ನವದೆಹಲಿ:ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಹೊಸದಾಗಿ 3 ಫೀಚರ್​ಗಳನ್ನು ಪರಿಚಯಿಸುತ್ತಿದೆ. ಇನ್ನು ಮುಂದೆ ವಾಟ್ಸ್​​ಆ್ಯಪ್ ಗ್ರೂಪ್​​ಗಳಲ್ಲಿ 1024 ಜನರನ್ನು ಸದಸ್ಯರನ್ನಾಗಿಸುವ ಅವಕಾಶ ನೀಡಿದೆ. ಇದರೊಂದಿಗೆ ವಿಡಿಯೋ ಕರೆಯಲ್ಲಿ 32 ಮಂದಿ ಒಟ್ಟಿಗೆ ಮಾತನಾಡಬಹುದು. ಜತೆಗೆ ಚಾಟ್​ಪೋಲ್ ನಡೆಸುವ ಸೌಲಭ್ಯವನ್ನು ನೀಡುತ್ತಿದೆ.
ಸದ್ಯ ವಾಟ್ಸ್​ಆ್ಯಪ್​ ಗ್ರೂಪುಗಳಲ್ಲಿ 512 ಜನರಿಗೆ ಮಾತ್ರ ಸದಸ್ಯರಾಗಲು ಸಾದ್ಯವಿತ್ತು. ಇದೀಗ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಒಟ್ಟು ಸದಸ್ಯರ ಸಂಖ್ಯೆಯನ್ನು 1024ಕ್ಕೆ ಹೆಚ್ಚಿಸಿದ್ದಾರೆ.
ಮುಂದಿನ ಹಂತದಲ್ಲಿ ಚಾಟ್ ಪೋಲ್‌ಗಳನ್ನು ರಚಿಸುವ ಅವಕಾಶವನ್ನು ವಾಟ್ಸ್​ಆ್ಯಪ್ ನೀಡಲು ಮುಂದಾಗಿದೆ. ಇದರಿಂದ ನಿಖರವಾದ ವಿಷಯದ ಬಗೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
ವೀಡಿಯೊ ಕರೆ ಮಾಡುವ ಸಂದರ್ಭದಲ್ಲಿ 32-ವ್ಯಕ್ತಿಗಳ ಜತೆಗೆ ಇನ್ನು ಮುಂದೆ ಮಾತನಾಡಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿವಿಧ ಸಂದರ್ಭದಲ್ಲಿ ಚರ್ಚೆಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಇತ್ತೀಚೆಗೆಷ್ಟೇ ವಾಟ್ಸ್​ಆ್ಯಪ್ ಅವತಾರ್ ಇಮೋಜಿಗಳನ್ನು ಪರಚಯಿಸುವುದಾಗಿ ತಿಳಿಸಿತ್ತು. ಸದ್ಯ ಹೊಸದಾಗಿ ಸೇರ್ಪಡೆಯಾಗುತ್ತಿರುವ ಮೂರು ಫೀಚರ್​​ಗಳು ಮುಂದಿನ ತಿಂಗಳಿನಿಂದ ಬಳಕೆಗೆ ಅವಕಾಶವಿದೆ ಎಂದು ಕಂಪೆನಿ ತಿಳಿಸಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
