ನವದೆಹಲಿ: ವಾಟ್ಸ್ಯಾಪ್​ನಲ್ಲಿ ತಲೆನೋವು ಎಂದರೆ ಫಾರ್ವರ್ಡ್​ ಮೇಸೇಜ್​ಗಳು ಎಂದುಕೊಳ್ಳುತ್ತಿರಾದರೆ, ಅವುಗಳು ಹೊರಬಿದ್ದಿದ್ದು ಎಲ್ಲಿಂದ? ಮೂಲವಾದರೂ ಯಾವುದು ಎಂಬುದನ್ನು ಇನ್ನು ಮೇಲೆ ಸುಲಭವಾಗಿ ಕಂಡುಕೊಳ್ಳಬಹುದು.
ಹೌದು…! ಇನ್ನುಮುಂದೆ ವಾಟ್ಸ್ಯಾಪ್​ನಲ್ಲಿ ‘ಸರ್ಚ್​ ದಿ ವೆಬ್​’ ಆಪ್ಷನ್​ ಇರಲಿದೆ. ಯಾವುದೇ ಫಾರ್ವಡ್​ ಮೇಸೇಜ್​ಗಳಲ್ಲಿರುವ ಮಾಹಿತಿಯ ಮೂಲ ಯಾವುದು ಎಂಬುದು ಗೊತ್ತಾಗಲಿದೆ.
ಇದನ್ನೂ ಓದಿ;ಕಾರು ಶೋರೂಮ್​ನ ಸಿಬ್ಬಂದಿ ಸ್ಥಾನ ಪಡೆಯಿತು ಬೀದಿನಾಯಿ…! ಎಲ್ಲಿ, ಹೇಗೆ?
ವಾಟ್ಸ್ಯಾಪ್​ನ ಲೇಟೆಸ್ಟ್​ ವರ್ಷನ್​ನಲ್ಲಿ ಇಂಥದ್ದೊಂದು ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ ಇದು ಬ್ರೆಜಿಲ್​, ಇಟಲಿ, ಐರ್ಲೆಂಡ್​, ಮೆಕ್ಸಿಕೋ, ಸ್ಪೇನ್​, ಇಂಗ್ಲೆಂಡ್​ ಹಾಗೂ ಅಮೆರಿಕದಲ್ಲಿ ಲಭ್ಯವಿದೆ.
ವಾಟ್ಸ್ಯಾಪ್​ನಲ್ಲಿ ಬಹಳಷ್ಟು ಬಾರಿ ಹರಿದಾಡುವ ಮೇಸೇಜ್​ಗಳ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚುವ ಸರಳ ಅವಕಾಶ ಕಲ್ಪಿಸುವುದರಿಂದ ಅದರ ಸುದ್ದಿ ಮೂಲ ಅಥವಾ ಮಾಹಿತಿ ಮೂಲ ಯಾವುದೆಂದು ಕಂಡುಕೊಳ್ಳಬಹುದು ಎಂದು ವಾಟ್ಸ್ಯಾಪ್​ ತಿಳಿಸಿದೆ.
ಇದನ್ನೂ ಓದಿ;ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್​ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ; ಒಂದೇ ಕುಟುಂಬದ 13 ಜನ ಪಾಸ್​
ಮೇಸೇಜ್​ ನೋಡದೆ ಅಥವಾ ಅದನ್ನು ಇನ್ನೊಬ್ಬರಿಗೆ ಕಳುಹಿಸದೇ ತಮ್ಮ ಬ್ರೌಸರ್​ಗಳ ಮೂಲಕ ಅಪ್​ಲೋಡ್​ ಮಾಡುವ ಅವಕಾಶ ಇದರಲ್ಲಿರಲಿದೆ. ಸದ್ಯ ಭಾರತದಲ್ಲಿ ಈ ಸೌಲಭ್ಯ ಯಾವಾಗ ಲಬ್ಯವಾಗಲಿದೆ ಎಂಬುದನ್ನು ಕಂಪನಿ ತಿಳಿಸಿಲ್ಲ. ಆದರೆ, ಆದಷ್ಟು ಶೀಘ್ರ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.ಇದಲ್ಲದೇ, ಬೇರೆ ಬೇರೆ ಡಿವೈಸ್​ಗಳಲ್ಲಿ ಒಂದೇ ಅಕೌಂಟ್​ ಮೂಲಕ ಲಾಗಿನ್​ ಆಗುವ ಸೌಲಭ್ಯವನ್ನು ಕಲ್ಪಿಸುವ ಕುರಿತು ವಾಟ್ಸ್ಯಾಪ್​ ಕಾರ್ಯೋನ್ಮುಖವಾಗಿದೆ.
ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
