ನವದೆಹಲಿ:ಜಗತ್ತಿನಾದ್ಯಂತ ಕರೊನಾ ಲಸಿಕೆ ಸಂಬಂಧ ಸಂಶೋಧನೆಗಳು ನಡೆಯುತ್ತಿವೆ. ಮತ್ತೊಂದೆಡೆ ಲಸಿಕೆ ಸಿಗುವವರೆಗೂ ಕರೊನಾ ನಿಯಂತ್ರಣ ಕಷ್ಟ ಎಂದು ಒಂದಷ್ಟು ತಜ್ಞರು ಹೇಳುತ್ತಿದ್ದಾರೆ. ಹೀಗಿರುವಾಗ ಲಸಿಕೆ ಕುರಿತು ಹೊಸದೊಂದು ವಿಷಯ ಹೊರಹೊಮ್ಮಿದೆ.
ಲಸಿಕೆಯ ನಿರೀಕ್ಷೆಯಲ್ಲಿ ಔಷಧ ಕಂಪನಿಗಳು, ಸರ್ಕಾರಗಳಿದ್ದರೂ ಜನರು ಅದರ ಬಗ್ಗೆ ಯಾವ ಅಭಿಪ್ರಾಯ ಹೊಂದಿರಬಹುದು ಎಂಬ ಕುತೂಹಲ ಸಹಜ. ಅಂಥ ಕುತೂಹಲದ ಹಿನ್ನೆಲೆಯಲ್ಲಿ ನಡೆದ ಸಮೀಕ್ಷೆಯೊಂದು ಬೇರೆಯದೇ ವಿಚಾರವನ್ನು ಹೊರಗೆಡಹಿದೆ. ಆ ಸಮೀಕ್ಷೆ ಪ್ರಕಾರ, ಲಸಿಕೆ ಸಿಕ್ಕಿದಾಕ್ಷಣ ಜನ ಅವುಗಳನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿಲ್ಲ.
ಲೋಕಲ್​ ಸರ್ಕಲ್​ ಇಂಥದ್ದೊಂದು ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ ಹೊಸ ವರ್ಷದ ಆರಂಭದಲ್ಲೇ ಲಸಿಕೆ ಸಿಕ್ಕರೂ ಜನರು ಅದನ್ನು ಸಂಶಯದಿಂದ ನೋಡುತ್ತಾರೆ ಎಂಬ ವಿಷಯ ತಿಳಿದುಬಂದಿದೆ. ‘ಮುಂದಿನ ವರ್ಷಾರಂಭದಲ್ಲಿ ಕರೊನಾ ಲಸಿಕೆ ಸಿಕ್ಕರೆ ನೀವು ತೆಗೆದುಕೊಳ್ಳುತ್ತೀರಾ, ಆ ಮೂಲಕ ಕೋವಿಡ್​ ಮುಂಚಿನ ಜೀವನಕ್ಕೆ ಹೋಗುತ್ತೀರಾ?’ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಈ ಸರ್ವೇ ನಡೆದಿತ್ತು.
ಸಮೀಕ್ಷೆಯಲ್ಲಿ ಪಾಲ್ಗೊಂಡ 8,312 ಮಂದಿ ಪೈಕಿ ಶೇ. 61 ಮಂದಿ, ಲಸಿಕೆ ಸಿಕ್ಕರೂ ನಮಗೆ ಅದರ ಬಗ್ಗೆ ಅನುಮಾನ ಇರುತ್ತದೆ, ಹಾಗಾಗಿ ಅದನ್ನು ಗಡಿಬಿಡಿಯಲ್ಲಿ ತೆಗೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಹೇಳಿದ್ದಾರೆ. ಶೇ. 12 ಮಂದಿ ಲಸಿಕೆ ತೆಗೆದುಕೊಂಡು ಮೊದಲಿನ ಜೀವನಕ್ಕೆ ಹೋಗುವುದಾಗಿ ಹೇಳಿದ್ದರೆ, ಶೇ. 25 ಮಂದಿ ಲಸಿಕೆ ತೆಗೆದುಕೊಂಡರೂ ಮುಂಚಿನಂತೆ ಜೀವನ ನಡೆಯದು ಎಂದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
