ರಾಯ್ಪುರ:ಪ್ರೀತಿಸಿದವರು ಕೈ ಕೊಟ್ಟರೆ ಜೀವನವೇ ಮುಗಿಯಿತು ಎಂದುಕೊಳ್ಳುವ ಯುವಜನತೆ, ಅದೇ ಪ್ರೀತಿಯ ನೆನಪಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಾತ್ರ ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ದೊಡ್ಡ ದರೋಡೆಕೋರನಾಗಿ ಬದಲಾಗಿದ್ದಾನೆ. ಮಹಿಳೆಯರು, ಯುವತಿಯರನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಆಂಧ್ರದಲ್ಲಿ ಹಬ್ಬುತ್ತಿರುವ ನಿಗೂಢ ಕಾಯಿಲೆಗೆ ಕಾರಣವೇನು ಗೊತ್ತಾ? ಅಸ್ವಸ್ಥರ ಸಂಖ್ಯೆ 551ಕ್ಕೆ ಏರಿಕೆ
ಛತ್ತೀಸಗಢದ ರಾಯ್ಪರದಲ್ಲಿ ಇಂತಹ ವಿಚಿತ್ರ ವ್ಯಕ್ತಿಯೊಬ್ಬ ಜೀವಿಸುತ್ತಿದ್ದಾನೆ. ಈ ವಿಚಿತ್ರ ವ್ಯಕ್ತಿಯ ಹೆಸರು ಅಭಿಷೇಕ್​ ಜೋಶಿ. ಈತ ಬಿಸಿಎ ಪದವಿ ವಿದ್ಯಾಭ್ಯಾಸ ಮಾಡುವಾಗ ಸಹಪಾಠಿ ಒಬ್ಬಳನ್ನು ಪ್ರೀತಿಸುತ್ತಿದ್ದನಂತೆ. ತಂದೆ ಶ್ರೀಮಂತನಾಗಿದ್ದರಿಂದ ಆಕೆಯೂ ಪ್ರೀತಿಯ ನಾಟಕವಾಡಿದ್ದಳು. ಆದರೆ ಅಭಿಷೇಕ್​ನ ತಂದೆ ತಾಯಿ ಅಕಾಲಿಕ ಮರಣ ಹೊಂದಿದ ನಂತರ ಅವಳು ಇವನ ಪ್ರೀತಿಗೆ ಒಲ್ಲೆ ಎಂದು ಬೇರೊಬ್ಬನನ್ನು ಮದುವೆಯಾಗಿದ್ದಳು. ಅದೇ ನೋವಿನಲ್ಲಿದ್ದ ಅಭಿಷೇಕ್​ ತನ್ನ 18 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ಕೇವಲ 14 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಮಹಿಳೆಯರು ಮತ್ತು ಯುವತಿಯರ ಮೇಲೆ ದ್ವೇಷ ಬೆಳೆಸಿಕೊಂಡು ಅವರನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡಲಾರಂಭಿಸಿದ್ದಾನೆ.
ಇದನ್ನೂ ಓದಿ:ಕೇಂದ್ರ ಸರ್ಕಾರಕ್ಕೂ ಮೊದಲು ರೈತರೊಂದಿಗೆ ಮಾತನಾಡಲು ಸಿದ್ಧರಾದ ಅಮಿತ್​ ಷಾ; ಇಂದು ಸಂಜೆ 7ಕ್ಕೆ ಸಭೆ
ಕಳೆದ ಎಂಟು ವರ್ಷದಿಂದ ಅಭಿಷೇಕ್​ ಕಳ್ಳತನ ಮಾಡುತ್ತಿದ್ದಾನೆ. ಒಂದೇ ವರ್ಷದಲ್ಲಿ 50ಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ. ಇತ್ತೀಚೆಗೆ ಇಂಜಿನಿಯರಿಂಗ್​ ವಿದ್ಯಾರ್ಥಿನಿಯೊಬ್ಬಳ ಸರವನ್ನು ಕದ್ದಿದ್ದ. ಅದಾದ ನಂತರ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದ ಪೊಲೀಸರು ಇವನ ಕಾರಿನ ಬೆನ್ನು ಬಿದ್ದಿದ್ದರು. ನೆಲೆಯಿಲ್ಲದ ಅಭಿಷೇಕ್​ ಹೋಟೆಲ್​ ಒಂದರಲ್ಲಿ ರೂಂ ಮಾಡಿಕೊಂಡು ತಂಗಿದ್ದಾಗ, ಪೊಲೀಸರು ಹೋಟೆಲ್​ಗೆ ತೆರಳಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್​ ವಿಚಾರಣೆಯ ವೇಳೆ ಅಭಿಷೇಕ್​ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾನೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
