ನವದೆಹಲಿ:ಕರೊನಾದ ವಿರುದ್ಧ ಜಯ ಸಾಧಿಸಲು ಲಸಿಕೆಯೊಂದೇ ಪ್ರಮುಖ ಹಾಗೂ ಪ್ರಬಲ ಅಸ್ತ್ರ ಎಂಬುದನ್ನು ಈಗಾಗಲೇ ಸರ್ಕಾರವೂ ಸೇರಿ ಹಲವರು ಪ್ರತಿಪಾದಿಸುತ್ತಿದ್ದಾರೆ. ಎರಡು ಡೋಸ್​ ಲಸಿಕೆ ಪಡೆದರೆ ಕೋವಿಡ್-19 ವಿರುದ್ಧದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಸೋಂಕಿನಿಂದಾಗಿ ಸಾಯುವ ಸಾಧ್ಯತೆಯೂ ತೀರಾ ಕಡಿಮೆ ಎಂದೂ ಹೇಳಲಾಗುತ್ತಿದೆ. ಆದರೆ ಎರಡೂ ಡೋಸ್​ ಲಸಿಕೆ ಪಡೆದ ಮೇಲೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು ಎಂಬುದನ್ನು ಈಗ ಅಧ್ಯಯನವೊಂದು ಪ್ರತಿಪಾದಿಸಿದೆ.
ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪಾಲ್​ ಈ ಕುರಿತ ಮಾಹಿತಿಯನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ. ಪಂಜಾಬ್ ಸರ್ಕಾರದ ಸಹಯೋಗದಲ್ಲಿ ಚಂಡೀಗಢದ ಪೋಸ್ಟ್ ಗ್ರಾಜ್ಯುವೇಟ್​ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್ ಇಂಥದ್ದೊಂದು ಅಧ್ಯಯನವೊಂದನ್ನು ನಡೆಸಿದ್ದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!
ಲಸಿಕೆ ಪಡೆಯದ 4,868 ಪೊಲೀಸರು ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 15 ಮಂದಿ ಸಾವಿಗೀಡಾಗಿದ್ದರು. ಅಂದರೆ ಸಾವಿರಕ್ಕೆ 3.08 ಸಾವು ಸಂಭವಿಸಿದಂತಾಗಿದೆ. ಇನ್ನು 35,856 ಸೋಂಕಿತ ಪೊಲೀಸರಲ್ಲಿ ಅವರೆಲ್ಲೂ ಅದಾಗಲೇ ಮೊದಲ ಡೋಸ್ ಲಸಿಕೆ ಪಡೆದಿದ್ದು, ಆ ಪೈಕಿ 9 ಮಂದಿ ಸಾವಿಗೀಡಾಗಿದ್ದರು. ಅರ್ಥಾತ್​ ಸಾವಿರಕ್ಕೆ 0.25 ಸಾವು ಸಂಭವಿಸಿದಂತಾಗಿದೆ. ಇನ್ನೊಂದು ವಿಭಾಗದಲ್ಲಿ 42,720 ಪೊಲೀಸರು ಅದಾಗಲೇ ಎರಡೂ ಡೋಸ್ ಲಸಿಕೆ ಪಡೆದಿದ್ದು, ಆ ಪೈಕಿ ಇಬ್ಬರಷ್ಟೇ ಮೃತಪಟ್ಟಿದ್ದರು. ಅಂದರೆ ಸಾವಿರಕ್ಕೆ 0.05 ಸಾವಷ್ಟೇ ಸಂಭವಿಸಿದೆ ಎಂದು ಪೌಲ್ ವಿವರಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?
ಇನ್ನು ಈ ಅಧ್ಯಯನ ಕುರಿತು ಮತ್ತಷ್ಟು ವಿವರಣೆ ನೀಡಿರುವ ಅವರು, ಪೊಲೀಸರು ಹೆಚ್ಚಿನ ರಿಸ್ಕ್ ಎದುರಿಸುತ್ತಿರುವುದರಿಂದ ಅವರನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಯಾರೇ ಆಗಲಿ ಮೊದಲ ಡೋಸ್ ಲಸಿಕೆ ಪಡೆದೂ ಸೋಂಕಿಗೆ ಒಳಗಾದರೆ ಅಂಥವರು ಸೋಂಕಿನಿಂದಾಗಿ ಸಾಯುವ ಸಾಧ್ಯತೆ ಕಡಿಮೆ ಇರುತ್ತದೆ. ಅಂದರೆ ಕೋವಿಡ್​ನಿಂದಾಗಿ ಸಂಭವಿಸುವ ಸಾವಿನ ವಿರುದ್ಧ ಶೇ. 92 ಸುರಕ್ಷೆ ಸಿಗುತ್ತದೆ. ಒಂದು ವೇಳೆ ಎರಡೂ ಡೋಸ್ ಲಸಿಕೆ ಪಡೆದೂ ಸೋಂಕಿಗೆ ಒಳಗಾಗಿದ್ದರೆ ಅಂಥವರು ಕೋವಿಡ್​ನಿಂದಾಗಿ ಸಂಭವಿಸುವ ಸಾವಿನ ವಿರುದ್ಧ ಶೇ. 98 ರಕ್ಷಣೆ ಹೊಂದಿರುತ್ತಾರೆ ಎಂದು ಪೌಲ್ ವಿವರಿಸಿದ್ದಾರೆ. (ಏಜೆನ್ಸೀಸ್​)
ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

ಮನೆಯಿಂದ ದೂರದಲ್ಲಿ ಕಾರು ಪಾರ್ಕ್ ಮಾಡುತ್ತಿದ್ದೀರಾ? ಹಾಗಿದ್ರೆ ಹುಷಾರು!

ಅಂಬೆಗಾಲಿಡುವ ಮಗನ ಬಯೋಡೇಟಾ ಹಿಡಿದುಕೊಂಡು ಸಂದರ್ಶನಕ್ಕೆ ಹೋದ ಅಮ್ಮ; ಅಂಥದ್ದೇನಿತ್ತು ಅದರಲ್ಲಿ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seventeen =
Remember me
