ವಿಶ್ವ ಆರೋಗ್ಯಸಂಸ್ಥೆ ಡೇಟಾ ಪ್ರಕಾರ ಭಾರತ ದಲ್ಲಿ 2020&2021ರಲ್ಲಿ 47 ಲಕ್ಷ ಸಾವು ಸಂಭವಿಸಿದೆ. ಇದು ಜಗತ್ತಿನ ಬೇರಾವುದೇ ದೇಶಕ್ಕೆ ಹೋಲಿಸಿದರೆ ಗರಿಷ್ಠ ಪ್ರಮಾಣದ್ದು. ಆದರೆ ಇತರ ದೇಶಗಳ ಜನಸಂಖ್ಯೆ ಮತ್ತು ಸಾವಿನ ಸಂಖ್ಯೆಯ ಅನುಪಾತದ ತುಲನೆ ಮಾಡಿದರೆ ಭಾರತದ ನಿರ್ವಹಣೆ ಉತ್ತಮವಾಗಿದೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ 47.4 ಲಕ್ಷ ದೊಡ್ಡ ಸಂಖ್ಯೆ ಅಲ್ಲ. ಇದು ಮಧ್ಯಮ ಪ್ರಮಾಣ ಎಂದು ಪರಿಣತರು ಹೇಳಿದ್ದಾರೆ.
ಪೆರು ಗರಿಷ್ಠ ಸಂಖ್ಯೆ10 ಕೋಟಿ ಜನಸಂಖ್ಯೆಗಿಂತ ಹೆಚ್ಚಿರುವ ರಾಷ್ಟ್ರಗಳಲ್ಲಿ ಈ ಅವಧಿಯಲ್ಲಿ ಸಂಭವಿಸಿದ ಸಾವಿನ ಲೆಕ್ಕ ನೋಡಿದರೆ ಪೆರುವಿನಲ್ಲಿ ಗರಿಷ್ಠ ಪ್ರಮಾಣ ಗೋಚರಿಸಿದೆ. ಇಲ್ಲಿ ಲಕ್ಷ ಜನಸಂಖ್ಯೆಗೆ 437 ಸಾವು ಸಂಭವಿಸಿದೆ. ಭಾರತದಲ್ಲಿ ಲಕ್ಷ ಜನಸಂಖ್ಯೆಗೆ 171 ಸಾವು ಸಂಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರ ಪ್ರಕಾರವೇ ಬ್ರೆಜಿಲ್​ನಲ್ಲಿ ಲಕ್ಷ ಜನಸಂಖ್ಯೆಗೆ 160 ಸಾವು ಸಂಭವಿಸಿದ್ದು. ಇದಕ್ಕಿಂತ ಭಾರತದ್ದು ತುಸು ಹೆಚ್ಚು. ರಷ್ಯಾದ ಸಾವಿನ ಸಂಖ್ಯೆ ಲಕ್ಷಕ್ಕೆ 367 ಇದೆ. ದಣ ಆಫ್ರಿಕಾ ಮತ್ತು ಇಂಡೋನೇಷ್ಯಾಕ್ಕಿಂತ ಭಾರತದಲ್ಲಿ ಸಾವು ಕಡಿಮೆ ಸಂಭವಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 8 =
Remember me
