ಚೆನ್ನೈ:ಸನಾತನ ಧರ್ಮದ ನಿರ್ಮೂಲನೆ ವಿಚಾರವಾಗಿ ನಾನು ನೀಡಿರುವ ಹೇಳಿಕೆಗೆ ಬದ್ದನಾಗಿದ್ದು, ಯಾವುದೇ ತರಹದ ಕ್ರಮ ಎದುರಿಸಲು ಸಿದ್ದನಿದ್ದೇನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ಪುನರುಚ್ಚರಿಸಿದ್ದಾರೆ.
ಸನಾತನ ಧರ್ಮದ ಕುರಿತು ನಾನು ನೀಡಿರುವ ಹೇಳಿಕೆಗೆ ಬದ್ದನಾಗಿದ್ದು ಆಡಳಿತರೂಢ ಬಿಜೆಪಿ ಪಕ್ಷದ ನಾಯಕರು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ನಾನು ಇದ್ಯಾವುದಕ್ಕೂ ಹೆದರುವುದಿಲ್ಲ ಎಂದಿದ್ದಾರೆ.
ಸನಾತನ ಧರ್ಮದ ನಿರ್ಮೂಲನೆ ವಿಚಾರವಾಗಿ ನಾನು ಹತ್ಯಾಕಾಂಡಕ್ಕೆ ಕರೆ ಕೊಟ್ಟಿದ್ದೇನೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಅವರ ಹೇಳಿಕೆ ಬಾಲಿಶವಾಗಿದ್ದು, ದ್ರಾವಿಡ ಸಿದ್ದಾಂತವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಅನೇಕ ಬಾರಿ ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಡಿಎಂಕೆ ಪಕ್ಷದ ನಾಯಕರನ್ನು ಕೊಲ್ಲಬೇಕೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ನಾನು ಬದ್ದ: ಉದಯನಿಧಿ ಸ್ಟಾಲಿನ್
ಪ್ರಧಾನಿ ಮೋದಿಯವರು ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್​ ಹಠಾವೋ ದೇಶ್​ ಕೋ ಬಚಾವೋ, ಕಾಂಗ್ರೆಸ್​ ಮುಕ್ತ ಭಾರತ ಎಂದು ಅನೇಕ ಬಾರಿ ಹೇಳಿದ್ದಾರೆ. ಅವರ ಹೇಳಿಕೆ ಪ್ರಕಾರ ಎಲ್ಲವೂ ಬದಲಾಗುತ್ತಿರಬೇಕು ಯಾವುದು ಶಾಶ್ವತವಲ್ಲ. ನಾನು ಅದರ ಆಧಾರದಲ್ಲಿಯೇ ಹೇಳಿಕೆ ನೀಡಿದ್ದೇನೆ ಹೊರತು ನನ್ನ ಮಾತಲ್ಲಿ ಯಾವುದೇ ದುರುದ್ದೇಶವಿಲ್ಲ.
ದ್ರಾವಿಡ ಸಿದ್ದಾಂತವು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳುತ್ತದೆ. ಸಮಾಜದಲ್ಲಿ ಬದಲಾವಣೆಯನ್ನು ಬಯಸುತ್ತದೆ. ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಇದು ಅವರಿಗೆ ಮಾಮೂಲಿ ಕೆಲಸವಾಗಿದೆ. ಅವರು ನನ್ನ ವಿರುದ್ಧ ಯಾವುದೇ ತರಹದ ಪ್ರಕರಣ ದಾಖಲಿಸಿದ್ದರು ಸಹ ನಾನು ಎದುರಿಸಲು ಸಿದ್ದನಿದ್ದೇನೆ.
ಆಡಳಿತರೂಢ ಬಿಜೆಪಿ ವಿಪಕ್ಷಗಳ ಒಕ್ಕೂಟ I.N.D.I.Aವನ್ನು ಕಂಡು ಹೆದರಿದಂತೆ ಕಾಣುತ್ತಿದೆ. ನೈಜ ಸಮಸ್ಯೆಗಳ ಬಗ್ಗೆ ಮಾತನಾಡದೆ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ನಾವು ಒಂದೇ ಕುಲ ಒಂದೇ ದೇವರು ಎನ್ನುವವರು ಎಂದು ಸಚಿವ ಉದಯನಿಧಿ ಸ್ಟಾಲಿನ್​ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
