ಮುಂಬೈ :ಇತ್ತೀಚೆಗಷ್ಟೆ, ಕರೊನಾ ಎರಡನೇ ಅಲೆಯ ಸಮಯದಲ್ಲಿ ತಮ್ಮ ಇಡೀ ಕುಟುಂಬಕ್ಕೆ ಕರೊನಾ ತಗುಲಿದ್ದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸಿ ಚೇತರಿಸಿಕೊಂಡಿದ್ದರು ನಟಿ ಶಿಲ್ಪಾ ಶೆಟ್ಟಿ. ಇದೀಗ ಅವರ ಪತಿ ರಾಜ್​ ಕುಂದ್ರ ಮೇಲೆ ಅಶ್ಲೀಲ ಚಿತ್ರಗಳ ನಿರ್ಮಾಣದ ಗಂಭೀರ ಆರೋಪಗಳು ಬಂದಿದ್ದು, ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆ ಏನೆಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಹೀಗಿರುವಾಗ, ಪತಿಯ ಬಂಧನದ ಹಲವು ದಿನಗಳ ನಂತರ ಶಿಲ್ಪಾ ಅಧಿಕೃತ ‘ಹೇಳಿಕೆ’ ನೀಡಿದ್ದಾರೆ.
ಇನ್ಸ್​ಟಾಗ್ರಾಂನಲ್ಲಿ ಸುದೀರ್ಘವಾಗಿ ತಮ್ಮ ತುಮುಲಗಳನ್ನು ಹಂಚಿಕೊಂಡಿರುವ ಶೆಟ್ಟಿ, ತಮ್ಮ ಈ ಸಂಕಷ್ಟದ ಸಮಯದಲ್ಲಿ ಖಾಸಗಿತನಕ್ಕೆ ಬೆಲೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ತಾವು ಏನೂ ಕಾಮೆಂಟ್​ ಮಾಡುವುದಿಲ್ಲ. ಏಕೆಂದರೆ ಅದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದಿರುವ ಶಿಲ್ಪಾ, “ನನ್ನ ಹೆಸರಿನ ನಕಲಿ ಹೇಳಿಕೆಗಳನ್ನು ಬಿಟ್ಟುಬಿಡಿ. ನಾನು ಏನೂ ಕಾಮೆಂಟ್​ ಕೊಡುವುದಿಲ್ಲ. ಸೆಲೆಬ್ರಿಟಿಯಾಗಿ ನಾನು ನೆವರ್​ ಕಂಪ್ಲೇನ್, ನೆವರ್ ಎಕ್ಸ್​ಪ್ಲೇನ್​​ ತತ್ವವನ್ನು ಅನುಸರಿಸುತ್ತೇನೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದನ್ನೂ ಓದಿ:ಭಾರತ ಹಾಕಿ ತಂಡವನ್ನು ಅಭಿನಂದಿಸಿದ ಆಸ್ಟ್ರೇಲಿಯಾ ಹೈಕಮಿಷನರ್​
“ಕಳೆದ ಕೆಲವು ದಿನಗಳಲ್ಲಿ ನನ್ನ ಬಗ್ಗೆ ಹಲವು ವದಂತಿಗಳು, ಆರೋಪಗಳು ಮತ್ತು ನನ್ನ ಮೇಲೆ ಅನಗತ್ಯ ಹೇಳಿಕೆಗಳು ಮಾಧ್ಯಮದಲ್ಲಿ ಮತ್ತು ನನ್ನ ಹಿತೈಷಿಗಳೆನ್ನುವವರಿಂದಲೇ ಬಂದಿದೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಟ್ರೋಲ್​ಮಾಡಲಾಗುತ್ತಿದ್ದು, ಪ್ರಶ್ನೆಗಳನ್ನು ಹಾಕಲಾಗುತ್ತಿದೆ” ಎಂದು ಶಿಲ್ಪಾ ತಮ್ಮ ಕಷ್ಟ ಹಂಚಿಕೊಂಡಿದ್ದಾರೆ.
“ಒಂದು ಕುಟುಂಬವಾಗಿ, ನಾವು ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯುವ ಯತ್ನದಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾನು, ವಿಶೇಷವಾಗಿ ಒಬ್ಬ ತಾಯಿಯಾಗಿ ನನ್ನ ಮಕ್ಕಳಿಗೋಸ್ಕರ, ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಅರ್ಧಂಬರ್ಧ ಮಾಹಿತಿಯ ಮೇಲೆ ಅದರ ಸತ್ಯಾಸತ್ಯತೆ ತಿಳಿಯದೆ ಕಾಮೆಂಟ್ ಮಾಡಬೇಡಿ” ಎಂದಿದ್ದಾರೆ, ಶಿಲ್ಪಾ.


A post shared by Shilpa Shetty Kundra (@theshilpashetty)
“ನಾನು ಒಬ್ಬ ಹೆಮ್ಮೆಯ ಕಾನೂನು ಪಾಲಕ ನಾಗರೀಕಳಾಗಿದ್ದೇನೆ. ಕಳೆದ 29 ವರ್ಷಗಳಿಂದ ಶ್ರಮಪಟ್ಟು ದುಡಿಯುವ ವೃತ್ತಿಪರಳಾಗಿದ್ದೇನೆ. ಜನ ನನ್ನಲ್ಲಿ ನಂಬಿಕೆ ಇರಿಸಿದ್ದಾರೆ. ನಾನವರಿಗೆ ಎಂದೂ ನಿರಾಶೆ ಮಾಡಿಲ್ಲ” ಎಂದೂ ಬರೆದಿರುವ ಶಿಲ್ಪಾ, “ತುಂಬಾ ಮುಖ್ಯವಾಗಿ, ಈ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಖಾಸಗಿತನದ ಹಕ್ಕನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.
ಜೊತೆಗೆ, ತಮಗೆ ಮುಂಬೈ ಪೊಲೀಸರ ಬಗ್ಗೆ, ಭಾರತದ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದಿರುವ ಶಿಲ್ಪಾ, “ನಾವು ಮೀಡಿಯಾ ಟ್ರಯಲ್​​ಗೆ ಒಳಗಾಗಬಾರದು. ಕಾನೂನು ತನ್ನ ಕೆಲಸ ಮಾಡಲಿ ಬಿಡಿ. ಸತ್ಯಮೇವ ಜಯತೇ” ಎಂದಿದ್ದಾರೆ.(ಏಜೆನ್ಸೀಸ್)
ಕೇರಳ ಗಡಿಯಲ್ಲಿ ಚುರುಕುಗೊಂಡ ತಪಾಸಣೆ; ಕರೊನಾ ನೆಗೆಟಿವ್ ವರದಿ ಇದ್ದರಷ್ಟೇ ಪ್ರವೇಶ

ಪುಲ್ವಾಮ ದಾಳಿಯ ಸಂಚುಕೋರ ಉಗ್ರವಾದಿ ಇಸ್ಮಲ್​ ಅಲ್ವಿ ಅಂತ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 3 =
Remember me
