ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ಯುನೈಟೆಡ್​ ನೇಷನ್ಸ್​ ಜನರಲ್ ಅಸೆಂಬ್ಲಿ (ಯುಎನ್​ಜಿಎ) 76ನೇ ಅಧಿವೇಶನವನ್ನು ಉದ್ದೇಶಿಸಿ ಆಡಿದ ಮಾತು ಇದೀಗ ಭಾರಿ ಗಮನ ಸೆಳೆಯುತ್ತಿದ್ದು, ಭಾರತ ವಿಶ್ವಗುರು ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವ ಮೂಲಕ ಇಲ್ಲಿನ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಣ್ಣಿಸಿರುವ ಪ್ರಧಾನಿ ಮೋದಿ, ಭಾರತ ಸುಧಾರಣೆ ಆಗುತ್ತಿದ್ದರೆ, ಜಗತ್ತೇ ಪರಿವರ್ತನೆ ಆಗುತ್ತಿರುತ್ತದೆ ಎಂಬ ವಿಶ್ವಾಸದ ನುಡಿಗಳನ್ನೂ ಹೊರಹೊಮ್ಮಿಸಿದ್ದಾರೆ.
ಜೋ ಬೈಡೆನ್ ಜೊತೆ ವಾಷಿಂಗ್ಟನ್​ನಲ್ಲಿ ದ್ವಿಪಕ್ಷೀಯ ಸಭೆಯನ್ನು ನಡೆಸಿ ನ್ಯೂಯಾರ್ಕ್​​ಗೆ ಬಂದಿಳಿದ ಮೋದಿ, ಭಾರತದ ಪ್ರಜಾಪ್ರಭುತ್ವ ಯಾಕೆ ವಿಶೇಷ ಎಂಬುದನ್ನೂ ವಿವರಿಸಿದರು. ಹಲವು ಭಾಷೆ, ಬಹಳ ಆಡುಭಾಷೆ, ವಿವಿಧ ಜೀವನಶೈಲಿ ಜೊತೆಗೆ ಆಹಾರ ಪದ್ಧತಿಯನ್ನೂ ಹೊಂದಿರುವುದೇ ಒಂದು ಸ್ಪಂದನಾಶೀಲ ಪ್ರಜಾಪ್ರಭುತ್ವದ ಪ್ರತೀಕ ಎಂದರು.
ಇದನ್ನೂ ಓದಿ:ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಮಗ; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ, ಪ್ರತಿಭಟನೆ
ಜಗತ್ತಿನ ಪ್ರತಿ 6 ಜನರಿಗೆ ಒಬ್ಬರಂತೆ ಭಾರತೀಯರಿದ್ದಾರೆ. ಹೀಗಾಗಿ ಭಾರತೀಯರ ಬೆಳವಣಿಗೆ ಜಾಗತಿಕ ಬೆಳವಣಿಗೆಗೂ ಕಾರಣವಾಗುತ್ತದೆ. ಭಾರತ ಬೆಳೆದಾಗ ವಿಶ್ವವೂ ಬೆಳೆಯುತ್ತದೆ, ಭಾರತ ಸುಧಾರಣೆಯಾದಾಗ ಪ್ರಪಂಚವೂ ಪರಿವರ್ತನೆ ಆಗುತ್ತದೆ ಎಂಬುದಾಗಿ ಮೋದಿ ಹೇಳಿದರು.
ಜಗತ್ತಿನ ಮೊದಲ ಡಿಎನ್​ಎ ವ್ಯಾಕ್ಸಿನ್​ ಕೂಡ ಭಾರತದಿಂದಲೇ ಅಭಿವೃದ್ಧಿ ಪಡಿಸಲಾಗಿದೆ ಎಂಬುದನ್ನೂ ಅವರು ಯುಎನ್​ಜಿಎ ಗಮನಕ್ಕೆ ತಂದರು. ಇದು 12 ವರ್ಷ ಮೇಲ್ಪಟ್ಟ ಯಾರಿಗಾದರೂ ಕೊಡಬಹುದಾಗಿದ್ದು, ಎಮ್​ಆರ್​ಎನ್ಎ ವ್ಯಾಕ್ಸಿನ್​ ಅಭಿವೃದ್ಧಿ ಪಡಿಸುವಿಕೆ ಅಂತಿಮ ಹಂತದಲ್ಲಿದೆ ಎಂಬುದನ್ನೂ ತಿಳಿಸಿದರು.
ನಗರದಲ್ಲಿ ಮತ್ತೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಶುರು!; ಇನ್ಮುಂದೆ ಹೇಗೆ ಟೆಸ್ಟ್ ಮಾಡ್ತಾರೆ ಗೊತ್ತಾ?

ವಿಚಾರಣಾಧೀನ ಕೈದಿಯ ಅನುಮಾನಾಸ್ಪದ ಸಾವು; ಕೋಲ್ಕತ ಮೂಲದ ರೂಪದರ್ಶಿ ಕೊಲೆ ಪ್ರಕರಣದ ನಾಗೇಶ್ ಇನ್ನಿಲ್ಲ

‘ನಿನ್ನಷ್ಟಕ್ಕೆ ನೀನಿದ್ಬಿಡು, ಇಲ್ಲಂದ್ರೆ ಗತಿ ಕಾಣಿಸ್ತೇನೆ​’ ಅಂತ ಬೆದರಿಕೆ ಹಾಕಿದ ಭೂಗತ ಪಾತಕಿ; ಸಾಮಾಜಿಕ ಹೋರಾಟಗಾರನ ದೂರು

Sign in to your account
Please enter an answer in digits:5 × one =
Remember me
