ನವದೆಹಲಿ:ಭಾರತದ ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​ ಕೇಳಿಬಂದಿದೆ. ಎರಡು ತಿಂಗಳ ಕಾಲಾವಾಕಾಶದ ನಂತರ ಸಾಮಾಜಿಕ ಸಂದೇಶ ರವಾನೆ ವೇದಿಕೆ (ಸೋಶಿಯಲ್​ ಮೆಸೆಂಜಿಂಗ್​ ಫ್ಲಾಟ್​ಫಾರ್ಮ್​) ವ್ಯಾಟ್ಸ್​ಆ್ಯಪ್​ ಭಾರತದಲ್ಲಿನ ಸ್ಟೇಟಸ್ ಅವಧಿಯ ಮಿತಿಯನ್ನು 15 ರಿಂದ ಮತ್ತೆ 30 ಸೆಕೆಂಡ್​ಗಳಿಗೆ ಮರು ಏರಿಕೆ ಮಾಡಿದೆ. ಆಂಡ್ರಾಯ್ಡ್​ ಆವೃತ್ತಿ 2.20.166 ಅಪ್ಡೇಟೆಡ್​ ವರ್ಸನ್​ನಲ್ಲಿ ಈ ಫೀಚರ್​ ಲಭ್ಯವಾಗಲಿದೆ.
ಇದನ್ನೂ ಓದಿ:13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
ಸ್ಟೇಟ್​ ಫೀಚರ್​ ಅನ್ನು 2017ರಲ್ಲಿ ವಾಟ್ಸ್​ಆ್ಯಪ್​ ಪರಿಚಯಿಸಿತು. ಈ ಹೊಸ ಫೀಚರ್​ ಮೂಲಕ ಫೋಟೋ, ವಿಡಿಯೋಗಳು ಮತ್ತು ಜಿಐಎಫ್​ (GIFs) ಫೈಲ್​ಗಳನ್ನು ಅಪ್​ಲೋಡ್​ ಮಾಡಲು ಅವಕಾಶ ನೀಡಲಾಯಿತು. ಅಪ್​ಲೋಡ್​ ಮಾಡಿದ ಫೈಲ್​ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಮರೆಯಾಗುತ್ತವೆ. ಅಲ್ಲಿಯವರೆಗೆ ಬಳಕೆದಾರನ ಸಂಪರ್ಕದಲ್ಲಿರುವವರಿಗೆ ಸ್ಟೇಟಸ್​ ಗೋಚರವಾಗುತ್ತದೆ.
ಫೀಚರ್​ ಪರಿಚಯಿಸಿದ ಆರಂಭದಲ್ಲಿ ಮೂರು ನಿಮಿಷದ ವಿಡಿಯೋಗಳಿಗೆ 90 ಸೆಕೆಂಡ್​ ಅವಧಿ ನೀಡಲಾಗಿತ್ತು. ಅಲ್ಲದೆ, ಅಪ್​ಲೋಡ್​ ಮಾಡುವ ಫೈಲ್​ 16 ಎಂಬಿಗಿಂತ ಜಾಸ್ತಿ ಇದ್ದರೆ, ಅದನ್ನು ಎಡಿಟ್​ ಮಾಡಿ ಸ್ಟೇಟಸ್​ಗೆ ಕಳುಹಿಸುವ ಅವಕಾಶ ನೀಡಿತ್ತು. ಆ ಬಳಿಕ ಸ್ಟೇಟಸ್​ ಅನ್ನು 30 ಸೆಕೆಂಡ್​ಗೆ ಇಳಿಸಲಾಗಿತ್ತು.
ಇದನ್ನೂ ಓದಿ:ಪ್ರೀತೀಲಿ ಮೋಸ ಹೋದ ಯುವತಿಯಿಂದ ಮಾಜಿ ಲವರ್​ಗೆ 1 ಟನ್​ ಈರುಳ್ಳಿ ಗಿಫ್ಟ್​: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?
ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿದ್ದ ನಕಲಿ ಸುದ್ದಿಗಳನ್ನು ನಿಯಂತ್ರಣಕ್ಕೆ ತರಲು ಮತ್ತು ಸರ್ವರ್​ ದಟ್ಟನೆಯನ್ನು ಕಡಿಮೆ ಮಾಡಲು ಫೀಚರ್​ ಅವಧಿಯನ್ನು ಭಾರತದಲ್ಲಿ 30 ಸೆಕೆಂಡ್​ನಿಂದ 15ಕ್ಕೆ ಕೆಲ ತಿಂಗಳುಗಳಿಂದ ಇಳಿಸಲಾಗಿತ್ತು. ಇದೀಗ ಮರಳಿ 30 ಸೆಕೆಂಡ್​ಗೆ ಏರಿಸಲಾಗಿದೆ.
ವಾಬೇಟಾಇನ್​ಫೋ ನೀಡಿರುವ ಮಾಹಿತಿಯ ಪ್ರಕಾರ ಆಂಡ್ರಾಯ್ಡ್​ ಆವೃತ್ತಿ 2.20.166 ಅಪ್ಡೇಟೆಡ್​ ವರ್ಸನ್​ನಲ್ಲಿ ಈ ಫೀಚರ್​ ಲಭ್ಯವಾಗಲಿದ್ದು, ನೀವು ಆದಷ್ಟು ಬೇಗೆ ಫೀಚರ್​ ಪಡೆಯಬೇಕಾದರೆ ನಿಮ್ಮ ವಾಟ್ಸ್​ಆ್ಯಪ್​ಗಳನ್ನು ಆದಷ್ಟು ಬೇಗ ಅಪ್ಡೇಟ್​ ಮಾಡಿಕೊಳ್ಳಲು ಸೂಚಿಸಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!
ಮೊಬೈಲ್​​ ಬಿಟ್ಟು ಓದಿಕೋ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:14 + 3 =
Remember me
