ಹೈದರಾಬಾದ್​:ಸಿನಿಮಾ ತಾರೆಯರ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.  ಕೆಲವೊಮ್ಮೆ ಅಭಿಮಾನಿಗಳು ಕಾಣಿಸಿಕೊಂಡಾಗ ಮಾಡುವ ಕೆಲಸಗಳಿಂದ ಸ್ಟಾರ್‌ಗಳು ಮುಜುಗರಕ್ಕೊಳಗಾದ ಉದಾಹರಣೆಗಳು ಸಾಕಷ್ಟಿವೆ. ಸೆಲ್ಫಿಗಾಗಿ ಮುಗಿ ಬಿಳುವ ಅಭಿಮಾನಿಗಳ ಮಧ್ಯೆ ಇಲ್ಲೊಬ್ಬ ಮಾಡಿದ ಕೆಲಸಕ್ಕೆ ಸ್ಟಾರ್​​ ನಟ ಆತಂಕಕ್ಕೊಳಗಾಗಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.
ಇದನ್ನೂ ಓದಿ:ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು
ಆನಂದ್ ದೇವರಕೊಂಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬೇಬಿ ಚಿತ್ರದ ಸಕ್ಸಸ್ ಮೀಟ್ ನಲ್ಲೂ ಇಂತಹದ್ದೇ ಘಟನೆ ನಡೆದಿದೆ. ಈ ಸಕ್ಸಸ್ ಮೀಟ್‌ನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೀರೋ ವಿಜಯ್ ದೇವರಕೊಂಡ ಮಾತನಾಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ವೇದಿಕೆ ಮೇಲೆ ಹತ್ತಿ ಅವರ ಪಾದ ಮುಟ್ಟಲು ಯತ್ನಿಸಿದ್ದಾನೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#VijayDeverakonda😅❤️pic.twitter.com/CFUzA0T1KW
— #Sai (@Thesai__)July 18, 2023

ಇದನ್ನೂ ಓದಿ:ಹಲ್ಲುಜ್ಜುವಾಗ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ!; ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮುಂದೇನಾಯ್ತು?
ವಿಡಿಯೋದಲ್ಲಿ ಏನಿದೆ?:ವಿಜಯ್ ಮಾತನಾಡುತ್ತಿರುವಾಗ ಅಭಿಮಾನಿಯೊಬ್ಬರು ಏಕಾಏಕಿ ವೇದಿಕೆಯತ್ತ ಧಾವಿಸಿದ್ದಾರೆ. ಅದನ್ನು ನೋಡಿದ ವಿಜಯ್ ದೇವರಕೊಂಡ ಕೂಡಲೇ ಕಾಲಿಗೆ ಬೀಳದಂತೆ ಪಕ್ಕಕ್ಕೆ ಓಡಿದರು. ಅಷ್ಟರಲ್ಲಿ ಗಮನ ಹರಿಸದ ಭದ್ರತಾ ಸಿಬ್ಬಂದಿ ಹೇಳಿದ್ದ ಅಭಿಮಾನಿಯನ್ನು ಹಿಡಿದುಕೊಂಡು ತೆರಳಿದ್ದಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಅಯ್ಯೋ ಹೀರೋಗೆ ಭಯವಾಗಿದೆ, ಅಭಿಮಾನಿಗಳು ಹೀಗೆಲ್ಲ ಮಾಡಬಾರದು ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − four =
Remember me
