ನವದೆಹಲಿ:ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನ ಐದು ದಿನಗಳ ಕಾಲ ನಡೆಯಲಿದೆ. ಇಂದು ಹಳೆಯ ಸಂಸತ್​ ಭವನದಲ್ಲಿ ಆರಂಭವಾಗಿರುವ ಕಲಾಪ ನಾಳೆ ನೂತನ ಸಂಸತ್​ ಭವನಕ್ಕೆ ಸ್ಥಳಾಂತರವಾಗಲಿದೆ. ಹಳೆಯ ಸಂಸತ್ ಕಟ್ಟಡವು ಸಂವಿಧಾನದ ಅಂಗೀಕಾರ ಸೇರಿದಂತೆ ಕೆಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ, ಇನ್ನು ಮುಂದೆ ಸರ್ಕಾರದ ಕಾರ್ಯ ಚಟುವಟಿಕೆಗಳು ಹೊಸ ಕಟ್ಟಡದಲ್ಲಿ ನಡೆಯಲಿವೆ. ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ ಹಳೆಯ ಸಂಸತ್​ ಕಟ್ಟಡ ಇನ್ಮುಂದೆ ಏನಾಗಲಿದೆ ಎಂಬುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಹಳೆಯ ಸಂಸತ್​ ಭವನದ ನಿರ್ಮಾಣ 1927ರಲ್ಲಿ ಪೂರ್ಣಗೊಂಡಿತು. ಅದಕ್ಕೆ ಇದೀಗ 96 ವರ್ಷಗಳು. ಇಂದಿನ ಅವಶ್ಯಕತೆಗಳಿಗೆ ಈ ಕಟ್ಟಡ ಅಸಮರ್ಪಕವಾಗಿದೆ ಎಂದು ಮಾತುಗಳು ಹಲವು ವರ್ಷಗಳಿಂದ ಕೇಳಿಬಂದಿತು. ಹೊಸ ಸಂಸತ್​ ಭವನ ನಿರ್ಮಾಣವಾಗಿದ್ದು, ಇನ್ನು ಮುಂದೆ ಯಾವುದೇ ಕೊರತೆ ಇರುವುದಿಲ್ಲ. ಆದರೆ ಹಳೆಯ ಸಂಸತ್​ ಭವನದ ನೆನಪುಗಳು ಮಾತ್ರ ಎಂದಿಗೂ ಮಾಸುವುದಿಲ್ಲ.
ಇಂದು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳೆಯ ಸಂಸತ್​ ಭವನದ ಪ್ರತಿಯೊಂದು ಇಟ್ಟಿಗೆಗೂ ಕೃತಜ್ಞತೆ ಸಲ್ಲಿಸಿದರು ಮತ್ತು ಸಂಸದರು ಹೊಸ ಭರವಸೆ ಮತ್ತು ನಂಬಿಕೆಯೊಂದಿಗೆ ಹೊಸ ಸಂಸತ್​ ಭವನವನ್ನು ಪ್ರವೇಶಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಕಲಬುರಗಿಯಲ್ಲಿ ಚೌತಿ ಸಂಭ್ರಮ ಬಲು ಜೋರು : ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಎಲ್ಲಡೆ ಭರ್ಜರಿ ತಯಾರಿ
ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯದ ಹೋರಾಟಕ್ಕೆ ಮಾತ್ರವಲ್ಲ, ಅದರ ನಂತರ ದೇಶದ ಉದಯಕ್ಕೂ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಹಳೇ ಸಂಸತ್​ ಕಟ್ಟಡವನ್ನು ಕೆಡವಲಾಗುವುದಿಲ್ಲ ಮತ್ತು ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಸ್ಥಳಗಳನ್ನು ಒದಗಿಸಲು ಅದನ್ನು ಮಾರ್ಪಾಡು ಮಾಡಲಾಗುವುದು ಎಂದು ತಿಳಿದುಬಂದಿದೆ.
ಇದಿಷ್ಟೇ ಅಲ್ಲದೆ, ದೇಶದ ಪುರಾತತ್ವ ಆಸ್ತಿಯಾಗಿರುವುದರಿಂದ ಐತಿಹಾಸಿಕ ಕಟ್ಟಡವನ್ನು ಸಂರಕ್ಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಹಳೆಯ ಕಟ್ಟಡದ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ.
ಹೊಸ ಸಂಸತ್ ಕಟ್ಟಡವನ್ನು ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ಬೃಹತ್ ಕಟ್ಟಡದಲ್ಲಿ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದು. ಉಭಯ ಸದನಗಳ ಜಂಟಿ ಅಧಿವೇಶನಕ್ಕಾಗಿ 1,280 ಸಂಸದರಿಗೆ ಲೋಕಸಭೆಯ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂಬ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ ಮತ್ತು ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳು ಇವೆ.(ಏಜೆನ್ಸೀಸ್​)
ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಹೆಸರು ತಳಕು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟನೆ ಹೀಗಿದೆ…

ಬಾಲಿವುಡ್​ ಸ್ಟಾರ್​ ನಟನ ಚಿತ್ರಕ್ಕೆ ಸಮಂತಾ ನಾಯಕಿ?

CWRC ಆದೇಶದಂತೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು CWMA ಸಭೆಯಲ್ಲಿ ಕರ್ನಾಟಕಕ್ಕೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + sixteen =
Remember me
