ರಾಂಚಿ:ಸದ್ಯ ಕೋವಿಡ್​ ಲಾಕ್​ಡೌನ್​ನಿಂದಾಗಿ ಯಾವುದೇ ಕ್ರಿಕೆಟ್​ ಟೂರ್ನಿ, ಸರಣಿ ನಡೆಯುತ್ತಿಲ್ಲ. ಹಾಗಾಗಿ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರಿಂದೂರಿಗೆ ತೆರಳುತ್ತಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈಗ ಮನೆಯಲ್ಲೇ ಇರಬೇಕಾಗಿದೆ.
ಬಿಡುವಿನ ಸಮಯದಲ್ಲಿ ವಿಡಿಯೋ ಗೇಮ್ಸ್​ ಆಡುವುದನ್ನು ರೂಢಿಸಿಕೊಂಡಿರುವ ಅವರು ಸದಾ ಅದರಲ್ಲೇ ಮುಳುಗಿರುತ್ತಾರೆ. ಪಕ್ಕದಲ್ಲಿ ಪತ್ನಿ ಸಾಕ್ಷಿ ಸಿಂಗ್​ ಇದ್ದರೂ ಅವರನ್ನು ಮಾತನಾಡಿಸದೆ ಧೋನಿ ತಮ್ಮ ಪಾಡಿಗೆ ತಾವು ವಿಡಿಯೋ ಗೇಮ್ಸ್​ ಆಡುವುದರಲ್ಲಿ ಮಗ್ನರಾಗಿರುತ್ತಾರೆ.ಇದರಿಂದ ಬೇಸರಗೊಂಡ ಸಾಕ್ಷಿ ಸಿಂಗ್​, ತಮ್ಮ ಪತಿಯ ಗಮನಸೆಳೆಯಲು ಧೋನಿಯ ಕಾಲಿನ ಹೆಬ್ಬರಳನ್ನು ಬಲವಾಗಿ ಕಚ್ಚಿದರಂತೆ… ಅಲ್ಲ, ಅಲ್ಲ… ಜೋರಾಗಿ ಕಚ್ಚುವಂತೆ ನಟಿಸಿದರಂತೆ. ಆದರೂ ಧೋನಿ ಮಾತ್ರ ವಿಡಿಯೋ ಗೇಮ್ಸ್​ ಆಡುವುದನ್ನು ನಿಲ್ಲಿಸಲಿಲ್ಲವಂತೆ.

ಈ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿರುವ ಧೋನಿ, ಗಮನಸೆಳೆಯಲು ಯತ್ನಿಸುವ ಪ್ರೀತಿಯ ಪತ್ನಿ! ವಿಡಿಯೋ ಗೇಮ್ಸ್​ V/s ಪತ್ನಿ ಎಂಬ ಅಡಿಬರಹ ನೀಡಿದ್ದಾರೆ. ಇದು ಸಾಕಷ್ಟು ಲೈಕ್ಸ್​ ಪಡೆದುಕೊಳ್ಳುತ್ತಿದೆ.
ತನ್ನ ಟಿಕ್​ಟಾಕ್​ ವಿಡಿಯೋಕ್ಕೆ ಹೆಚ್ಚಿನ ಲೈಕ್ಸ್​ ಬರಲಿಲ್ಲ ಎಂದು ಬಾಲಕ ಹೀಗೆ ಮಾಡಿಕೊಳ್ಳುವುದೇ…? ಆತ ಮಾಡಿಕೊಂಡ ಅನಾಹುತ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
