ನವದೆಹಲಿ:ನಾವು ನೀವು ನಿತ್ಯ ಬಳಸುವ ವಾಟ್ಸಪ್​ ಹ್ಯಾಕ್​ ಆಗಿದ್ದು ನಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟಕ್ಕಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಅತ್ಯಂತ ಸುರಕ್ಷಿತ ಎನ್ನಲಾಗುವ ಈ ಆ್ಯಪ್​ ಮೇಲೆ ಈಗ ಹ್ಯಾಕ್​ ಆಗಿದ್ದು ಮಾಹಿತಿ ಸೋರಿಕೆಯ ಗಂಭೀರ ಆರೋಪ ಬಿದ್ದಿದೆ.
ಈ ಆರೋಪದ ಪ್ರಕಾರ, ಯಾರೋ ವಾಟ್ಸಪ್​ಅನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು ಸುಮಾರು 50 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈಗ ಆ ಮಾಹಿತಿ ಮಾರಾಟಕ್ಕಿದೆ ಎಂದು ಹೇಳಲಾಗುತ್ತಿದೆ.
ಈಗ ನಟರೊಬ್ಬರು ಸೆಲ್ ಸಂಖ್ಯೆಗಳು ಸೇರಿದಂತೆ 487 ಮಿಲಿಯನ್ ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುವುದಕ್ಕೆ ಹ್ಯಾಕರ್​ ಸೈಟ್​ನಲ್ಲಿ ಜಾಹೀರಾತು ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಮಾರಾಟಕ್ಕೆ 3.2 ಕೋಟಿ ಅಮೆರಿಕ ಮೂಲದ ಬಳಕೆದಾರರನ್ನು ಒಳಗೊಂಡಿದ್ದು ಈಜಿಪ್ಟ್, ಇಟಲಿ, ಸೌದಿ ಅರೇಬಿಯಾ, ಫ್ರಾನ್ಸ್ ಮತ್ತು ಟರ್ಕಿ ಸೇರಿದಂತೆ 84 ಇತರ ರಾಷ್ಟ್ರಗಳ ಬಳಕೆದಾರರ ಮಾಹಿತಿಯೂ ಸೋರಿಕೆ ಆಗಿದೆ ಎಂದು ಪಟ್ಟಿ ಹೇಳುತ್ತಿದೆ. ಕದ್ದ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಫಿಶಿಂಗ್ ಮತ್ತು ಇತರ ಮೋಸದ ಕಾರ್ಯಾಚರಣೆಗಳಿಗೆ ಬಳಸಬಹುದು. ವಾಟ್ಸಪ್​ನ ಮಾತೃ ಸಂಸ್ಥೆ ಮೆಟಾ ಈ ಆರೋಪಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದಿಂದ ವಾಟ್ಸಪ್​ ಬಳಕೆದಾರರ ಮಾಹಿತಿಯನ್ನು ಕೇವಲ 7,000 ಯುಎಸ್​ ಡಾಲರ್​ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬ್ರಿಟನ್ ಜನರ ಮಾಹಿತಿ 2500 ಡಾಲರ್​ಗಳಿಗೆ ಮಾರಾಟ ಆದರೆ​ ಜರ್ಮನಿಯ ಬಳಕೆದಾರರ ಮಾಹಿತಿಗೆ ಕೇವಲ 2,500 ಡಾಲರ್​ ಬೆಲೆ! ವರದಿಯ ಪ್ರಕಾರ, ಭಾರತದ ಯಾವುದೇ ಬಳಕೆದಾರರ ಪ್ರೊಫೈಲ್‌ಗಳು ಪಟ್ಟಿಯಲ್ಲಿಲ್ಲ. ಇದಂತೂ ಆಶ್ಚರ್ಯಕರ ಮಾಹಿತಿ ಆಗಿದೆ.
ಸೈಬರ್‌ನ್ಯೂಸ್ ಸಂಸ್ಥೆ ಹ್ಯಾಕರ್​ಗಳಿಂದ ಅಮೆರಿಕ ಹಾಗೂ ಬ್ರಿಟನ್​ ಜನರ ಫೋನ್​ ನಂಬರ್​ನ ಮಾಹಿತಿಯ ಸ್ಯಾಂಪಲ್​ ಕೇಳಿದಾಗ 1097 ನಿಂದ ಹಾಗೂ 817 ನಿಂದ ಶುರುವಾಗುವ ನಂಬರ್​ಗಳನ್ನು ಹ್ಯಾಕರ್​ಗಳು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
