ನವದೆಹಲಿ:ವಾಟ್ಸ್​ಆ್ಯಪ್​ ಪ್ರೈವಸಿ ಸೆಕ್ಯುರಿಟಿ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿರುವಾಗಲೇ ಇದೀಗ ವಾಟ್ಸ್​ಆ್ಯಪ್​ನಲ್ಲಿ ಮತ್ತೊಂದು ದೋಷ ಕಂಡುಬಂದಿದೆ. ಖಾಸಗಿ ಗ್ರೂಪಗಳಿಗೆ ಸೇರಲು ಗೂಗಲ್​ನಲ್ಲೇ ಲಿಂಕ್​ ಲಭ್ಯವಾಗಿದ್ದು, ಇದರ ಕುರಿತು ವರದಿ ಪ್ರಕಟವಾಗುತ್ತಿದ್ದಂತೆಯೇ ಸಂಸ್ಥೆ ತಪ್ಪನ್ನು ತಿದ್ದಿಕೊಂಡಂತೆ ಕಂಡುಬಂದಿದೆ.
ಇದನ್ನೂ ಓದಿ:ದೇಶದ ಮೊದಲ ಲಿಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ!
ವಾಟ್ಸ್​ಆ್ಯಪ್​ನ ಈ ದೋಷವನ್ನು ಜಾಲತಾಣವೊಂದು ಬಯಲಿಗೆಳೆದಿದೆ. ವಾಟ್ಸ್​ಆ್ಯಪ್​ ಗ್ರೂಪುಗಳಲ್ಲಿ ಇಂಡೆಕ್ಸಿಂಗ್​ ಆಪ್ಷನ್ ಆಯ್ಕೆ ಮಾಡಿದ್ದರೆ ಅಂತಹ ಗ್ರೂಪುಗಳ ಲಿಂಕ್​ ಗೂಗಲ್​ನಲ್ಲಿ ಲಭ್ಯವಾಗಿದೆ. ಆ ಲಿಂಕ್​ನ್ನು ಕ್ಲಿಕ್ಕಿಸುವ ಮೂಲಕ ಅಪರಿಚಿತರು ನಮ್ಮ ಖಾಸಗಿ ಗ್ರೂಪುಗಳಿಗೆ (ಉದಾಹರಣೆಗೆ ಫ್ಯಾಮಿಲಿ ಗ್ರೂಪ್​, ಕ್ಲೋಸ್​ ಫ್ರೆಂಡ್ಸ್ ಗ್ರೂಪು, ಇತ್ಯಾದಿ) ಸೇರಬಹುದಿತ್ತು. ನಂತರ ಗ್ರೂಪಿನ ಯಾವುದೇ ಸದಸ್ಯನ ಫೋನ್​ ನಂಬರನ್ನು ಯಾವುದೇ ಸಮಸ್ಯೆಯಿಲ್ಲದೆಯೆ ತೆಗೆದುಕೊಳ್ಳಬಹುದಿತ್ತು.
ಈ ದೋಷದ ಕುರಿತು ವರದಿ ಪ್ರಕಟವಾಗುತ್ತಿದ್ದಂತೆ ವಾಟ್ಸ್​ಆ್ಯಪ್​ ಸ್ಪಂದಿಸಿದೆ. ನಮ್ಮಲ್ಲಿ ಡೀಪ್​ ಸೆಕ್ಯುರಿಟಿ ಇರುವ ಚಾಟಿಂಗ್​ ಗ್ರೂಪುಗಳಿಗೆ ನೊಇಂಡೆಕ್ಸ್​ನ್ನು ಅಟಾಮೆಟಿಕ್​ ಆಗಿ ಆಯ್ಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ. ಆದ್ದರಿಂದ ಇಂತಹ ಯಾವುದೇ ಸಮಸ್ಯೆ ವಾಟ್ಸ್​ಆ್ಯಪ್​ನಲ್ಲಿ ಇಲ್ಲ ಎಂದೂ ಸಂಸ್ಥೆ ವಾದಿಸಿದೆ. ಇದಾದ ಕೆಲವೇ ಸಮಯದಲ್ಲಿ ದೋಷ ಸರಿಹೋಗಿದ್ದು, ವಾಟ್ಸ್​ಆ್ಯಪ್​ ಖಾಸಗಿ ಗ್ರೂಪುಗಳಿಗೆ ಸೇರುವ ಲಿಂಕ್​ ಗೂಗಲ್​ನಿಂದ ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಆದರೆ ವಾಟ್ಸ್​ಆ್ಯಪ್​ ಸಂಸ್ಥೆ ದೋಷವನ್ನು ಸರಿಪಡಿಸಿಕೊಂಡಿರುವ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ:ಕೃಷಿ ಕಾಯ್ದೆ ತಡೆಗೆ ಸುಪ್ರೀಂ ಸೂಚನೆ; ನೀವು ತಡೆಯದಿದ್ದರೆ ನಾವೇ ತಡೆಯುತ್ತೇವೆ ಎಂದ ಸುಪ್ರೀಂ
ಅಂದ ಹಾಗೆ ಇಂತಹ ದೋಷ ಕಂಡುಬರುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿಯೂ ಒಮ್ಮೆ ಇಂತದ್ದೇ ತಾಂತ್ರಿಕ ದೋಷ ಉಂಟಾಗಿತ್ತು. ಈ ಕುರಿತು ವರದಿಗಳು ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಸಂಸ್ಥೆ ದೋಷವನ್ನು ಸರಿಪಡಿಸಿಕೊಂಡಿತ್ತು. (ಏಜೆನ್ಸೀಸ್​)
Your@WhatsAppgroups may not be as secure as you think they are. WhatsApp Group Chat Invite Links, User Profiles Made Public Again on@GoogleAgain.Story –https://t.co/GK2KrCtm8J#Infosec#Privacy#Whatsapp#infosecurity#CyberSecurity#GDPR#DataSecurity#dataprotectionpic.twitter.com/7PvLYuM9xD
— Rajshekhar Rajaharia (@rajaharia)January 10, 2021

ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one + nine =
Remember me
