ವಿಜಯವಾಡ:ಆಂಧ್ರ ಪ್ರದೇಶದ ಈವೆಂಟ್​ ಡ್ಯಾನ್ಸರ್​ ಗಾಯತ್ರಿ ಎಂಬಾಕೆ ವಿಜಯವಾಡದ ವಂಬೆ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಪ್ರಕರಣದ ಹಿಂದೆ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ.
ವಂಬೆ ಕಾಲನಿಯ ಬನ್ನಿ ಡ್ಯಾನ್ಸ್​ ಟ್ರೂಪ್​ನಲ್ಲಿ ಡ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದ ಗಾಯತ್ರಿ ಸಂತೋಷ್​ ಎಂಬಾತನನ್ನು ಪ್ರೀತಿಸಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇಬ್ಬರು ವೈವಾಹಿಕ ಜೀವನ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಬನ್ನಿ ಪತ್ನಿ ನೀಲಿಮಾ ಸಹ ಡ್ಯಾನ್ಸರ್​ ಆಗಿದ್ದಳು. ಇಬ್ಬರು ಸಹ ಒಳ್ಳೆಯ ಸ್ನೇಹಿತೆಯರಾಗಿದ್ದರು. ಬರುಬರುತ್ತಾ ಬನ್ನಿ ಮತ್ತು ಗಾಯತ್ರಿ ನಡುವೆ ವಿವಾಹೇತರ ಸಂಬಂಧ ಬೆಳೆಯ ತೊಡಗಿತು.
ಇದನ್ನೂ ಓದಿ:ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!
ಹೀಗಿರುವಾಗ ಇತ್ತೀಚೆಗಷ್ಟೇ ಗಾಯತ್ರಿ, ಬನ್ನಿ ಜತೆಗಿರುವ ಫೋಟೋವನ್ನು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಶೇರ್​ ಮಾಡಿಕೊಂಡಿದ್ದಳು. ಅದನ್ನು ನೋಡಿ ಬನ್ನಿ ಪತ್ನಿ ನೀಲಿಮಾ, ಗಾಯತ್ರಿ ಮನೆಗೆ ಧಾವಿಸಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಜಗಳವೂ ನಡೆದು ನೀಲಿಮಾ ಮನೆಯಿಂದ ಹೊರನಡೆದ ಬೆನ್ನಲ್ಲೇ ಗಾಯತ್ರಿ ನೇಣಿಗೆ ಕೊರಳೊಡ್ಡಿದ್ದಾಳೆ. ಗಾಯತ್ರಿಯ ತಂದೆ-ತಾಯಿಯು ಸಹ ಪಕ್ಕದಲ್ಲೇ ನೆಲೆಸಿದ್ದಾರೆ.

ನೀಲಿಮಾ ಮನೆಗೆ ಬಂದಾಗ ಗಾಯತ್ರಿ ಗಂಡ ಸತೀಶ್​ ತನ್ನೆರೆಡು ಮಕ್ಕಳನ್ನು ಕರೆದುಕೊಂಡು ಹೊರ ಹೋಗಿದ್ದ. ಸತೀಶ್​ ಮನೆಗೆ ಮರಳಿದಾಗ ಬಾಗಿಲು ಹಾಕಿರುವುದನ್ನು ನೋಡಿ ತವರಿಗೆ ಹೋಗಿರಬಹದು ಅಂದುಕೊಂಡಿದ್ದಾನೆ. ಆದರೆ, ಕಿಟಕಿಯನಲ್ಲಿ ಇಣುಕಿ ನೋಡಿದಾಗ ಗಾಯತ್ರಿ ನೇಣು ಹಾಕಿಕೊಂಡಿರುವ ಬೆಳಕಿಗೆ ಬಂದಿದೆ. ಬಳಿಕ ಬಾಗಿಲ ಒಡೆದು ಒಳಗೆ ನುಗ್ಗಿದ್ದಾರೆ.
ಇದನ್ನೂ ಓದಿ:ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!
ಗಾಯತ್ರಿ ಮನೆಗೆ ಬಂದಿದ್ದ ನೀಲಿಮಾ ಆಕೆಯನ್ನು ಹಿಗ್ಗಾಮುಗ್ಗ ಬೈದು, ಹೀಯಾಳಿಸಿದ್ದಾಳೆ. ಅದೇ ನೋವಿನಲ್ಲಿ ಗಾಯತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಾಗಿದ್ದು, ಗಾಯತ್ರಿ ಮೊಬೈಲ್​ ಫೋನ್​ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.(ಏಜೆನ್ಸೀಸ್​)
ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

ಕುಡಿದ ಮತ್ತಿನಲ್ಲಿ ಜಾಲಿರೈಡ್​ ಹೋಗಿದ್ದ ಮೂವರು ಯುವಕರ ದುರಂತ ಸಾವು..!

ಪ್ರೀತಿಸಿ ಮದುವೆ ಆದ 8 ತಿಂಗಳಿಗೆ ಪತ್ನಿಯನ್ನೇ ಕೊಂದ ಪತಿರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
