಾದ ಪೊಲೀಸ್​
ಸಂತ್ರಸ್ತೆಯ ತಂದೆಯ ದೂರಿನ ಮೇಲೆ ಎಫ್​.ಐ.ಆರ್​. ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. 18 ವರ್ಷದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಅಬ್ಸರ್ವೇಷನ್ ಹೋಂಗೆ ಕಳುಹಿಸಲಾಗಿದೆ. ಇನ್ನುಳಿದ ಈರ್ವರು ಆರೋಪಿಗಳ ಪತ್ತೆ ಕಾರ್ಯ ಸಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಸ್ನೇಹಿತೆಯ ಪಾತ್ರ ಏನಾಗಿತ್ತು ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಕುರುಕ್ಷೇತ್ರ ಎಸ್ಪಿ ಹಿಮಾಂಶು ಗಾರ್ಗ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ
“ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು
ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
