ನವದೆಹಲಿ:ಜೀವನ ಅಂದಮೇಲೆ ಅಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಅದರಲ್ಲೂ ಗಂಡ-ಹೆಂಡತಿಯ ವೈವಾಹಿಕ ಜೀವನ ಒಂದು ರೀತಿ ರೈಲಿನ ಹಳಿ ಇದ್ದಂತೆ. ಯಾವುದಾದರೂ ಒಂದು ಹಳಿಗೆ ಹಾನಿಯಾದರೂ ವೈವಾಹಿಕ ಜೀವನದಲ್ಲಿ ಬಿರುಗಾಳಿಯೇ ಏಳುತ್ತದೆ. ಕ್ಷುಲಕ ಕಾರಣಗಳಿಗೂ ವೈವಾಹಿಕ ಜೀವನ ಹಾಳಾದಂತಹ ಎಷ್ಟೋ ಉದಾಹರಣೆಗಳಿವೆ. ಹೀಗಾಗಿಯೇ ಗಂಡ-ಹೆಂಡತಿ ಸಂಬಂಧದ ಬಗ್ಗೆ ಅನೇಕ ಚರ್ಚೆಗಳು ಮತ್ತು ಜೋಕ್ಸ್​ಗಳು ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರ ಪ್ರಮುಖ ವಿಚಾರವೂ ಕೂಡ ಗಂಡ-ಹೆಂಡತಿಯ ಜಗಳವೇ ಆಗಿದೆ.
ಇದೀಗ ಗಂಡ-ಹೆಂಡತಿ ಸಂಬಂಧಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪತ್ನಿಯ ಕೈಯಿಂದ ಗಂಡನಿಗೆ ಕೊಡಲಾಗದ ಒಂದೇ ಒಂದು ವಸ್ತು ಯಾವುದು ಎಂಬ ಪಾಕಿಸ್ತಾನಿ ಮಹಿಳೆಯ ಪ್ರಶ್ನೆಗೆ ಯುವಕನೊಬ್ಬ ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ:ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು
ದಯವಿಟ್ಟು ನಾನು ಕೇಳುವ ಸಾಮಾನ್ಯ ಪ್ರಶ್ನೆಗಳು ಉತ್ತರಿಸಿ, ಪತ್ನಿಯು ತನ್ನ ಗಂಡನಿಗೆ ಕೊಡಲಾಗದ ಒಂದೇ ಒಂದು ವಸ್ತು ಯಾವುದು ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಕೆಲ ಸೆಕೆಂಟ್​ ಯೋಚಿಸಿ ಉತ್ತರಿಸುವ ಯುವಕ “ಶಾಂತಿ” ಎಂದು ಹೇಳುತ್ತಾನೆ. ಪತ್ನಿಯರು ತಮ್ಮ ಗಂಡದಿರಿಗೆ ಶಾಂತಿ ಅಥವಾ ನೆಮ್ಮದಿಯನ್ನು ನೀಡಲಾರರು ಎನ್ನುತ್ತಾನೆ. ಈ ಉತ್ತರ ಕೇಳಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದು, ಕಾಮೆಂಟ್​ಗಳ ಮಹಾಪೂರವನ್ನು ಹರಿಸುತ್ತಿದ್ದಾರೆ. ಯುವಕನ ಉತ್ತರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಅಬ್ಬಾ ಎಂಥಾ ಉತ್ತರ ನೀಡಿದಿರಿ ಬ್ರೋ, ಇದು ನೂರಕ್ಕೆ ನೂರು ಸತ್ಯ. ನಾವು ಸುಮ್ಮನಿದ್ದರೂ ಪತ್ನಿಯರು ಸುಮ್ಮನೆ ಇರಲು ಬಿಡುವುದಿಲ್ಲ ಅಂತ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಮಾಡಿದ್ದಾರೆ. ಇನ್ನು ಕೆಲವರು ಮಹಿಳೆಯರ ಪರ ಅಭಿಪ್ರಾಯ ವ್ಯಕ್ತಪಡಿಸಿ, ಯುವಕನ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ವಿಡಿಯೋ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
A post shared by FuNnY ZoNe (@funny__baba__100k)

ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​

ವೃದ್ಧನನ್ನು ವರಿಸಿದ ಯುವತಿ! ವಿಡಿಯೋ ವೈರಲ್​, ಕಾಮೆಂಟ್​ನಲ್ಲಿ ನೋಡಲಾಗ್ತಿಲ್ಲ ನೆಟ್ಟಿಗರ ಗೋಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
