ಬೆಂಗಳೂರು:ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಭಾರತದಲ್ಲಿ ಪ್ರಮುಖ ಕ್ರಮ ಕೈಗೊಂಡಿದೆ. ಫೆಬ್ರವರಿ ತಿಂಗಳಲ್ಲಿ ದಾಖಲೆಯ ಅಂದರೆ 76.28 ಲಕ್ಷ ಖಾತೆಗಳನ್ನು ವಾಟ್ಸಪ್ ನಿಷೇಧಿಸಿದೆ. ಇದಕ್ಕೂ ಮುನ್ನ ಕಳೆದ ಜನವರಿಯಲ್ಲಿ ವಾಟ್ಸಾಪ್ ಒಟ್ಟು 67.28 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ ವಾಟ್ಸಪ್ ನಲ್ಲಿ ಅಶ್ಲೀಲ ಅಥವಾ ದ್ವೇಷಪೂರಿತ ವಿಷಯವನ್ನು ಹಂಚಿಕೊಳ್ಳುವಂತಿಲ್ಲ.
ಈ ಕಾರಣಗಳಿಗಾಗಿ ಖಾತೆ ನಿಷೇಧ
ಮಾಹಿತಿಯ ಪ್ರಕಾರ, ಕಂಪನಿಯ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಖಾತೆಗಳನ್ನು ವಾಟ್ಸಪ್ ನಿಷೇಧಿಸುತ್ತದೆ. ವಾಟ್ಸಾಪ್‌ನಲ್ಲಿ ಯಾವುದೇ ಬಳಕೆದಾರರು ಅಶ್ಲೀಲ, ದ್ವೇಷಪೂರಿತ, ಕಾನೂನುಬಾಹಿರ, ಮಾನಹಾನಿಕರ, ಬೆದರಿಕೆ, ಕಿರುಕುಳ ಅಥವಾ ಪ್ರಚೋದಿಸುವ ವಿಷಯವನ್ನು ಹಂಚಿಕೊಳ್ಳುವಂತಿಲ್ಲ. ಕಾಲಕಾಲಕ್ಕೆ ವಾಟ್ಸಾಪ್ ಈ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಲೇ ಇರುತ್ತದೆ.
50 ಕೋಟಿಗೂ ಹೆಚ್ಚು ಬಳಕೆದಾರರು
ಮಾಹಿತಿಯ ಪ್ರಕಾರ, ಭಾರತದಲ್ಲಿ 50 ಕೋಟಿಗೂ ಹೆಚ್ಚು ಬಳಕೆದಾರರು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಅನ್ನು ಬಳಸುತ್ತಾರೆ. ಕಳೆದ ಫೆಬ್ರವರಿಯಲ್ಲಿ ದೇಶಾದ್ಯಂತ ಒಟ್ಟು 16,618 ದೂರುಗಳು ಬಂದಿವೆ ಎಂದು ಕಂಪನಿ ಸೋಮವಾರ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ವರದಿಯ ಪ್ರಕಾರ, ಕಂಪನಿಯು 2021 ರ ಐಟಿ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ವಾಟ್ಸಾಪ್ ನಿರಂತರವಾಗಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿರುತ್ತದೆ.
ಅಂದಹಾಗೆ ವಾಣಿಜ್ಯ ಅಂತರರಾಷ್ಟ್ರೀಯ ಸಂದೇಶಗಳ ಬೆಲೆಯನ್ನು 20 ಪಟ್ಟು ಹೆಚ್ಚಿಸಲು ವಾಟ್ಸಪ್ ನಿರ್ಧರಿಸಿದೆ. ಈ ನಿರ್ಧಾರವು ಜೂನ್ 1, 2024 ರಿಂದ ಜಾರಿಗೆ ಬರಲಿದೆ. ಕಂಪನಿಯ ಪ್ರಕಾರ, ಸಾಮಾನ್ಯ ಬಳಕೆದಾರರು ವಾಟ್ಸಾಪ್ ಅನ್ನು ಮೊದಲಿನಂತೆ ಉಚಿತವಾಗಿ ಬಳಸುವುದನ್ನು ಮುಂದುವರಿಸುತ್ತಾರೆ.  ಈ ಹೊಸ ನಿಯಮವು ಬ್ಯುಸಿನೆಸ್ ಎಸ್ಎಂಎಸ್’ಗೆ ಮಾತ್ರ ಅನ್ವಯಿಸುತ್ತದೆ.
ದೇಶದಲ್ಲಿ 3 ತಿಂಗಳು ಭಾರಿ ತಾಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
