ನವದೆಹಲಿ :ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ.ಹೆಚ್.ಒ.)ಯ ಸಹಭಾಗಿತ್ವದಲ್ಲಿ ಸಾಮಾಜಿಕ ನೆಟ್​ವರ್ಕಿಂಗ್ ಸಂಸ್ಥೆ ವಾಟ್ಸ್​ಆ್ಯಪ್, ಹೊಸ ಸ್ಟಿಕ್ಕರ್ ಪ್ಯಾಕ್​ ಒಂದನ್ನು ಬಿಡುಗಡೆ ಮಾಡಿದೆ. “ವಾಕ್ಸೀನ್ಸ್ ಫಾರ್ ಆಲ್” ಎಂಬ ಶೀರ್ಷಿಕೆಯ ಈ ಸ್ಟಿಕ್ಕರ್​ ಪ್ಯಾಕ್​ಅನ್ನು ಕರೊನಾ ಲಸಿಕೆಗಳ ವಿಷಯವನ್ನು ಆಧರಿಸಿ ಡಬ್ಲ್ಯೂ.ಹೆಚ್.ಒ. ವಿನ್ಯಾಸಗೊಳಿಸಿದೆ ಎನ್ನಲಾಗಿದೆ.
ಕರೊನಾ ಲಸಿಕೆಗಳ ಬಗ್ಗೆ ತನ್ನ ಬಳಕೆದಾರರು ಹೆಚ್ಚು ಸೃಜನಶೀಲವಾಗಿ ಸಂಭಾಷಣೆ ನಡೆಸಲು ಮತ್ತು ಸಂತೋಷ ವ್ಯಕ್ತಪಡಿಸಲು ಈ ಸ್ಟಿಕ್ಕರ್ ಪ್ಯಾಕ್ಅನ್ನು ವಿನ್ಯಾಸಗೊಳಿಸಲಾಗಿದೆ. ಹಾಗೇ, ಸಾಂಕ್ರಾಮಿಕದ ಸಂದರ್ಭದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮೆಚ್ಚುಗೆಯನ್ನು ತೋರಿಸಲು ಸಹಾಯಕವಾಗಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ರಾಜಧಾನಿಯ 260 ಕೇಂದ್ರಗಳಲ್ಲಿ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯ
“ಪ್ರಪಂಚದಾದ್ಯಂತ ಕರೊನಾ ಲಸಿಕೆಯನ್ನು ಹೊರತರಲಾಗುತ್ತಿರುವುದರಿಂದ, ಲಸಿಕೆ ತೆಗೆದುಕೊಳ್ಳುವುದನ್ನು ಉತ್ತೇಜಿಸುವ ಗುರಿಯಿಂದ ಈ ಪ್ಯಾಕ್​ಅನ್ನು ತರಲಾಗಿದೆ. ಇದು ಭರವಸೆಯನ್ನು ಪ್ರತಿನಿಧಿಸುತ್ತದೆ” ಎಂದು ಡಬ್ಲ್ಯೂ.ಹೆಚ್.ಒ.ನ ಡಿಜಿಟಲ್ ಚಾನೆಲ್‌ಗಳ ಟೀಮ್ ಲೀಡರ್ ಆಂಡಿ ಪ್ಯಾಟಿಸನ್ ಹೇಳಿದ್ದಾರೆ. “ಕೋವಿಡ್-19 ಲಸಿಕೆಗಳು ಗೇಮ್ ಚೇಂಜರ್ ಆಗಿವೆ. ಆದರೆ, ಸದ್ಯಕ್ಕೆ, ನಾವು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು, ದೈಹಿಕವಾಗಿ ದೂರವಿರಬೇಕು, ಜನಸಂದಣಿಯನ್ನು ತಪ್ಪಿಸಬೇಕು, ಒಳಾಂಗಣ ಸ್ಥಳಗಳಲ್ಲಿ ಚೆನ್ನಾಗಿ ಗಾಳಿ ಇರುವಂತೆ ನೋಡಿಕೊಳ್ಳಬೇಕು, ಮತ್ತು ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು” ಎಂದಿದ್ದಾರೆ.(ಏಜೆನ್ಸೀಸ್)
ಆರ್​​ಸಿಬಿಯ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್​​ಗೆ ಕರೊನಾ
VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
