ನೈತಿಕ ಸಮಿತಿಯ ಅಧ್ಯಕ್ಷರು ಒಂದು ವರ್ಷದ ಅವಧಿಗಾಗಿ ಸದಸ್ಯರನ್ನು ನೇಮಿಸುತ್ತಾರೆ. ಒಂದು ವರ್ಷದ ಬಳಿಕ ಸದಸ್ಯರು ಬದಲಾಗುತ್ತಾರೆ. ಸ್ವರೂಪದಲ್ಲಿ, ಇದು ಜಂಟಿ ಸದನ ಸಮಿತಿಯಂತೆ ಕಂಡುಬಂದರೂ, ಅದರಷ್ಟು ಅಧಿಕಾರವನ್ನು ಹೊಂದಿಲ್ಲ ಎಂಬುದು ಸ್ಪಷ್ಟ. ವಿಚಾರಣೆ ನಡೆಸಿ, ವರದಿ ನೀಡುವ ಪಾತ್ರಕ್ಕೆ ಇದು ಸೀಮಿತ.
ಬಿಜೆಪಿ ಸಂಸದ ವಿನೋದಕುಮಾರ್ ಸೋನಕರ್ ಪ್ರಸ್ತುತ ನೈತಿಕ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯ ಸದಸ್ಯರಾಗಿ ಬಿಜೆಪಿಯ ವಿಷ್ಣುದತ್ತ ಶರ್ವ, ಸುಮೇದಾನಂದ ಸರಸ್ವತಿ, ಅಪರಾಜಿತಾ ಚರಂಗಿ, ಡಾ.ರಾಜದೀಪ್ ರಾಯ್, ಸುನೀತಾ ದುಗ್ಗಲ್ ಮತ್ತು ಸುಭಾಷ್ ಭಾಮ್ರೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್​ನಿಂದ ವಿ.ವೈಥಿಲಿಂಗಮ್ ಎನ್.ಉತ್ತಮಕುಮಾರ್ ರೆಡ್ಡಿ, ಬಾಲಾಸೋವರಿ ಮತ್ತು ಪ್ರಣಿತಾ ಕೌರ್ ಇದ್ದಾರೆ. ಶಿವಸೇನೆಯ ಸಂಸದ ಹೇಮಂತ್ ಗೋಡ್ಸೆ, ಸಂಯುಕ್ತ ಜನತಾದಳದ ಗಿರಧಾರಿ ಯಾದವ್, ಸಿಪಿಎಂನ ಪಿ.ಆರ್.ನಟರಾಜನ್, ಬಹುಜನ ಸಮಾಜ ಪಕ್ಷದ ಡ್ಯಾನಿಶ್ ಅಲಿ ಸದಸ್ಯರಾಗಿದ್ದಾರೆ.
ಕಳೆದ 20 ವರ್ಷಗಳ ಅವಧಿಯನ್ನು ಅವಲೋಕಿಸಿದರೆ, ನೈತಿಕ ಸಮಿತಿಯ ಮುಂದೆ ಹಲವು ಸಮಸ್ಯೆಗಳು ಬಂದಿವೆ. ಆದರೆ, ಅವು ಸಣ್ಣ ಪ್ರಮಾಣದ ಸಮಸ್ಯೆಗಳಾಗಿದ್ದವು. ಇದೇ ಮೊದಲ ಬಾರಿ ‘ಕಾಸಿಗಾಗಿ ಪ್ರಶ್ನೆ’ಯಂಥ ಗಂಭೀರ ಪ್ರಕರಣದ ವಿಚಾರಣೆಯನ್ನು ನೈತಿಕ ಸಮಿತಿ ಮಾಡಿದೆ. ಸಾಮಾನ್ಯವಾಗಿ, ಗಂಭೀರ ಪ್ರಕರಣಗಳನ್ನು ಜಂಟಿ ಸದನ ಸಮಿತಿಗೆ ಒಪ್ಪಿಸುವುದು ವಾಡಿಕೆ.
ಲೋಕಸಭೆಯಲ್ಲಿ ವರದಿ ಮಂಡನೆ:ಸಂಸತ್ತಿನ ಮುಂದಿನ ಅಧಿವೇಶನ ಆರಂಭವಾಗುತ್ತಿದ್ದಂತೆ ಸಮಿತಿಯ ಅಧ್ಯಕ್ಷ ವಿನೋದಕುಮಾರ್ ಸೋನಕರ್ ಸದನದಲ್ಲಿ ವರದಿಯನ್ನು ಮಂಡಿಸುತ್ತಾರೆ. ಆ ಬಳಿಕ ವರದಿಯ ಬಗ್ಗೆ ವಿಸõತ ಚರ್ಚೆಗೆ ಲೋಕಸಭಾಧ್ಯಕ್ಷರು ಅನುವು ಮಾಡಿಕೊಡುತ್ತಾರೆ. ಚರ್ಚೆಯ ಬಳಿಕ, ಸರ್ಕಾರದ ಪ್ರಸ್ತಾವನೆಯ ಮೇಲೆ ಮತದಾನ ನಡೆಯುತ್ತದೆ. ಹೆಚ್ಚು ಮತಗಳು ಸರ್ಕಾರದ ಪರವಾಗಿ ಬಿದ್ದಲ್ಲಿ, ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಲಾಗುತ್ತದೆ.
ನಿಯಮಗಳಿಗೆ ತಿದ್ದುಪಡಿ:ಈಗಿರುವ ಸೀಮಿತ ಅಧಿಕಾರವ್ಯಾಪ್ತಿ ಮತ್ತು ನಿಯಮಗಳಿಂದ ಗಂಭೀರ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ, ನೈತಿಕ ಸಮಿತಿಗೆ ಸಂಸತ್ತು ಹೊಸ ನಿಯಮಗಳನ್ನು ರೂಪಿಸಬೇಕು, ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಬೇಕು ಎಂದು ನೈತಿಕ ಸಮಿತಿಯು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಮನವಿ ಮಾಡಿದೆ. ಆದರೆ, 2024ರ ಮೇ ತಿಂಗಳಲ್ಲಿ 17ನೇ ಲೋಕಸಭೆಯ ಅವಧಿ ಕೊನೆಗೊಳ್ಳಲಿರುವುದರಿಂದ, ಇಷ್ಟು ಕಡಿಮೆ ಸಮಯದೊಳಗೆ ನೈತಿಕ ಸಮಿತಿಗಾಗಿ ಹೊಸ ನಿಯಮಗಳನ್ನು ರೂಪಿಸುವುದು ಕಷ್ಟಸಾಧ್ಯ ಎಂಬುದು ತಜ್ಞರ ಅಂಬೋಣ.
ಕೋರ್ಟ್​ಗೆ ಹೋಗಬಹುದೇ?:ಲೋಕಸಭೆಯಿಂದ ಉಚ್ಚಾಟಿಸಿದ ಬಳಿಕವೂ, ನೈತಿಕ ಸಮಿತಿಯ ನಿರ್ಣಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮೊಯಿತ್ರಾ ಅವರಿಗೆ ಅವಕಾಶವಿದೆ. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿದರೆ, ಕೋರ್ಟ್ ಎಲ್ಲ ಸಾಕ್ಷ್ಯಗಳನ್ನು ಮತ್ತು ನೈತಿಕ ಸಮಿತಿಯ ವರದಿಯನ್ನು ಪರಿಶೀಲಿಸಿ ತೀರ್ಪು ನೀಡುತ್ತದೆ.
ರಾಜಾರಾಮ್ ಪಾಲ್ ಪ್ರಕರಣ:ಸಂಸದರ ನಿಧಿ ದುರ್ಬಳಕೆ ಹಾಗೂ ಇತರ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ರಾಜಾರಾಮ್ ಪಾಲ್ ಸೇರಿದಂತೆ 10 ಲೋಕಸಭಾ ಸದಸ್ಯರನ್ನು ಉಚ್ಚಾಟಿಸಲಾಗಿತ್ತು. ಈ ನಿರ್ಣಯವನ್ನು ಪಾಲ್ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ‘ಸಂಸತ್​ಗೆ ತನ್ನ ಸದಸ್ಯರನ್ನು ಉಚ್ಚಾಟಿಸುವ ಸಂಪೂರ್ಣ ಅಧಿಕಾರವಿದೆ’ ಎಂದು ಸುಪ್ರೀಂ ಕೋರ್ಟ್​ನ ನಾಲ್ವರು ಸದಸ್ಯರ ನ್ಯಾಯಪೀಠ ಹೇಳಿತ್ತು. ಅಲ್ಲದೆ, ಸಂವಿಧಾನ ವಿಧಿಸಿರುವ ಮಿತಿಗಳೊಳಗೆ ಕಾರ್ಯನಿರ್ವ ಹಿಸುವಂತೆಯೂ ಸೂಚಿಸಿತ್ತು.
ಅಮರಿಂದರ್ ಸಿಂಗ್ ಪ್ರಕರಣ:ವಿಶೇಷ ತನಿಖಾ ಸಮಿತಿಯ ವರದಿ ಅನುಸಾರ ಪಂಜಾಬ್ ವಿಧಾನಸಭೆ ಸದಸ್ಯತ್ವದಿಂದ ಅಮ ರಿಂದರ್ ಸಿಂಗ್ ಅವರನ್ನು ಉಚ್ಚಾಟಿಸಲಾಗಿತ್ತು. ಆದರೆ, 2010ರಲ್ಲಿ ಸುಪ್ರೀಂ ಕೋರ್ಟ್​ನ ಐವರು ಸದಸ್ಯರಿದ್ದ ಸಾಂವಿಧಾನಿಕ ಪೀಠವು, ಅಮರಿಂದರ್ ಸಿಂಗ್ ಉಚ್ಚಾಟನೆ ಅಸಾಂವಿಧಾನಿಕ ಎಂದು ತೀರ್ಪು ನೀಡಿತು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಅವರ ಮುಂದಿರುವ ಸವಾಲುಗಳು ಯಾವುವು?

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಹಿಂದೆ ಏನೇನಿದೆ ಲೆಕ್ಕಾಚಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
