ಲಖನೌ:ಬಸ್ಸು, ಕಾರು, ಲಾರಿ, ಬೈಕ್​ ಸೇರಿದಂತೆ ಮುಂತಾದ ವಾಹನಗಳು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕುವದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ರೈಲೊಂದು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಿತು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಟ್ರಾಫಿಕ್​ ಜಾಮ್​ ಅನ್ನೋದು ಭಾರತ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು. ಫ್ಲೈಓವರ್​, ರಸ್ತೆ ಅಗಲೀಕರಣದಂತಹ ಅನೇಕ ಪರಿಹಾರಗಳನ್ನು ಕಂಡುಕೊಂಡಿದ್ದರೂ ಟ್ರಾಫಿಕ್​ ಜಾಮ್​ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಪ್ರಮುಖ ನಗರಗಳಲ್ಲಿ ಟ್ರಾಫಿಕ್​ ಸಮಸ್ಯೆಯಿಂದ ಅನೇಕ ತೊಂದರೆಗಳು ಕೂಡ ಎದುರಾಗುತ್ತಿವೆ. ಅಚ್ಚರಿಯ ಸಂಗತಿಯೇನೆಂದರೆ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ನಿಂದ ವಾರ್ಷಿಕ 19 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬ ಸಂಶೋಧನಾ ವರದಿಯು ಕೂಡ ಬಹಿರಂಗವಾಗಿದೆ.
ಇದನ್ನೂ ಓದಿ:ತಮಿಳುನಾಡು ಪಿರಿಪಿರಿ: ಸರ್ಕಾರಕ್ಕೆ ಉಭಯಸಂಕಟ; ಐಎನ್​ಡಿಐಎ ಮಿತ್ರ ಡಿಎಂಕೆ ಪಟ್ಟು ಕಾಂಗ್ರೆಸ್​ಗೆ ಇಕ್ಕಟ್ಟು
ಅನೇಕ ಜನರು ದೇಶದಲ್ಲಿ ವಿವಿಧ ರೀತಿಯ ಟ್ರಾಫಿಕ್ ಜಾಮ್ ಅನ್ನು ನೋಡಿದ್ದಾರೆ. ಆದರೆ, ಟ್ರಾಫಿಕ್ ಜಾಮ್​ನಲ್ಲಿ ರೈಲು ಸಿಕ್ಕಿಹಾಕಿಕೊಂಡಿರುವ ಘಟನೆ ಇದೀಗ ವೈರಲ್ ಆಗಿದೆ. ಹೇಳಬೇಕೆಂದರೆ ರೈಲ್ವೆ ಕ್ರಾಸಿಂಗ್​ನಲ್ಲಿ ರೈಲು ಆಗಮಿಸುವಾಗ ವಾಹನಗಳನ್ನು ತಡೆದು ನಿಲ್ಲಿಸಿ, ರೈಲಿಗೆ ಹೋಗಲು ದಾರಿ ಮಾಡಿಕೊಡಲಾಗುತ್ತದೆ. ಆದರೆ, ಕ್ರಾಸಿಂಗ್​ನಲ್ಲಿ ರೈಲೇ ಕೆಲ ಕಾಲ ನಿಂತು ವಾಹನಗಳಿಗೆ ಹೋಗಲು ದಾರಿ ಮಾಡಿಕೊಟ್ಟ ಪ್ರಸಂಗ ಇದಾಗಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ವಾರಣಾಸಿಯ ಬನಾರಸ್​ನಲ್ಲಿ. ಭಾರೀ ಪ್ರಮಾಣದ ವಾಹನಗಳು ರೈಲ್ವೆ ಕ್ರಾಸಿಂಗ್​ನಲ್ಲಿ ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್​ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅದೇ ಸಮಯದಲ್ಲಿ ಬರುತ್ತಿದ್ದ ರೈಲನ್ನು ನಿಲ್ಲಿಸಿ ವಾಹನಗಳು ಹೋಗಲು ದಾರಿ ಮಾಡಿಕೊಡಲಾಗಿದೆ. ಪೊಲೀಸ್​ ಟ್ರಾಫಿಕ್​ ಕ್ಲಿಯರ್​ ಮಾಡಲು ಹರಸಾಹಸ ಮಾಡುತ್ತಿರುವ ದೃಶ್ಯವನ್ನು ನೀವು ವಿಡಿಯೋದಲ್ಲಿ ನೋಡಬಹುದು.
India is not for the beginners 🤣😂pic.twitter.com/sSFLZWS3BK
— BALA (@erbmjha)August 13, 2023

ಬಾಲಾ ಎಂಬ ಹೆಸರಿನ ಎಕ್ಷ್​ (ಟ್ವಿಟರ್​) ಖಾತೆಯಲ್ಲಿ ಆ. 13ರಂದು ವಿಡಿಯೋ ಪೋಸ್ಟ್​ ಮಾಡಲಾಗಿದೆ. ಕೇವಲ ಮೂರೇ ದಿನದಲ್ಲಿ ಈ ವಿಡಿಯೋವನ್ನು 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್​ ಮಾಡಿದ್ದಾರೆ.(ಏಜೆನ್ಸೀಸ್​)
ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರು ಕುಡಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ….

ಆರ್​ಟಿಒ ಕಚೇರಿಗಳಲ್ಲಿ ಖಾಸಗಿ ದರ್ಬಾರ್!; ಬೆಂಗಳೂರು, ಮೈಸೂರು, ದಾವಣಗೆರೆಯಲ್ಲಿ ಎಫ್​ಐಆರ್​

ತಮಿಳುನಾಡು ಪಿರಿಪಿರಿ: ಸರ್ಕಾರಕ್ಕೆ ಉಭಯಸಂಕಟ; ಐಎನ್​ಡಿಐಎ ಮಿತ್ರ ಡಿಎಂಕೆ ಪಟ್ಟು ಕಾಂಗ್ರೆಸ್​ಗೆ ಇಕ್ಕಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
