ನವದೆಹಲಿ:ನಮ್ಮ ದೇಶದಲ್ಲಿರುವ ಕಾರುಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಈ ಪೈಕಿ ನಾನಾ ಕಂಪನಿಗಳ ಕಾರುಗಳಿವೆ. ಇದುವರೆಗಿನ ಸಂಖ್ಯೆಯನ್ನು ಗಮನಿಸಿ ಹೇಳುವುದಾದರೆ ಅತಿ ಹೆಚ್ಚು ಮಾರಾಟವಾಗಿರುವ ಕಾರು ಯಾವುದು ಗೆಸ್ ಮಾಡಬಲ್ಲಿರಾ?ದೇಶದ ಮುಂಚೂಣಿ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಈ ವಿಷಯವನ್ನು ಬಹಿರಂಗಪಡಿಸಿದೆ. ಮಾರಾಟ ದಾಖಲೆಗಳ ಪ್ರಕಾರ, ಭಾರತದ ರಸ್ತೆಗಳಲ್ಲಿ ಮಾರುತಿ ಸುಜುಕಿಯ ಅಲ್ಟೋ ಮಾದರಿ ಕಾರುಗಳದ್ದೇ ಕಾರುಬಾರು. ಎಲ್ಲಿ ಕಣ್ಣು ಹಾಯಿಸಿದರೂ ಆಲ್ಟೋ ಮಾದರಿ ಕಾರು ಕಣ್ಣಿಗೆ ಬೀಳದೇ ಇರದು. ಅಷ್ಟರ ಮಟ್ಟಿಗೆ ಜನಪ್ರಿಯತೆ ಮತ್ತು ಅನುಕೂಲಕರವಾಗಿರುವ ಕಾರು ಅದು. ಕೆಳ ಮಧ್ಯಮದಿಂದ ಹಿಡಿದು ಶ್ರೀಮಂತರ ತನಕ ಇಷ್ಟ ಪಡುವ ಕಾರು ಎಂದು ಕಂಪನಿ ಹೇಳಿಕೊಂಡಿದ್ದು, ಈ ಸೆಗ್ಮೆಂಟ್ ನ ಕಾರುಗಳ ಪೈಕಿ ಇದು ಸತತ 16 ವರ್ಷಗಳಿಂದ ಜೀವಂತಿಕೆ ಉಳಿಸಿಕೊಂಡಿದೆ ಎಂದಿದೆ.ಇದನ್ನೂ ಓದಿ:ನಾಲ್ಕನೇ ದೀರ್ಘಾವಧಿಯ ಪ್ರಧಾನಿ ನಮೋ: ನಾಳೆ ಏಳನೇ ಬಾರಿ ಕೆಂಪುಕೋಟೆಯಿಂದ ಭಾಷಣ
ಹದಿನಾರು ವರ್ಷಗಳ ಪೈಕಿ ಎಲ್ಲ ವರ್ಷವೂ ಆಲ್ಟೋ ನಂ.1 ಸ್ಥಾನದಲ್ಲಿದೆ. ಅಲ್ಲದೆ, ಇದುವರೆಗೆ  40 ಲಕ್ಷ ಕಾರು ಮಾರಾಟವಾಗಿದೆ. ಭಾರತದಲ್ಲಿ ಇದೊಂದು ದಾಖಲೆ. ಇಷ್ಟು ಪ್ರಮಾಣದಲ್ಲಿ ಇದುವರೆಗೆ ಯಾವ ಮಾದರಿಯ ಕಾರು ಕೂಡ ಮಾರಾಟವಾಗಿಲ್ಲ ಎಂದು ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್​ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
ಭಾರತದಲ್ಲಿ ಆಲ್ಟೋ ಮೊದಲ ಬಾರಿಗೆ 2004ರಲ್ಲಿ ರಸ್ತೆ ಇಳಿದ್ದಿದ್ದು, 2008ರಲ್ಲಿ 10 ಲಕ್ಷ ಕಾರುಗಳು ಮಾರಾಟವಾಗಿದ್ದವು. ಅದಾಗಿ 2012ರ ವೇಳೆಗೆ 20 ಲಕ್ಷ, 2016ರ ವೇಳೆಗೆ 30 ಲಕ್ಷ ಕಾರುಗಳು ಮಾರಾಟವಾಗಿದ್ದವು. 2019ರ ನವೆಂಬರ್ ವೇಳೆಗೆ 38 ಲಕ್ಷ ಕಾರುಗಳು ಮಾರಾಟವಾಗಿದ್ದವು. ಇದೊಂದು ದಾಖಲೆಯಾಗಿತ್ತು. ಅದುವರೆಗೆ ಭಾರತದ ಯಾವುದೇ ಕಾರುಗಳು ಇಷ್ಟು ಮಾರಾಟವಾಗಿರಲಿಲ್ಲ ಎಂದು ಶ್ರೀವಾಸ್ತವ ಹೇಳಿದರು.ಇದನ್ನೂ ಓದಿ:ನಾಳೆಯಿಂದ ರಾಜಸ್ಥಾನ ವಿಧಾನಸಭೆ ಕಲಾಪ; ಸಿಎಂ ಅಶೋಕ್ ಗೆಹ್ಲೋಟ್​​ರನ್ನು ಭೇಟಿಯಾದ ಸಚಿನ್​ ಪೈಲಟ್​
ಇತ್ತೀಚಿನ ವರ್ಷಗಳಲ್ಲಿ ಅಲ್ಟೋ ಕಾರಿಗೆ ಸಮರ್ಥ ಎದುರಾಳಿ ಕಾರುಗಳು ಸೃಷ್ಟಿಯಾಗಿದ್ದು ಅವುಗಳ ಪೈಕಿ ರೆನಾಲ್ಟ್​ ಕ್ವಿಡ್ ಒಂದು. ಸಣ್ಣ ಕಾರು ಖರೀದಿದಾರರು ಆ ಕಾರನ್ನೂ ಇಷ್ಟಪಡುತ್ತಿದ್ದಾರೆ. ಆದರೆ, ಇದು ಆಲ್ಟೋವನ್ನು ಹಿಂದಿಕ್ಕುವಲ್ಲಿ ಸಫಲವಾಗಿಲ್ಲ. ಸಕಾಲಿಕವಾಗಿ ಅಪ್ಡೇಟ್ ಆಗುತ್ತ ಬಂದ ಕಾರಣ ಆಲ್ಟೋ ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು. (ಏಜೆನ್ಸೀಸ್)
VIDEO: ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕ ಕಾರು ಇದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
