ಹೈದರಾಬಾದ್​:ಹುಟ್ಟುಹಬ್ಬದ ದಿನ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸೇರಿ ಸಂಭ್ರಮಾಚರಣೆ ಮಾಡಬೇಕಿದ್ದ ಯುವತಿಯೊಬ್ಬಳು ಅದೇ ದಿನ ಸಾವಿನ ಹಾದಿ ಹಿಡಿದಿರುವ ಮನಕಲಕುವ ಘಟನೆ ಹೈದರಾಬಾದ್​ನ ಕುಕ್ಕಟಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಳನ್ನು ಹರ್ಷಿತಾ (20) ಅಲಿಯಾಸ್​ ಹನಿ ಎಂದು ಗುರುತಿಸಲಾಗಿದೆ. ಈಕೆ ಆಂಧ್ರ ಪ್ರದೇಶದ ಗುಂಟೂರು ಮೂಲದವಳು. ಸಾಯಿಕಿರಣ್​ ಮತ್ತು ನರ್ಮದಾ ದಂಪತಿ ಒಬ್ಬಳೇ ಪುತ್ರಿಯಾಗಿದ್ದ ಹರ್ಷಿತಾ, ಸಿಎ ಅಧ್ಯಯನ ಮಾಡುತ್ತಿದ್ದಳು. ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಬುಧವಾರ ಸಂಜೆ ಸಾಯಿಕಿರಣ್​ ಮತ್ತು ನರ್ಮದಾ ನೆಲ್ಲೂರಿಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ದಂಪತಿ ಮನೆಗೆ ಬಂದಾಗ ಬಾಗಿಲು ಮುಚ್ಚಿರುವುದನ್ನು ಗಮನಿಸಿದ್ದಾರೆ. ಎಷ್ಟೇ ಬಡಿದರು ಮಗಳು ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಾಯಿಕುಮಾರ್​ ಮನೆಯ ಮಾಲೀಕನ ಸಹಾಯದಿಂದ ಬಾಗಿಲು ತೆಗೆದು, ಬೆಡ್​ರೂಮ್​ಗೆ ತೆರಳಿದಾಗ ಮಗಳು ಹರ್ಷಿತಾ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು.
ಹುಟ್ಟು ಹಬ್ಬದ ದಿನವೇ ಮಗಳು ಮೃತಪಟ್ಟಿದ್ದಾಳೆ. ಹುಟ್ಟುಹಬ್ಬದ ದಿನ ತನ್ನ ಫ್ರೆಂಡ್ಸ್​ ಜೊತೆ ಸಿನಿಮಾಗೆ ಹೋಗಿ ಬಂದಿದ್ದಳು. ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕುಕ್ಕಟಪಲ್ಲಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿನ ಒತ್ತಡದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
3 ನಿಮಿಷದಲ್ಲಿ ಮೂರೂವರೆ ಕೆಜಿ ಮೊಸರು ತಿಂದು ದಾಖಲೆ!

ಮರಕ್ಕೆ ಕಾರು ಡಿಕ್ಕಿ: ಮೆಸ್ಕಾಂ ಜೆಇ ಸೇರಿ ಇಬ್ಬರ ದುರ್ಮರಣ, ಮದುವೆ ಮನೆಯಲ್ಲಿ ಸೂತಕ

ಕರ್ನಾಟಕ ಕಾಂಗ್ರೆಸ್​ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ… ಎನ್ನುತ್ತಲೇ ಜಮೀರ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 15 =
Remember me
