ಮುಂಬೈ: ಬಿಎಸ್​ಇ ಸೂಚ್ಯಂಕವು ಡಿಸೆಂಬರ್ 19 ರಂದು 122.10 ಅಂಕ ಹೆಚ್ಚಳ ಕಂಡು 71,437.19ರ ಗರಿಷ್ಠ ಮಟ್ಟವನ್ನು ತಲುಪಿ ದಾಖಲೆ ಬರೆಯಿತು. ಈ ಸಂದರ್ಭದಲ್ಲಿ ಅಂದಾಜು 1,816 ಷೇರುಗಳ ಬೆಲೆಗಳು ಹೆಚ್ಚಾದರೆ, 1,811 ಷೇರುಗಳ ಬೆಲೆ ಕುಸಿದವು. ಅಲ್ಲದ, 135 ಷೇರುಗಳು ದರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಡಿ. 19ರಂದು ಏರಿಳಿತ ಕಂಡ ಕೆಲವೊಂದಿಷ್ಟು ಪ್ರಮುಖ ಷೇರುಗಳ ಬೆಲೆ ಚಿತ್ರಣ ಇಲ್ಲಿದೆ.
ಆಯಿಲ್ ಇಂಡಿಯಾ:ಸರ್ಕಾರವು ವಿಂಡ್‌ಫಾಲ್ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಆಯಿಲ್ ಇಂಡಿಯಾದ ಷೇರುಗಳು ಶೇಕಡಾ 7 ರಷ್ಟು ಏರಿಕೆ ಕಂಡವು.
ವಿಜಯಾ ಡಯಾಗ್ನೋಸ್ಟಿಕ್ ಸೆಂಟರ್:134.64 ಕೋಟಿ ರೂ.ಗಳಿಗೆ ಪಿಎಚ್ ಡಯಾಗ್ನೋಸ್ಟಿಕ್ ಸೆಂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಕಂಪನಿಯ ಮಂಡಳಿಯು ಅನುಮೋದಿಸಿದ ನಂತರ ವಿಜಯಾ ಡಯಾಗ್ನೋಸ್ಟಿಕ್ ಸೆಂಟರ್‌ನ ಷೇರುಗಳು ಶೇಕಡಾ 2.79 ರಷ್ಟು ಲಾಭ ಗಳಿಸಿದವು.
ಬಯೋಕಾನ್ :ಸುಧಾರಿತ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅಂದಾಜು 120 ದೇಶಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಬಯೋಸಿಮಿಲರ್ ವ್ಯವಹಾರದ ಪರಿವರ್ತನೆಯನ್ನು ಕಂಪನಿಯು ಪೂರ್ಣಗೊಳಿಸಿದ ನಂತರವೂ ಬಯೋಕಾನ್ ಷೇರುಗಳು 1.5 ಪ್ರತಿಶತದಷ್ಟು ಕುಸಿದವು.
ಐಡಿಎಫ್​ಸಿ: ಫಸ್ಟ್​ ಬ್ಯಾಂಕ್:ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಐಡಿಎಫ್‌ಸಿ ಮತ್ತು ಐಡಿಎಫ್‌ಸಿ ಫೈನಾನ್ಶಿಯಲ್ ಹೋಲ್ಡಿಂಗ್ ಕಂಪನಿಯ ವಿಲೀನವನ್ನು ಅನುಮೋದಿಸಿದ ನಂತರ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಷೇರುಗಳು ಶೇಕಡಾ 3 ರಷ್ಟು ಏರಿದವು.
ಝೀ :ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ವಿಲೀನಕ್ಕೆ ಗಡುವು ವಿಸ್ತರಣೆಗೆ ಒಪ್ಪಿಗೆ ನಿರಾಕರಿಸಿದ ನಂತರ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಷೇರುಗಳು 3 ಪ್ರತಿಶತದಷ್ಟು ಕುಸಿದವು.
ಸ್ಪೈಸ್‌ಜೆಟ್:ಗೋ ಫಸ್ಟ್ ಎಂದು ಕರೆಯಲ್ಪಡುವ ದಿವಾಳಿಯಾದ ಗೋ ಏರ್‌ಲೈನ್ಸ್ (ಇಂಡಿಯಾ) ಲಿಮಿಟೆಡ್‌ಗೆ ಬಿಡ್ಡಿಂಗ್‌ನಲ್ಲಿ ಕಂಪನಿಯು ತನ್ನ ಆಸಕ್ತಿಯನ್ನು ಖಚಿತಪಡಿಸಿದ ನಂತರ ಸ್ಪೈಸ್‌ಜೆಟ್ ಷೇರುಗಳು ಶೇಕಡಾ 2.91 ರಷ್ಟು ಏರಿಕೆ ಕಂಡವು.
ಇಂಡಿಯಾ ಗ್ಲೈಕೋಲ್ಸ್:ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಅಡಿಯಲ್ಲಿ ಎಥೆನಾಲ್ ಪೂರೈಕೆಗಾಗಿ 1,164 ಕೋಟಿ ರೂಪಾಯಿ ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು ಕಂಪನಿ ಘೋಷಿಸಿದ ನಂತರ ಇಂಡಿಯಾ ಗ್ಲೈಕೋಲ್ಸ್ ಷೇರುಗಳು ಶೇಕಡಾ 8 ರಷ್ಟು ಏರಿಕೆ ಕಂಡವು.
ದೇವಯಾನಿ ಇಂಟರ್‌ನ್ಯಾಶನಲ್:ಭಾರತದಲ್ಲಿ KFC ಮತ್ತು Pizza Hut ನಿರ್ವಾಹಕರಾಗಿರುವ ದೇವಯಾನಿ ಇಂಟರ್​ನ್ಯಾಷನಲ್​, ಥೈಲ್ಯಾಂಡ್‌ಗೆ ಪ್ರವೇಶವನ್ನು ಘೋಷಿಸಿದ ನಂತರ ಈ ಕಂಪನಿಯ ಷೇರುಗಳು 5.33 ಪ್ರತಿಶತದಷ್ಟು ಏರಿವೆ.
ಪಿಎನ್​ಸಿ ಇನ್ಫ್ರಾಟೆಕ್:ಮಧ್ಯಪ್ರದೇಶದಲ್ಲಿ ಕಂಪನಿಯು ರೂ 1,174 ಕೋಟಿ ಯೋಜನೆಯನ್ನು ಪಡೆಉಕೊಂಡ ನಂತರ ಪಿಎನ್​ಸಿ ಇನ್ಫ್ರಾಟೆಕ್​ ಷೇರುಗಳು ಶೇ. 2.33 ಗಳಿಕೆ ಮಾಡಿವೆ.
ಅಪೊಲೊ ಟೈರ್:ಅಪೊಲೊ ಟೈರ್ಸ್‌ನ ಷೇರುಗಳು 4 ಪ್ರತಿಶತದಷ್ಟು ಏರಿವೆ. 3.6 ಪ್ರತಿಶತ ಪಾಲನ್ನು ಅಥವಾ 2.3 ಕೋಟಿ ಷೇರುಗಳನ್ನು ಸಂಸ್ಥೆಯೊಂದು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದರಿಂದ ಈ ಏರಿಕೆಯಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × 3 =
Remember me
