ನವದೆಹಲಿ:ಹಲವು ವರ್ಷಗಳಿಂದ ವಾಟ್ಸ್​ಆ್ಯಪ್​ ಪೇ ಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಆನ್​ಲೈನ್​ ಜಗತ್ತಿಗೆ ಹೊಂದಿಕೊಂಡು ಬದುಕುತ್ತಿರುವ ನಮಗೆ ಗೂಗಲ್​ ಪೇ, ಫೋನ್​ ಪೇ, ಪೇಟಿಎಂ ಹೊರೆತಾಗಿ ವಾಟ್ಸ್​ಆ್ಯಪ್​ನಲ್ಲಿಯೂ ಹಣ ಕಳುಹಿಸುವ, ವ್ಯವಹಾರ ಮಾಡುವ ಸದಾವಕಾಶ ಇದೀಗ ಬಂದಿದೆ. ಬಹು ನಿರೀಕ್ಷಿತ ವಾಟ್ಸ್​ಆ್ಯಪ್​ ಪೇ ಸೌಲಭ್ಯಕ್ಕೆ ಭಾರತದಲ್ಲಿ ವಾಟ್ಸ್​ಆ್ಯಪ್​ ಸಂಸ್ಥೆ ಚಾಲನೆ ನೀಡಿದೆ.ಈ ಸೌಲಭ್ಯದ ಪ್ರಯೋಗವನ್ನು ವಾಟ್ಸ್​ಆ್ಯಪ್​ ಸಂಸ್ಥೆ ಎರಡು ವರ್ಷಗಳ ಹಿಂದೆಯೇ ಆರಂಭಿಸಿತ್ತು. ಎಲ್ಲ ರೀತಿಯ ಪ್ರಯೋಗಗಳನ್ನು ನಡೆಸಿದ ನಂತರ ಇದೀಗ ಜನರಿಗೆ ವಾಟ್ಸ್​ಆ್ಯಪ್​ ಪೇ ಮುಕ್ತವಾಗಿದೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್​ಪಿಸಿಐ)ದ ಸಹಯೋಗದೊಂದಿಗೆ ಸೌಲಭ್ಯವನ್ನು ಆರಂಭಿಸಲಾಗಿದೆ.ಸದ್ಯದ ಮಟ್ಟಿಗೆ ದೇಶದ ಐದು ಬ್ಯಾಂಕ್​ಗಳ ಗ್ರಾಹಕರು ಮಾತ್ರವೇ ವಾಟ್ಸ್​ಆ್ಯಪ್​ ಪೇ ಬಳಸಬಹುದು. ಐಸಿಐಸಿಐ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಆ್ಯಕ್ಸಿಸ್​ ಬ್ಯಾಂಕ್​, ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಮತ್ತು ಜಿಯೋ ಪೇಮೆಂಟ್​ ಬ್ಯಾಂಕ್​ಗಳ ಗ್ರಾಹಕರಿಗೆ ಸೌಲಭ್ಯ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಬ್ಯಾಂಕ್​ಗಳನ್ನು ಸೌಲಭ್ಯದಲ್ಲಿ ಅಳವಡಿಸಿಕೊಳ್ಳುವುದಾಗಿ ವಾಟ್ಸ್​ಆ್ಯಪ್​ ತಿಳಿಸಿದೆ.
ಇದನ್ನೂ ಓದಿ:ಬಾಲಕಿಗೆ ಲೈಂಗಿಕ ದೌರ್ಜನ್ಯ ಕೊಟ್ಟಿದ್ದವ ಜೈಲಿನಲ್ಲಿಯೇ ಆತ್ಮಹತ್ಯೆ; ಇತ್ತ ಹುಡುಗಿಯೂ ಸಾವು
ಬಳಕೆ ಹೇಗೆ?ಒಂದು ವೇಳೆ ನೀವು ಈ ಮೇಲಿನ ಯಾವುದೇ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರೆ ವಾಟ್ಸ್​ಆ್ಯಪ್​ ಪೇ ಸೌಲಭ್ಯವನ್ನು ಬಳಸಬಹುದು.– ಪ್ಲೇಸ್ಟೋರ್​ನಲ್ಲಿ ವಾಟ್ಸ್​ಆ್ಯಪ್​ ಅನ್ನು ಅಪ್​ಡೇಟ್​ ಮಾಡಿಕೊಳ್ಳಿ– ಚಾಟ್​ ವಿಂಡೋನ ಬಡ ಮೇಲ್ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್​ ಮಾಡಿ– ಪೇಮೆಂಟ್​ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆ್ಯಡ್​ ಪೇಮೆಂಟ್​ ಮೇಲೆ ಕ್ಲಿಕ್ಕಿಸಿ– ಅಕ್ಸೆಪ್ಟ್​ ಮೇಲೆ ಕ್ಲಿಕ್ಕಿಸಿ– ಬ್ಯಾಂಕ್​ಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಬ್ಯಾಂಕ್​ ಆಯ್ಕೆ ಮಾಡಿ– ಫೋನ್​ ನಂಬರ್​ ಮೂಲಕ ಬ್ಯಾಂಕ್​ ಖಾತೆ ಖಾತರಿ ಪಡಿಸಿಕೊಳ್ಳಿ– ನಿಮ್ಮ ಖಾತೆಯನ್ನು ದೃಢೀಕರಿಸಲು ವಾಟ್ಸ್​ಆ್ಯಪ್​ ಟೆಕ್ಸ್ ಮೆಸೇಜ್​ ಕಳುಹಿಸಲು ಕೇಳುತ್ತದೆ. ಅದಕ್ಕೆ ಅನುಮತಿ ನೀಡಿ– ಮತ್ತೊಮ್ಮೆ ಫೋನ್​ ನಂಬರ್​ ಕೇಳಲಾಗುತ್ತದೆ. ನಂಬರ್​ ಹಾಕಿದ ನಂತರ ನಿಮ್ಮ ಖಾತೆ ದೃಢೀಕರಣವಾಗುತ್ತದೆ– ಡನ್​ ಮೇಲೆ ಕ್ಲಿಕ್ಕಿಸಿ, ನಂತರ ನೀವು ಪೇಮೆಂಟ್​ ಪೇಜ್​ಗೆ ಅಕ್ಸೆಸ್​ ಪಡೆಯಬಹುದು
ಇದನ್ನೂ ಓದಿ:ಸೈಕಲ್‌ ಮೇಲೆ ಬಂದ ಇಂಧನ ಸಚಿವ- ವಿದ್ಯುತ್‌ ಬಿಲ್‌ ಪಾವತಿಸಿದ ಗ್ರಾಹಕರು!
ಪಾವತಿ ಹೇಗೆ?– ಯಾರಿಗೆ ಹಣ ಕಳುಹಿಸಬೇಕೋ ಅವರ ಚಾಟ್​ ವಿಂಡೋ ತೆರೆಯಿರಿ– ಕ್ಲಿಪ್​ ಐಕಾನ್​ ಮೇಲೆ ಕ್ಲಿಕ್ಕಿಸಿ– ರೂಪಾಯಿ ಐಕಾನ್​ ಮೇಲೆ ಕ್ಲಿಕ್ಕಿಸಿ– ಎಷ್ಟು ಹಣ ಕಳುಹಿಸಬೇಕು ಎನ್ನುವುದನ್ನು ನಮೂದಿಸಿ– ನಿಮ್ಮ ಯುಪಿಐ ಪಿನ್​ ನಮೂದಿಸಿ– ಹಣ ವರ್ಗಾವಣೆ ಸಂದೇಶದಿಂದ ಖಾತರಿ ಪಡಿಸಿಕೊಳ್ಳಿ
ಪುಸ್ತಕ ಪ್ರಿಯರಿಗೆ ಬಂಪರ್‌: ಶೇ.50ರ ರಿಯಾಯಿತಿ ನೀಡ್ತಿದೆ ಪುಸ್ತಕ ಪ್ರಾಧಿಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 1 =
Remember me
