ನವದೆಹಲಿ:ಕರೊನಾದ ಒಮಿಕ್ರಾನ್​ ರೂಪಾಂತರಿಯ ಭೀತಿ ಹುಟ್ಟಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಿಮಾನಗಳ ನಿಯಮಿತ ಸಂಚಾರವನ್ನು ಪುನರಾರಂಭಿಸುವ ನಿರ್ದಿಷ್ಟ ದಿನಾಂಕವನ್ನು, ಮುಂದಿನ ದಿನಗಳಲ್ಲಿ, ಪರಿಸ್ಥಿತಿಗಳಿಗನುಸಾರವಾಗಿ ನಿರ್ಧರಿಸಿ ತಿಳಿಸಲಾಗುವುದು ಎಂದು ಭಾರತದ ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್​ನ ಪ್ರಕಟಣೆ ತಿಳಿಸಿದೆ.
ಅನ್ಯದೇಶಗಳಿಂದ ಭಾರತಕ್ಕೆ ಬರುವ ಮತ್ತು ಭಾರತದಿಂದ ಅನ್ಯದೇಶಗಳಿಗೆ ಹೋಗುವ ಷೆಡ್ಯೂಲ್ಡ್​ ಕಮರ್ಷಿಯಲ್​ ಇಂಟರ್​​ನ್ಯಾಷನಲ್​ ಪ್ಯಾಸೆಂಜರ್​ ವಿಮಾನಗಳ ಸೇವೆಗಳನ್ನು 2020ರ ಮಾರ್ಚ್​ 23ರಿಂದ ಅಮಾನತ್ತಿನಲ್ಲಿರಿಸಲಾಗಿದೆ. ಜುಲೈ 2020ರಿಂದ 31 ದೇಶಗಳೊಂದಿಗೆ ರೂಪಿಸಲಾಗಿರುವ ಏರ್​ ಬಬಲ್​ ವ್ಯವಸ್ಥೆಯಡಿ ವಿಶೇಷ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮಾತ್ರ ಸಂಚರಿಸುತ್ತಿವೆ.
ಇದನ್ನೂ ಓದಿ:ಏರುತ್ತಿದೆ ಪರಿಷತ್ ಚುನಾವಣೆ ಕಾವು: ಅನ್ಯಪಕ್ಷಗಳ ಮತ ಸೆಳೆಯಲು ಕೈ ಕಸರತ್
ಈ ಮುನ್ನ ಕೇಂದ್ರ ಸರ್ಕಾರವು ಡಿಸೆಂಬರ್ 15 ರಿಂದ ಎಲ್ಲಾ ನಿಗದಿತ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಆದೇಶ ಹೊರಡಿಸಿತ್ತು. ಆದರೆ, ಸುಮಾರು 20 ದೇಶಗಳಲ್ಲಿ ಒಮಿಕ್ರಾನ್​ ಸೋಂಕು ಕಂಡುಬಂದಿರುವುದು ಅಂತಾರಾಷ್ಟ್ರೀಯ ಪ್ರಯಾಣಿಕರಿಂದಾಗಿ ಕರೊನಾ ಉಲ್ಬಣಿಸುವ ಆತಂಕ ಉಂಟುಮಾಡಿದೆ. ಹೀಗಾಗಿ ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದು, ಸಂಬಂಧಿತ ವಲಯಗಳೊಂದಿಗೆ ಚರ್ಚೆ ನಡೆಸಿ ಮತ್ತೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.(ಏಜೆನ್ಸೀಸ್)
‘ಪವರ್​ಫುಲ್​ ವುಮೆನ್​​ 2021’ ಪಟ್ಟಿಯಲ್ಲಿ ನೀತಾ ಅಂಬಾನಿ ಹೆಸರು; ಕರೊನಾ ಸಂಕಷ್ಟಕ್ಕೆ ಮಿಡಿದ ಹೃದಯಕ್ಕೆ ಸಂದ ಗೌರವ

ಕತ್ರೀನಾ-ವಿಕಿ ಮದುವೆ ಯಾವತ್ತು? ಎಲ್ಲಿ? ವೆಡ್ಡಿಂಗ್​​​ ಸೂಟ್​ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
