|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಡಿ.14ರಂದು ಕರೆದಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಳ್ಳಲಿರುವ ನಿಲುವೇನು? ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಅಮಿತ್ ಷಾ ಎರಡು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿರುವ ಸುದ್ದಿ ಬರುತ್ತಿದ್ದಂತೆ ರಾಜ್ಯ ರಾಜಕೀಯ ವಲಯದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅತ್ಯಂತ ಎಚ್ಚರಿಕೆಯ ಹೆಜ್ಜೆಯನ್ನಿಡದಿದ್ದರೆ ಐತಿಹಾಸಿಕ ಪ್ರಮಾದಕ್ಕೆ ಕಾರಣ ಆಗಬಹುದೆಂಬ ಆತಂಕ ಕೇವಲ ಗಡಿಯಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಮಹಾಜನ್ ವರದಿಯೇ ಅಂತಿಮವೆಂಬ ನಿರ್ಣಯವನ್ನು ರಾಜ್ಯ ವಿಧಾನಮಂಡಲದಲ್ಲಿ ಈಗಾಗಲೆ ಐದು ಬಾರಿ ಅಂಗೀಕರಿಸಲಾಗಿದೆ. ಆ ನಿಲುವಿಗೆ ಪ್ರತ್ಯೇಕವಾದ ನಿಲುವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಯೂ ಮುಖ್ಯಮಂತ್ರಿ ಬೊಮ್ಮಾಯಿ ಇಲ್ಲ. ಆದರೆ, ಅದೇ ನಿಲುವಿಗೆ ಅಂಟಿಕೊಳ್ಳುವುದಕ್ಕೂ ಅವರು ಸಿದ್ಧರಿಲ್ಲ.
ಅಮಿತ್ ಷಾ ಸಭೆ ಕರೆದಿದ್ದರೂ ಸರ್ಕಾರ ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸುವ ಗೋಜಿಗೆ ಹೋಗದಿರುವುದು ಕುತೂಹಲ ಕೆರಳಿಸಿದೆ. ಸರ್ವಪಕ್ಷ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೊಮ್ಮಾಯಿ ಅವರು ಷಾ ಸಭೆಯಲ್ಲಿ ಯಾವ ನಿಲುವನ್ನು ವ್ಯಕ್ತಪಡಿಸಲಿದ್ದಾರೆ ಎಂಬ ಪ್ರಶ್ನೆ ಬೃಹದಾಕಾರವಾಗಿದೆ. 2004ರಿಂದಲೂ ಸುಪ್ರೀಂಕೋರ್ಟ್ ಮುಂದೆ ಇರುವ ರಿಟ್ ಅರ್ಜಿ ವಿಚಾರಣೆಗೆ ಅಂಗೀಕಾರವಾಗಿಲ್ಲ. ಮಹಾರಾಷ್ಟ್ರ ಆಗಾಗ ರಾಜಕೀಯ ಕಾರಣಗಳಿಗಾಗಿ ವಿವಾದ ಕೆದಕುತ್ತಿರುತ್ತದೆ.
ರಾಜ್ಯ ರಚನೆಯೇ ಅಂತಿಮ:ಬಸವರಾಜ ಬೊಮ್ಮಾಯಿ ಇದುವರೆಗೂ ಎಲ್ಲಿಯೂ ಮಹಾಜನ್ ವರದಿ ಅಂತಿಮವೆಂಬ ಮಾತನ್ನು ಹೇಳಿಲ್ಲ. ಹೋರಾಟಗಾರರು, ಪ್ರತಿಪಕ್ಷಗಳು ಈ ಮಾತನ್ನು ಪುನರುಚ್ಚರಿಸುತ್ತಿದ್ದಾರೆ. ಆದರೆ, ಸರ್ಕಾರದ ಮೂಲಗಳಿಂದ ತಿಳಿದುಬಂದ ಮಾಹಿತಿ ಪ್ರಕಾರ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ರಾಜ್ಯಗಳು ಏನು ರಚನೆಯಾಗಿವೆಯೋ ಅದೇ ಅಂತಿಮ ಹಾಗೂ ಯಥಾಸ್ಥಿತಿ ಮುಂದುವರಿಯುವುದೇ ಉತ್ತಮವೆಂಬ ನಿಲುವನ್ನು ಬೊಮ್ಮಾಯಿ ವ್ಯಕ್ತಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ 1956 ರಲ್ಲಿ ರಚನೆ ಮಾಡಿದ ಫಜಲ್ ಅಲಿ ಆಯೋಗದ ವರದಿ ಆಧಾರದಲ್ಲಿ ರಾಜ್ಯಗಳು ರಚನೆಯಾಗಿದ್ದವು. ಇದೀಗ ಯಾವುದೇ ಬದಲಾವಣೆಗಳು ಸಾಧ್ಯವಿಲ್ಲವೆಂಬ ನಿಲುವಿಗೆ ಬೊಮ್ಮಾಯಿ ಬದ್ಧವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾಜನ್ ವರದಿ ಒಪ್ಪಿಕೊಂಡಿದ್ದ ರಾಜ್ಯ:ಮಹಾಜನ್ ವರದಿ 1970 ರಲ್ಲಿ ಸಂಸತ್ತಿನಲ್ಲಿ ಮಂಡನೆಯಾದ ನಂತರ ರಾಜ್ಯ ವಿಧಾನಮಂಡಲದಲ್ಲಿ 4 ಬಾರಿ ನಿರ್ಣಯ ಕೈಗೊಳ್ಳಲಾಗಿದೆ. ಅದಕ್ಕೆ ವಿರುದ್ಧವಾಗಿ ಹೋಗಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಇದೆ.
ಮಹಾಜನ್ ವರದಿ ರಚನೆಗೆ ಕಾರಣ:ಮುಂಬೈನಲ್ಲಿ 1966ರ ಅಕ್ಟೋಬರ್​ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಂದರ್ಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಬೆಳಗಾವಿಗಾಗಿ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ನಡೆಸಿದರು. ಆಗ ರಾಜ್ಯದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ವಿ.ಪಿ. ನಾಯಕ್ ಅವರೊಂದಿಗೆ ಇಂದಿರಾಗಾಂಧಿ ಚರ್ಚೆ ನಡೆಸಿದರು. ಮಹಾಜನ್ ಆಯೋಗ ರಚನೆಯ ಪ್ರಸ್ತಾಪ ಮಾಡಿದರು. ಆಗ ನಿಜಲಿಂಗಪ್ಪ ವಿರೋಧ ಮಾಡಿದರೂ ಇಂದಿರಾ ಒತ್ತಡಕ್ಕೆ ಒಪ್ಪಿದರು. ಇಬ್ಬರು ಮುಖ್ಯಮಂತ್ರಿಗಳು ಸಹ ಮಹಾಜನ್ ವರದಿಗೆ ಬದ್ಧವಾಗಿರತಕ್ಕದ್ದು ಎಂದೇ ಹೇಳಿದ್ದರು. ಆದರೆ, ಆಯೋಗಕ್ಕೆ ಒಪ್ಪಿದ್ದಕ್ಕಾಗಿ ರಾಜ್ಯದಲ್ಲಿ ನಿಜಲಿಂಗಪ್ಪ ವಿರುದ್ಧ ದೊಡ್ಡ ಪ್ರಮಾಣದ ಹೋರಾಟ ನಡೆದಿತ್ತು.
ರಾಜ್ಯದ ಗಡಿ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಗಡಿಯ ಒಂದಿಂಚೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈಗಾಗಲೆ ರಾಜ್ಯಗಳು ರಚನೆಯಾಗಿವೆ. ಅದರಲ್ಲಿ ಈಗ ಬದಲಾವಣೆ ಸಾಧ್ಯವಿಲ್ಲ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಮೂರು ರಾಜ್ಯಗಳ ಸಮಸ್ಯೆ:ಮಹಾಜನ್ ವರದಿ ಜಾರಿಗೆ ಬರಬೇಕೆಂದು ಕರ್ನಾಟಕ ಮೊದಲಿನಿಂದಲೂ ಪಟ್ಟು ಹಿಡಿದಿದೆ. ಆದರೆ, ಗಡಿ ವಿವಾದ ಕೇವಲ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಬಂಧಿಸಿಲ್ಲ. ಕೇರಳವೂ ಸೇರುತ್ತದೆ. ಆದರೆ, ಮಹಾರಾಷ್ಟ್ರ ಬೆಳಗಾವಿಗೆ ಪಟ್ಟು ಹಿಡಿದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಗಡಿ ವಿವಾದದಿಂದಲೇ ನಾಯಕರಾಗಿ ಬೆಳೆದವರು. ಆದರೆ, ಸಮಸ್ಯೆ ಈ ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣವೂ ಇಲ್ಲ.
ಬೆಳಗಾವಿ ರಾಜ್ಯ ಕೈ ಬಿಡಲ್ಲ:ಕೇಂದ್ರ ಸರ್ಕಾರ ಮಹಾಜನ್ ವರದಿ ಅಥವಾ ಫಜಲ್ ಅಲಿ ವರದಿ ಎರಡರಲ್ಲಿ ಯಾವುದನ್ನು ಒಪ್ಪಿದರೂ ಬೆಳಗಾವಿ ಮಾತ್ರ ರಾಜ್ಯದಿಂದ ಕೈ ಬಿಟ್ಟು ಹೋಗುವುದಿಲ್ಲ. ಆದ್ದರಿಂದ ರಾಜ್ಯ ಈ ಎರಡು ಅಂಶಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯ ಒತ್ತಡಕ್ಕೂ ಮಣಿಯದೇ ನಿಲುವಿನಿಂದ ಹಿಂದೆ ಸರಿಯಬಾರದು ಎಂಬ ಸಲಹೆಗಳು ಇವೆ.
ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು

ಟ್ವಿಟರ್​ನಲ್ಲಿ ಇನ್ಮುಂದೆ ಧಾರಾಳವಾಗಿ ಬರೆಯಬಹುದು: ಆಗಲಿರುವ ಪ್ರಮುಖ ಬದಲಾವಣೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 1 =
Remember me
