|ಪರಶುರಾಮ ಭಾಸಗಿ ವಿಜಯಪುರ
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಿದ್ದು, ಆ ಪ್ರಕಾರ ಪಿಎಚ್​ಡಿ ಐಚ್ಛಿಕವಾಗಿಸಿ ನೆಟ್, ಸೆಟ್, ಸ್ಲೆಟ್ ಕನಿಷ್ಠ ಮಾನದಂಡವಾಗಿಸಿದೆ. ಆದರೆ, ರಾಜ್ಯದಲ್ಲಿ ಪ್ರತಿ ವರ್ಷ ನಿಯಮಿತವಾಗಿ ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಕಳೆದ ಎರಡು ವರ್ಷಗಳಿಂದ ನಡೆಯದ ಕಾರಣ ಅಸಂಖ್ಯಾತ ಆಕಾಂಕ್ಷಿಗಳಿಗೆ ಹಾಗೂ ಹಾಲಿ ಅತಿಥಿ ಉಪನ್ಯಾಸಕರಿಗೆ ತೀವ್ರ ತೊಂದರೆಯಾಗಿದೆ.
ಕಳೆದ 2021ರ ಜುಲೈ 25ರಂದು ನಡೆದ ಪರೀಕ್ಷೆಯೇ ಅಂತಿಮ. ಅದಾದ ಬಳಿಕ ಕರೊನಾ ನೆಪದಲ್ಲಿ ಪರೀಕ್ಷೆಯೇ ನಡೆಯಲಿಲ್ಲ. ಅಲ್ಲದೆ, 2021ರ ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಪರೀಕ್ಷೆ ಮುಂದೂಡುತ್ತಲೇ ಬರಲಾಯಿತು. ಹಾಗೆ ಮುಂದುವರಿದ ಪರೀಕ್ಷೆಯನ್ನು ಈವರೆಗೂ ನಡೆಸದ ಕಾರಣ ಆಕಾಂಕ್ಷಿಗಳು ತೊಂದರೆಗೆ ಸಿಲುಕಿದ್ದಾರೆ. ಮಾತ್ರವಲ್ಲ, ಕೆ-ಸೆಟ್ ತೇರ್ಗಡೆಯಾಗದ ಅತಿಥಿ ಉಪನ್ಯಾಸಕರು ಕಾಲಮಿತಿಯಲ್ಲಿ ಪರೀಕ್ಷೆ ತೇರ್ಗಡೆಯಾಗಬೇಕೆಂಬ ನಿಯಮವಿರುವ ಕಾರಣಕ್ಕೆ ಅವರಿಗೂ ತೊಂದರೆಯಾಗುತ್ತಿದೆ.
ವಿಳಂಬಕ್ಕೆ ಕಾರಣ: ಈ ಹಿಂದೆ ಕೆ-ಸೆಟ್ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ನೀಡಲಾಗಿತ್ತು. ಆ ಪ್ರಕಾರ ಮೈಸೂರು ವಿವಿ 2020ನೇ ಸಾಲಿನ ಪರೀಕ್ಷೆಯನ್ನು 2020ರ ಸೆ.27 ಹಾಗೂ ಹಾಗೂ 2021ನೇ ಸಾಲಿನ ಪರೀಕ್ಷೆಯನ್ನು 2021ರ ಜು.25ರಂದು ನಡೆಸಿತ್ತು. ಆದರೆ, ಈ 2021ನೇ ಸಾಲಿನ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ
ಎಂದು ಇದಕ್ಕೆ ವಿವಿ ಸಂಯೋಜಕರಿಂದ ಹಿಡಿದು ಹಲವು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸಿ ತನಿಖೆಗೆ ಆದೇಶಿಸಲಾಯಿತು. 2022ರ ಡಿ.17 ರಂದು ತನಿಖಾ ಸಮಿತಿ ರಚಿಸಿ ಪಾರದರ್ಶಕ ತನಿಖೆ ನಡೆಸಿ ತಿಂಗಳೊಳಗೆ ವರದಿ ಸಲ್ಲಿಸಲು ಆದೇಶಿಸಲಾಗಿತ್ತು. ಆದರೆ, ವರದಿ ಏನಾಯಿತೆಂಬುದು ಈವರೆಗೂ ಬಹಿರಂಗಗೊಂಡಿಲ್ಲ.
ಏತನ್ಮಧ್ಯೆ ಯುಜಿಸಿ ಕೂಡ ತನ್ನ 561ನೇ ಸಭೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ನೋಡಲ್ ಏಜೆನ್ಸಿಗಳಿಗೆ ಯುಜಿಸಿಯಿಂದ ಮಾನ್ಯತೆ ಅಗತ್ಯವಿಲ್ಲದೆ ರಾಜ್ಯ ಅರ್ಹತಾ ಪರೀಕ್ಷೆ ನಡೆಸಲು ಅನುಮತಿ ನೀಡಲು ನಿರ್ಧರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಪರೀಕ್ಷೆ ನಡೆಸಲು ಆದೇಶಿಸಿತು.
ಕೆಇಎಯಿಂದಲೂ ವಿಳಂಬ:ಸರ್ಕಾರದ ಆದೇಶದ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ಕೆ-ಸೆಟ್ ನಡೆಸಲು ಪೂರ್ವಭಾವಿಯಾಗಿ ಅರ್ಜಿ ಆಹ್ವಾನಕ್ಕೆ ತಂತ್ರಾಂಶ ತಯಾರಿಗೆ ಮಾಹಿತಿ ಸಂಗ್ರಹಣೆ ಹಾಗೂ ಸಿದ್ಧತೆ ನಡೆಸಿತ್ತು. 2023ರ ಮಾರ್ಚ್ ಅಂತ್ಯಕ್ಕೆ ಪ್ರಕಟಣೆ ಹೊರಡಿಸಿ 2023ರ ಆಗಸ್ಟ್​ನಲ್ಲಿ
ಪರೀಕ್ಷೆ ನಡೆಸಲು ಯೋಜಿಸಿದ್ದಾಗಿ ಈ ಹಿಂದಿನ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸದನದಲ್ಲಿಯೇ ಮಾಹಿತಿ ನೀಡಿದ್ದರು. ಆದರೆ, ಜುಲೈ ಬಂದರೂ ಪ್ರಕಟಣೆ ಹೊರಡಿಸಿಲ್ಲ. ಹೀಗಾಗಿ ಆಕಾಂಕ್ಷಿತರು ತೊಂದರೆಗೆ ಸಿಲುಕಿದ್ದಾರೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಪರೀಕ್ಷಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕೂಡಲೇ ಕೆ-ಸೆಟ್​ಗೆ ಪ್ರಕಟಣೆ ಹೊರಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ನವದೆಹಲಿ:ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್​ಇಟಿ), ರಾಜ್ಯ ಅರ್ಹತಾ ಪರೀಕ್ಷೆ (ಎಸ್​ಇಟಿ) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್​ಎಲ್​ಇಟಿ-ಸ್ಲೆಟ್) ಇವುಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರೊಫೆಸರ್​ಗಳ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿದೆ. ಪಿಎಚ್.ಡಿ ಕಡ್ಡಾಯವಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ಪಷ್ಟಪಡಿಸಿದೆ.
ವಿವಿಗಳು ಮತ್ತು ಕಾಲೇಜುಗಳಲ್ಲಿ ಬೋಧಕರು ಮತ್ತು ಇತರ ಅಕಾಡೆಮಿಕ್ ಸಿಬ್ಬಂದಿ ನೇಮಕಾತಿಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ನಿಯಮಕ್ಕೆ ಮಾಡಿರುವ ಎರಡನೇ ತಿದ್ದುಪಡಿಯಲ್ಲಿ ಯುಜಿಸಿ ಈ ಅಂಶವನ್ನು ಖಚಿತ ಪಡಿಸಿದೆ. 2023ರ ಯುಜಿಸಿ ನಿಯಮಗಳಡಿ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆಗೆ ಅಗತ್ಯವಾದ ಇತರ ಕ್ರಮಗಳ ಬಗ್ಗೆಯೂ ಈ ತಿದ್ದುಪಡಿ ಅನ್ವಯವಾಗುತ್ತದೆ.
2021ರ ಯುಜಿಸಿ ನಿಯಮಗಳಲ್ಲಿನ ಮೊದಲ ತಿದ್ದುಪಡಿಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಕ್ಕೆ ಪಿಎಚ್​ಡಿ ಕನಿಷ್ಠ ಅರ್ಹತೆ ಎಂದು ಯುಜಿಸಿ ಹಿಂದೆ ಕಡ್ಡಾಯಗೊಳಿಸಿತ್ತು. ಈ ವರ್ಷದ ಜುಲೈ 1ರಿಂದ ಅದನ್ನು ಐಚ್ಛಿಕಗೊಳಿಸಿದೆ.
ಕೆ-ಸೆಟ್ ತ್ವರಿತವಾಗಿ ನಡೆಸುವಂತೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಮಾತ್ರವಲ್ಲ, ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಮ್ಮ ಪಕ್ಷದ ಜನಪ್ರತಿನಿಧಿಗಳನ್ನು ಕೋರಿಕೊಳ್ಳಲಾಗುವುದು.
| ಅರುಣ ಶಹಾಪುರ ವಿಧಾನ ಪರಿಷತ್ ಮಾಜಿ ಸದಸ್ಯ
ಎರಡು ವರ್ಷಗಳಿಂದ ಕೆ-ಸೆಟ್ ನಡೆಸಿಲ್ಲ. ಈ ಮಧ್ಯೆ ಉನ್ನತ ಶಿಕ್ಷಣ ಇಲಾಖೆ ನಿಗದಿತ ಅವಧಿಯಲ್ಲಿ ಸೆಟ್ ಅಥವಾ ನೆಟ್ ತೇರ್ಗಡೆಯಾಗಲೇಬೇಕೆಂದು ಸುತ್ತೋಲೆ ಹೊರಡಿಸಿದೆ. ಹೀಗಾಗಿ ಕೂಡಲೇ ಕೆ-ಸೆಟ್ ನಡೆಸಬೇಕೆಂಬುದು ಅಸಂಖ್ಯಾತ ಆಕಾಂಕ್ಷಿಗಳ ಒತ್ತಾಯ.
| ಅತಿಥಿ ಉಪನ್ಯಾಸಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seventeen =
Remember me
