ಬೆಂಗಳೂರು:ಮೆಸೇಜಿಂಗ್​ ಆ್ಯಪ್​ನ ಫೀಚರ್​ಗಳಲ್ಲಿ ಬಹಳಷ್ಟು ಅಡ್ವಾನ್ಸ್ಡ್​​ ಆಗಿರುವ ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಒಂದೊಂದೇ ಅಪ್​ಡೇಟ್​ಗಳನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ ಇದೀಗ ಮತ್ತೊಂದು ಅಪ್​ಡೇಟ್​ ಕೊಟ್ಟಿದೆ.
ಟೆಲಿಗ್ರಾಂ ಆ್ಯಪ್​ನಲ್ಲಿ ಹೆಚ್ಚಿನ ಫೈಲ್​ ಟ್ರಾನ್ಸ್​ಫರ್​ಗೆ ಅವಕಾಶ ಇರುವಂತೆ ಅದೇ ದಾರಿಯಲ್ಲಿ ಸಾಗಿದ ವಾಟ್ಸ್​ಆ್ಯಪ್​ 2 ಜಿಬಿ ಫೈಲ್​ ಶೇರಿಂಗ್ ಅವಕಾಶ ನೀಡಿತ್ತು. ಟೆಲಿಗ್ರಾಮ್​ನಲ್ಲಿರುವ ಮತ್ತೊಂದು ಆಪ್ಷನ್​ ಎಂದರೆ ಮೆಸೇಜ್​ಗಳಿಗೆ ರಿಯಾಕ್ಷನ್​. ಅದನ್ನೂ ವಾಟ್ಸ್​ಆ್ಯಪ್​ ಇತ್ತೀಚೆಗೆ ನೀಡಿದೆ.
ಇದೀಗ ಅದು ತನ್ನ ಗ್ರೂಪ್ ಮೆಂಬರ್ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ ವಾಟ್ಸ್​ಆ್ಯಪ್​ನಲ್ಲಿ ಗ್ರೂಪ್​ ಗರಿಷ್ಠ ಮಿತಿ 256 ಇದ್ದು, ಅದನ್ನು ಈಗ ದುಪ್ಪಟ್ಟು ಮಾಡಲಾಗಿದೆ. ಅಂದರೆ ಇನ್ನುಮುಂದೆ ವಾಟ್ಸ್​ಆ್ಯಪ್​ನಲ್ಲಿ 512 ನಂಬರ್​ಗಳನ್ನು ಗ್ರೂಪ್​ನಲ್ಲಿ ಸೇರಿಸಬಹುದಾಗಿದೆ.

ಇದು ಬೀಟಾ ಯೂಸರ್​ಗಳಿಗೆ ಬಹುತೇಕ ಈಗಾಗಲೇ ಸಿಗಲಾರಂಭಿಸಿದ್ದು, ಉಳಿದವರಿಗೆ ಸದ್ಯದಲ್ಲೇ ಲಭ್ಯವಾಗಲಿದೆ. ಟೆಲಿಗ್ರಾಂ ಆ್ಯಪ್​ನಲ್ಲಿ ಈ ಸಾಮರ್ಥ್ಯ 2 ಲಕ್ಷ ಇದ್ದರೂ ಸದ್ಯದ ಅಪ್​ಡೇಟ್​ನಿಂದ ವಾಟ್ಸ್​ಆ್ಯಪ್​ ಬಳಕೆದಾರರು ಒಂದಷ್ಟು ಖುಷಿಯಾಗಿರುವುದಂತೂ ನಿಜ.
WhatsApp is releasing larger groups with 512 participants to everyone!You can finally create and join groups with up to 512 people by using the latest versions of WhatsApp for Android, iOS, and Desktop!https://t.co/KEGmGwR3De— WABetaInfo (@WABetaInfo)June 10, 2022
WhatsApp is releasing larger groups with 512 participants to everyone!You can finally create and join groups with up to 512 people by using the latest versions of WhatsApp for Android, iOS, and Desktop!https://t.co/KEGmGwR3De
ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
