ನವದೆಹಲಿ:ವರ್ಷದ ಮೊದಲ ಮನ್​ ಕಿ ಬಾತ್​ ಬಾನೂಲಿ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ನಿನ್ನೆ (ಭಾನುವಾರ) ಮಾತನಾಡಿದರು. ಈ ವೇಳೆ ವಿಶೇಷವಾಗಿ ಮಹಿಳಾ ಸಬಲೀಕರಣದ ಬಗ್ಗೆ ಪ್ರಧಾನಿ ಮಾತನಾಡಿದ್ದನ್ನು ಉಲ್ಲೇಖಿಸಿ “ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆ ಎಲ್ಲಾ ವಿಭಾಗಗಳಲ್ಲೂ ಹೆಚ್ಚುತ್ತಿದೆ” ಎಂದು ಬಾಲಿವುಡ್​ ನಟಿ ಕರೀನಾ ಕಪೂರ್ ಸಂತಸ ವ್ಯಕ್ತಪಡಿಸಿದ್ದಾರೆ. ​
ಮನ್​ ಕಿ ಬಾತ್​ 73ನೇ ಆವೃತ್ತಿ ಮತ್ತು ಹೊಸ ವರ್ಷದ ಮೊದಲ ಬಾನೂಲಿ ಕಾರ್ಯಕ್ರಮ ಭಾನುವಾರ (ಜ.31) ನಡೆಯಿತು. ಈ ವೇಳೆ ಪ್ರಧಾನಿ ಮೋದಿ ದೇಶದ ಅನೇಕ ವಿಚಾರಗಳನ್ನು ಜನರ ಮುಂದಿಟ್ಟರು. ವಿಶೇಷವಾಗಿ ಮಹಿಳೆಯರ ಬಗ್ಗೆ ಮಾತನಾಡಿದ ಪ್ರಧಾನಿ, ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿ, ಉದಾಹರಣೆ ಸಹ ನೀಡಿದರು.
ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕರೀನಾ ಕಪೂರ್​, ತಡೆರಹಿತ ವಾಣಿಜ್ಯ ವಿಮಾನಗಳನ್ನು ಹಾರಿಸುವುದರಿಂದ ಹಿಡಿದು ಗಣರಾಜ್ಯೋತ್ಸವದ ಮೆರವಣಿಗೆವರೆಗೆ ಮಹಿಳಾ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ದೇಶದ ಮಗಳಿಂದು ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ ಭಯ ಮುಕ್ತ, ಧೈರ್ಯಶಾಲಿ ಮತ್ತು ಸಮಾನವಾಗಿ ಭಾಗವಹಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಜತೆಯಲ್ಲಿ #WomenSupportingWomen #MannKiBaat #PMOINDIA ಹ್ಯಾಷ್​ಟ್ಯಾಗ್​ ನೀಡಿದ್ದಾರೆ.


A post shared by Kareena Kapoor Khan (@kareenakapoorkhan)

ನಿನ್ನೆ ಮನ್​ ಕಿ ಬಾತ್​ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕೆಲವು ದಿನಗಳ ಹಿಂದೆ ನಮ್ಮ ನಾಲ್ವರು ಭಾರತೀಯ ಮಹಿಳಾ ಪೈಲಟ್​ಗಳು ಅಮೆರಿಕದ ಸ್ಯಾನ್​ ಫ್ರ್ಯಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರವಾಗಿ ವಿಮಾನ ಚಲಾಯಿಸಿದರು. 225 ಜನರನ್ನು ಹೊತ್ತ ವಿಮಾನವೂ 10 ಸಾವಿರ ಕಿ.ಮೀ ಪ್ರಯಾಣ ಮಾಡಿದೆ. ಯಾವುದೇ ಕ್ಷೇತ್ರವಾಗಲಿ, ರಾಷ್ಟ್ರದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.(ಏಜೆನ್ಸೀಸ್​)
ಬ್ಯಾಂಕಾಕ್​ನಲ್ಲಿ ಆಶಿಕಾ ಕಾಣೆ!; ಬಟ್ಟೆ ನೋಡಿ ಸ್ವಭಾವ ಅಳೆಯಬೇಡಿ…

ಪ್ಯಾಸೆಂಜರ್ ಇಳಿಸಲು ನಿಲ್ಲಿಸಿದ್ದ ಬಸ್ಸಿಗೆ ಕಾರು ಡಿಕ್ಕಿ: ಪ್ರಯಾಣಿಕ ಸೇರಿ ಐವರು ದುರ್ಮರಣ!

ಪಾಲಕರಿಗೆ ಸುಳ್ಳು ಹೇಳಿ ಲಾಡ್ಜ್​ ಸೇರಿದ್ದ ಸರ್ಕಾರಿ ನೌಕರರಿಬ್ಬರ ಸ್ಥಿತಿ ನೋಡಿ ಬೆಚ್ಚಿಬಿದ್ದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 12 =
Remember me
