ದೆಹಲಿ:ಮೆಟಾ ಮಾಲೀಕತ್ವದ ವಾಟ್ಸ್​​​​ಆ್ಯಪ್​ ಕಂಪನಿಯು 2023ರ ಏಪ್ರಿಲ್​ನಲ್ಲಿ ಭಾರತದ 74 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಐಟಿ ನಿಯಮಗಳ ಅನುಸಾರವಾಗಿ ಕಂಪನಿಯು ಮಾಸಿಕ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಎಲ್ಲ ವಿವರಗಳನ್ನು ನಮೂದಿಸಲಾಗಿದೆ.
ಇದನ್ನೂ ಓದಿ:ಹಾನಿ ನಿವಾರಣೆ, ನಾಯಕತ್ವದ ಸಮಾಲೋಚನೆ: ಬಿಎಸ್​ವೈ ಭೇಟಿ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಈ ವರದಿಯು 2023ರ ಏಪ್ರಿಲ್ 1ರಿಂದ ಏಪ್ರಿಲ್ 30ರ ನಡುವಿನ ಅವಧಿಯದಾಗಿದ್ದು, ಭಾರತದ ಬಳಕೆದಾರರ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ವಾಟ್ಸ್​​​​ಆ್ಯಪ್​​ ತೆಗೆದುಕೊಂಡ ಕ್ರಮ ಹಾಗೂ ಕಾನೂನು, ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇಲ್ಮನವಿ ಸಮಿತಿಯಿಂದ ತೆಗೆದುಕೊಳ್ಳಲಾದ ಕ್ರಮ ಮತ್ತು ಖಾತೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ.
ಈ ಕುರಿತು ವಾಟ್ಸ್​​​​ಆ್ಯಪ್​​ ವಕ್ತಾರರು ಮಾತನಾಡಿದ್ದು, 2021ರ ಐಟಿ ನಿಯಮಗಳ ಅನುಸಾರವಾಗಿ ನಾವು ಏಪ್ರಿಲ್ ತಿಂಗಳ ವರದಿಯನ್ನು ಪ್ರಕಟಿಸಿದ್ದೇವೆ. ಬಳಕೆದಾರ ಸುರಕ್ಷತಾ ವರದಿಯು, ಗ್ರಾಹಕರಿಂದ ಸ್ವೀಕರಿಸಿದ ದೂರುಗಳ ಆಧಾರಕ್ಕನುಗುಣವಾದ ತೆಗೆದುಕೊಳ್ಳಲಾದ ಕ್ರಮ ಮತ್ತು ನಮ್ಮ ಪ್ಲಾಟ್‌ಫಾರ್ಮ್‌ಗೆ ಅನುಸಾರವಾಗಿ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − five =
Remember me
