ನವದೆಹಲಿ:ವಿಶ್ವದಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್​​ಫಾರ್ಮ್ ಆಗಿರುವ ವಾಟ್ಸ್​ಆ್ಯಪ್​ ಹೊಚ್ಚ ಹೊಸ ಆಕರ್ಷಕ ಫೀಚರ್​ಗಳನ್ನು ನೀಡುವ ಮೂಲಕ ಮುನ್ನೆಲೆಯಲ್ಲಿದೆ. ಇದೀಗ ಮೆಟಾ ಒಡೆತನದ ಕಂಪನಿಯೂ ತನ್ನ ಬಳಕೆದಾರರಿಗೆ ಹೊಸ ಫೀಚರ್​ ಒಂದನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದ್ದು, ಈ ಬಾರಿಯೂ ಹೊಸ ವೈಶಿಷ್ಟ್ಯವನ್ನು ತರಲು ಸಿದ್ಧತೆ ನಡೆಸಿದೆ.
ಮೆಟಾ ಒಡೆತನದ ಕಂಪನಿಯೂ ಇದೀಗ ಇಂಟರ್ನೆಟ್ ಇಲ್ಲದೇ ಡಾಕ್ಯೂಮೆಂಟ್, ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಹೊಸ ಒಫೀಚರ್​ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, ಯಾವುದೇ ಫೈಲ್‌ಗಳನ್ನು ಸುಲಭವಾಗಿ ಕಳುಹಿಸಲು ಸಾಧ್ಯವಾಗುತ್ತದೆ. ಆರಂಭದಲ್ಲಿ ಈ ಹೊಸ ಫೀಚರ್​ಅನ್ನು ಆ್ಯಂಡ್ರಾಯ್ಡ್​ ಮೊಬೈಲ್​ ಬಳಕೆದಾರರಿಗೆ ನೀಡಲು ಮುಂದಾಗಿದ್ದು, ಆ ಬಳಿಕ ಆ್ಯಪಲ್​ ಬಳಕೆದಾರರಿಗೆ ಪರಿಚಯಿಸಲು ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ:ಆತನ ಐಡಿಯಾಗಳೋ…; ಕ್ಯಾಪ್ಟನ್ಸಿ ವಿಚಾರವಾಗಿ​ ಗೌತಿ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ
ಫೈಲ್ ಹಂಚಿಕೊಳ್ಳಲು, ನೀವು ಮತ್ತೊಬ್ಬ ವ್ಯಕ್ತಿಯ ಮೊಬೈಲ್​ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದು ವೈ-ಫೈ ಅಥವಾ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಈ ಮೂಲಕ ನೀವು ಇಂಟರ್ನೆಟ್ ಇಲ್ಲದೆ ನಿಮ್ಮ ಸುತ್ತಲಿನ ಜನರಿಗೆ ಫೈಲ್‌ಗಳನ್ನು ಕಳುಹಿಸಬಹುದು. ಇಂಟರ್ನೆಟ್ ವೇಗವು ನಿಧಾನವಾಗಿರುವ ಅಥವಾ ಕಾರ್ಯನಿರ್ವಹಿಸದಿರುವ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ.
ಈ ಹೊಸ ವೈಶಿಷ್ಟ್ಯದೊಂದಿಗೆ, ನೀವು ಉತ್ತಮ ಗುಣಮಟ್ಟದ ಫೋಟೊಗಳು, ವಿಡಿಯೊಗಳು ಮತ್ತು ಡಾಕ್ಯುಮೆಂಟ್‌ಗಳಂತಹ ದೊಡ್ಡ ಫೈಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು. ಇನ್ನೂ ಉತ್ತಮವಾದ ವಿಷಯವೆಂದರೆ ನೀವು ಆಂಡ್ರಾಯ್ಡ್ ಅಥವಾ ಐಫೋನ್ ಅನ್ನು ಬಳಸುತ್ತಿದ್ದರೂ ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + six =
Remember me
