ಕೊಯಮತ್ತೂರು:ಮಕ್ಕಳ್​ ನಿಧಿ ಮಯ್ಯಂ (ಎಂಎನ್​ಎಂ) ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್​ ಹಾಸನ್​, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು (ದಕ್ಷಿಣ) ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಬೆನ್ನಲ್ಲೇ ಮಗಳು ಶ್ರುತಿ ಹಾಸನ್ ಅವರು ಮಾಡಿರುವ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​ ಆಗಿದೆ. ​
ನಿನ್ನೆ (ಮೇ 2) ಮತಎಣಿಕೆ ಪೂರ್ಣಗೊಂಡ ಬಳಿಕ ಶ್ರುತಿ ಅವರು ರಾತ್ರಿ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಶೇರ್​ ಮಾಡಿಕೊಂಡಿದ್ದು, “ಯಾವಾಗಲು ನನ್ನ ತಂದೆಯ ಮೇಲೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, #Terminator ಮತ್ತು #TheFighter ಎಂಬ ಹ್ಯಾಷ್​ಟ್ಯಾಗ್​ಗಳನ್ನು ಸ್ಟೋರಿಯಲ್ಲಿ ಸೇರಿಸಿದ್ದಾರೆ.

ಏಪ್ರಿಲ್​ 6ರಂದು ನಡೆದ ಮತದಾನದ ವೇಳೆ ಶ್ರುತಿ ಹಾಸನ್​, ತಂದೆ ಕಮಲ್​ ಹಾಸನ್​ ಮತ್ತು ಸಹೋದರಿ ಅಕ್ಷರ ಹಾಸನ್​ ಜತೆಯಲ್ಲಿ ಬಂದು ವೋಟ್​ ಮಾಡಿದ್ದರು. ಈ ವೇಳೆ ವೋಟ್​​ ಮಾಡುವ ಮುನ್ನ ಇನ್​ಸ್ಟಾಗ್ರಾಂನಲ್ಲಿ ಕುಟುಂಬದ ಫೋಟೋ ಪೋಸ್ಟ್​​ ಮಾಡಿ, ಮತದಾನ ಮಾಡುವ ಸಮಯ ಎಂದು ಬರೆದುಕೊಂಡಿದ್ದರು.
A post shared by Shruti Haasan (@shrutzhaasan)

ನಿನ್ನೆ ನಡೆದ ಮತಎಣಿಕೆಯಲ್ಲಿ ಆರಂಭದಲ್ಲಿ ಕಮಲ್​ ಹಾಸನ್​ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಸಂಜೆ ಆರು ಗಂಟೆಯ ಸಮಯದಲ್ಲಿ ಬಿಜೆಪಿಯ ವಾನಥಿ ಶ್ರೀನಿವಾಸನ್​, ಕಮಲ್​ರನ್ನು ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡರು ಕೊನೆಗೂ 1500 ಮತಗಳಿಂದ ವಾನಥಿ, ಕಮಲ್​ ಹಾಸನ್​ರಿಗೆ ಸೋಲುಣಿಸಿದರು.
ಅಚ್ಚರಿಯೆಂದರೆ ಕಮಲ್​ ಒಟ್ಟು ಮತಗಳಲ್ಲಿ ಶೇ. 33.26 ರಷ್ಟು ಪಡೆದುಕೊಂಡು ಒಳ್ಳೆಯ ಪೈಪೋಟಿ ನೀಡಿದ್ದಾರೆ. ವಾನಥಿ ಅವರು 34.38 ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಫಲಿತಾಂಶ ಹೊರಬಿದ್ದ ಬಳಿಕ ಟ್ವೀಟ್​ ಮಾಡಿ ತನಗೆ ವೋಟ್​ ಮಾಡಿದವರಿಗೆ ಕಮಲ್​ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ, ತಮಿಳುನಾಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಡಿಎಂಕೆಯ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ಗೆ ಶುಭಕೋರಿದ್ದಾರೆ.
ನಿನ್ನೆಯಯ ಫಲಿತಾಂಶದ ಪ್ರಕಾರ ಒಟ್ಟು 234 ವಿಧಾನಸಭಾ ಸ್ಥಾನಗಳಲ್ಲಿ 159 ಸ್ಥಾನಗಳನ್ನು ಗೆದ್ದಿದ್ದು, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.(ಏಜೆನ್ಸೀಸ್​)
ವಿದೇಶಿ ಮಹಿಳೆಯರ ಜತೆ ಧಾರಾವಾಹಿ ನಟನ ಅಕ್ರಮ ಸಂಬಂಧ: ಪತಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ!

ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!

ಫೇಸ್​​ಬುಕ್​ನಲ್ಲಿ ಪರಿಚಯ ಮಾಡ್ಕೊಂಡು ವಿಡಿಯೋ ಕಾಲ್​ನಲ್ಲಿ ನೀಚ ಕೃತ್ಯ: ಕಿಲಾಡಿ ಲೇಡಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
