ದೆಹಲಿ:ವಿಶ್ವದಾದ್ಯಂತ ಮಿಲಿಯನ್​ಗಟ್ಟಲೇ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​​ಆ್ಯಪ್​ ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಫೀಚರ್​​ನ್ನು ಹೊರತರುತ್ತಿದೆ.ಮೆಟಾ-ಮಾಲೀಕತ್ವದ ವಾಟ್ಸ್​​ಆ್ಯಪ್​​ ಸ್ಕ್ರೀನ್​​ ಶೇರಿಂಗ್​ ಎಂಬ ಹೊಸ ಫೀಚರ್​ನ್ನು ಒದಗಿಸಲು ಮುಂದಾಗಿದ್ದು, ಇದು ವೀಡಿಯೊ ಕರೆಗಳ ಸಮಯದಲ್ಲಿ ನಿಮ್ಮ ಪರದೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಸಹಾಯಕವಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳಲ್ಲಿ ಪೋಸ್ಟ್‌ಗಳ ಮೂಲಕ ಈ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ.ಇದನ್ನೂ ಓದಿ:VIDEO| ಶಾಲಾ ಬಾಲಕಿಯ ಮೇಲೆ ಭಯಾನಕವಾಗಿ ಪದೇ ಪದೇ ದಾಳಿ ಮಾಡಿದ ಹಸುಗಳುಜೂಮ್, ಮೈಕ್ರೋಸಾಫ್ಟ್, ಗೂಗಲ್ ಮೀಟ್ ಮತ್ತು ಸ್ಕೈಪ್‌ನಂತಹ ಸಾಂಪ್ರದಾಯಿಕ ವೀಡಿಯೊ-ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸ್ಪರ್ಧಿಸಲು ವ್ಯಾಟ್ಸ್​ಆ್ಯಪ್​ ಹೊಸ ಫೀಚರ್​ನ್ನು ನೀಡುವ ಮೂಲಕ ಮೆಟಾ ಬಳಕೆದಾರರಿಗೆ ಬೇರೆ ಫ್ಲಾಟ್​ಫಾರ್ಮ್​ನ ಮೇಲೆ ಅವಲಂಬನೆಯಾಗದಂತೆ ಮಹತ್ವದ ಹೆಜ್ಜೆಯನ್ನಿರಿಸಿದೆ. ಈ ವೈಶಿಷ್ಟ್ಯವು ಕೆಲವು ವಾರಗಳವರೆಗೆ ಆ್ಯಂಡ್ರಾಯ್ಡ್​​ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಇದು ಕ್ರಮೇಣ ಪ್ರಪಂಚದಾದ್ಯಂತದ ಎಲ್ಲಾ ಬಳಕೆದಾರರಿಗೆ ಸಿಗಲಿದೆ.ಸ್ಮಾರ್ಟ್‌ಫೋನ್‌ಗಳಲ್ಲಿ ಪಠ್ಯಗಳು ಮತ್ತು ಗ್ರಾಫಿಕ್ಸ್ ಅನ್ನು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡುವ ಮೂಲಕ ಇದು ಸ್ಕ್ರೀನ್ ಶೇರಿಂಗ್​ನ್ನು ಸುಲಭಗೊಳಿಸುವುದರ ಜತೆಗೆ ವೀಡಿಯೊ ಕರೆಗಳಲ್ಲಿ ಲ್ಯಾಂಡ್‌ಸ್ಕೇಪ್ ಮೋಡ್​​ನ್ನು ಸಹ ಪರಿಚಯಿಸಿದೆ.ಅಲ್ಲದೇ, ಕೆಲದಿನಗಳ ಹಿಂದೆ ವಾಟ್ಸ್​​ಆ್ಯಪ್​​ ವೇದಿಕೆಯಲ್ಲಿ ಬಳಕೆದಾರರು 60 ಸೆಕೆಂಡುಗಳವರೆಗೆ ವೀಡಿಯೊ ಸಂದೇಶಗಳನ್ನು ಕಳುಹಿಸಬಹುದಾದ ಕಿರು ವೀಡಿಯೊ ಸಂದೇಶದ ವಿಶಿಷ್ಟ ಫೀಚರ್​ನ್ನು ಒದಗಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 8 =
Remember me
