ಈ ಸಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 2047ರ ಹೊತ್ತಿಗೆ ಭಾರತವನ್ನು ಮುಂದುವರಿದ ರಾಷ್ಟ್ರವಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಹೇಳಿದರು. ಹಾಗಾದರೆ ಭಾರತ ಈಗ ಎಲ್ಲಿದೆ? ಇನ್ನೂ ಎಷ್ಟು ದೂರ ಸಾಗಬೇಕಿದೆ? ಒಂದು ಅವಲೋಕನ.
| ಜಗದೀಶ ಬುರ್ಲಬಡ್ಡಿ
ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ನಾವು ಈಗಷ್ಟೇ ಆಚರಿಸಿದ್ದೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಈ 75 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. 200 ವರ್ಷಗಳ ಕಾಲ ನಮ್ಮನ್ನು ಆಳಿ, ನಮ್ಮ ಸಂಪತ್ತನ್ನು ಲೂಟಿ ಮಾಡಿದ ಬ್ರಿಟಿಷರನ್ನೇ ನಾವೀಗ ಆರ್ಥಿಕತೆಯಲ್ಲಿ ಹಿಂದೆ ಹಾಕಿದ್ದೇವೆ. 2019ರಲ್ಲಿ ನಮ್ಮ ದೇಶದ ಒಟ್ಟು ದೇಶಿಯ ಉತ್ಪನ್ನವು (ಜಿಡಿಪಿ) 2.94 ಟ್ರಿಲಿಯನ್ ಡಾಲರ್ (235 ಲಕ್ಷ ಕೋಟಿ ರೂಪಾಯಿ) ತಲುಪುವ ಮೂಲಕ ಬ್ರಿಟನ್​ನ ಜಿಡಿಪಿ (2.83 ಟ್ರಿಲಿಯನ್ ಡಾಲರ್) ಯನ್ನು ಹಿಂದಿಕ್ಕಿದೆ. ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ನಾವು ಹೊರಹೊಮ್ಮಿದ್ದೇವೆ. ಹಾಗಾದರೆ, ಭಾರತವು ಅಭಿವೃದ್ಧಿಶೀಲ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿಕೊಂಡು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಂಡಿದೆಯೇ? ಹಿಂದುಳಿದ, ಅಭಿವೃದ್ಧಿಶೀಲ ಹಾಗೂ ಮುಂದುವರಿದ ರಾಷ್ಟ್ರಗಳನ್ನು ಹೇಗೆ ಗುರುತಿಸುತ್ತಾರೆ? ಇದಕ್ಕೆ ಅನುಸರಿಸುವ ಮಾನದಂಡಗಳೇನು? ದೇಶವೊಂದನ್ನು ಈ ರೀತಿ ಗುರುತಿಸಲು ನಿರ್ದಿಷ್ಟ, ನಿಖರ ಮಾನದಂಡಗಳು ಇಲ್ಲ. ‘ಅಭಿವೃದ್ಧಿ ಹೊಂದಿದ ದೇಶ’ ಎಂಬುದಕ್ಕೆ ಸರ್ವಸಮ್ಮತವಾದ ವ್ಯಾಖ್ಯಾನವೂ ಇಲ್ಲ. ಆದರೆ, ರೂಢಿಗತವಾಗಿರುವ ಕೆಲವೊಂದಿಷ್ಟು ಸಂಗತಿಗಳ ಮೂಲಕ ದೇಶಗಳ ಮುಂದುವರಿದಿರುವಿಕೆ, ಹಿಂದುಳಿದಿರುವಿಕೆಯನ್ನು ಅಳೆಯಲಾಗುತ್ತದೆ.
ಏಕೆ ಪ್ರಗತಿಶೀಲ ರಾಷ್ಟ್ರವಾಗಿಯೇ ಇದೆ?
ಭಾರತ ಇನ್ನೂ ಪ್ರಗತಿಶೀಲ ರಾಷ್ಟ್ರವಾಗಿಯೇ ಉಳಿದಿರುವುದಕ್ಕೆ ಐತಿಹಾಸಿಕ ಕಾರಣ ಕೂಡ ಇದೆ ಎಂದು ತಜ್ಞರು ಬೊಟ್ಟುಮಾಡುತ್ತಾರೆ. ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದರು ಮತ್ತು ಶೋಷಿಸಿದರು. ಅಂದಾಜಿನ ಪ್ರಕಾರ, ಬ್ರಿಟಿಷರು ವಸಾಹತನ್ನಾಗಿ ಮಾಡಿಕೊಳ್ಳುವ ಮೊದಲು ಭಾರತವು ಜಾಗತಿಕ ಆರ್ಥಿಕತೆಯ ನಾಲ್ಕನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿತ್ತು. ಬ್ರಿಟಿಷ್ ಅರ್ಥಶಾಸ್ತ್ರಜ್ಞ ಆಂಗಸ್ ಮ್ಯಾಡಿಸನ್ ಅವರು, ‘ವಿಶ್ವ ಆರ್ಥಿಕತೆಯಲ್ಲಿ ಭಾರತದ ಪಾಲು 1700ನೇ ಇಸ್ವಿಯಲ್ಲಿ ಶೇ. 24.4 ರಷ್ಟಿತ್ತು. ಅದು 1950ರಲ್ಲಿ ಶೇ. 4.2ಕ್ಕೆ ಕುಸಿಯಿತು’ ಎಂದು ಹೇಳಿದ್ದಾರೆ. 1947ರಲ್ಲಿ ಬ್ರಿಟಿಷರು ಭಾರತವನ್ನು ತೊರೆದಾಗ, ಅದು ಈ ಹಿಂದಿನಂತೆ ಸಂಪದ್ಭರಿತ ದೇಶವಾಗಿರಲಿಲ್ಲ. ಇನ್ನು ಸ್ವಾತಂತ್ರ್ಯಾನಂತರ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಒಂದು ಪ್ರಮುಖ ಅಡಚಣೆಯೆಂದರೆ ಜನಸಂಖ್ಯೆ. ಭಾರತವು ಜಗತ್ತಿನಲ್ಲಿಯೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಆದರೆ ಜನಸಂಖ್ಯೆಯನ್ನೇ ಪ್ರಗತಿಯ ಊರುಗೋಲನ್ನಾಗಿ ಮಾಡುವ ಅವಕಾಶವೂ ಇದೆ. ವ್ಯಾಪಕ ಭ್ರಷ್ಟಾಚಾರ ಮತ್ತು ಅಸಮರ್ಪಕ ತಾಂತ್ರಿಕ ಪ್ರಗತಿ ಭಾರತದ ಬೆಳವಣಿಗೆಯ ಕಥೆಯನ್ನು ನಿಧಾನಗೊಳಿಸಿದೆ. ಅಲ್ಲದೆ, ಶೇ 70ಕ್ಕಿಂತ ಹೆಚ್ಚು ಜನರು ಇನ್ನೂ ಪ್ರಾಥಮಿಕ ವಲಯದಲ್ಲಿ (ಕೃಷಿ) ತೊಡಗಿಸಿಕೊಂಡಿದ್ದಾರೆ. ಮಾಧ್ಯಮಿಕ (ಉದ್ಯಮ) ಮತ್ತು ತೃತೀಯ (ಸೇವೆಗಳು) ವಲಯಗಳಲ್ಲಿನ ಅಪಾರ ಸಾಮರ್ಥ್ಯಗಳನ್ನು ಸಹ ಅರಿತುಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ವಿವಿಧ ಸೂಚಕ
ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಆರ್ಥಿಕ ವೇದಿಕೆಯಂತಹ ಸಂಸ್ಥೆಗಳು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಗುರುತಿಸಲು ತಮ್ಮದೇ ಆದ ಪ್ರತ್ಯೇಕ ಸೂಚಕಗಳನ್ನು ಬಳಸುತ್ತವೆ. ವಿಶ್ವಸಂಸ್ಥೆಯು ದೇಶಗಳನ್ನು ಕಡಿಮೆ, ಕಡಿಮೆ ಮಧ್ಯಮ, ಮೇಲ್ಮಧ್ಯಮ ಮತ್ತು ಹೆಚ್ಚಿನ ಆದಾಯದ ದೇಶಗಳು ಎಂದು ನಾಲ್ಕು ಭಾಗಗಳಾಗಿ ವರ್ಗೀಕರಿಸುತ್ತದೆ. ಈ ವರ್ಗೀಕರಣವು ಒಂದು ದೇಶದ ಜಿಡಿಪಿಯ ತಲಾವಾರು ಆಧರಿಸಿದೆ. ಅಂದರೆ, ಜಿಡಿಪಿಯನ್ನು ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ತಲಾದಾಯ ಇದಾಗಿದೆ. ತಲಾದಾಯ 1,085 ಡಾಲರ್ (86,800 ರೂಪಾಯಿ) ಒಳಗಿರುವ ದೇಶವನ್ನು ಕಡಿಮೆ ಆದಾಯದ ಆರ್ಥಿಕತೆಯಾಗಿ ಗುರುತಿಸಲಾಗುತ್ತದೆ. 4,255 ಡಾಲರ್​ವರೆಗೆ (3,40,400 ರೂಪಾಯಿ) ಇದ್ದರೆ ಕಡಿಮೆ ಮಧ್ಯಮ ಆದಾಯದ ರಾಷ್ಟ್ರ; 13,205 ಡಾಲರ್​ವರೆಗೆ (10,56,400 ರೂಪಾಯಿ) ಇದ್ದರೆ ಮೇಲ್ಮಧ್ಯಮ ಆದಾಯದ ದೇಶ ಮತ್ತು ಇದಕ್ಕಿಂತ ಹೆಚ್ಚು ತಲಾದಾಯ ಇದ್ದರೆ ಹೆಚ್ಚಿನ ಆದಾಯದ ಆರ್ಥಿಕತೆಯುಳ್ಳ ರಾಷ್ಟ್ರ ಎಂದು ಪರಿಗಣಿಸಲಾಗುತ್ತದೆ. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಹೆಚ್ಚಿನ ಆದಾಯದ ಆರ್ಥಿಕತೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎಂದು ಕರೆಯಲಾಗುತ್ತದೆ. ಹೆಚ್ಚಿನ ತಲಾದಾಯದ ಜೊತೆಗೆ ಅಭಿವೃದ್ಧಿ ಹೊಂದಿದ ದೇಶಗಳು ಸಾಮಾನ್ಯವಾಗಿ ಕಡಿಮೆ ಬಡತನ ಮಟ್ಟ, ಉನ್ನತ ಜೀವನಮಟ್ಟ, ಜನಸಂಖ್ಯೆಯ ಬೆಳವಣಿಗೆಯ ಕಡಿಮೆ ದರ, ಕಡಿಮೆ ನಿರುದ್ಯೋಗ ಮಟ್ಟ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನವನ್ನು ಹೊಂದಿರುತ್ತವೆ.
2050ಕ್ಕೆ ಜಗತ್ತಿನ ಮೂರನೇ ಆರ್ಥಿಕ ಶಕ್ತಿ
2023ರ ಮಾರ್ಚ್​ಗೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇಕಡಾ 7 ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗವಾಗಿದೆ. ತಜ್ಞರು ಹೇಳುವಂತೆ, 2050ರ ವೇಳೆಗೆ ಅಮೆರಿಕ ಮತ್ತು ಚೀನಾದ ನಂತರ ಭಾರತವು ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಆದರೂ ತಲಾದಾಯ ಮಾತ್ರ ಅನೇಕ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.
ಮಧ್ಯಮ ಆರ್ಥಿಕತೆ
ವಿಶ್ವ ಬ್ಯಾಂಕ್ ಪ್ರಸ್ತುತ ಭಾರತವನ್ನು ಕಡಿಮೆ-ಮಧ್ಯಮ ಆದಾಯದ ಆರ್ಥಿಕತೆ ಎಂದು ವರ್ಗೀಕರಿಸುತ್ತದೆ. 1,086 ಮತ್ತು 4,255 ಡಾಲರ್ ನಡುವಿನ ತಲಾದಾಯ ಇರುವ ದೇಶಗಳು ಈ ವರ್ಗೀಕರಣದಲ್ಲಿ ಬರುತ್ತವೆ. 2021ರಲ್ಲಿ ಭಾರತೀಯರ ತಲಾದಾಯವು 2170 ಡಾಲರ್ (1,73,600 ರೂಪಾಯಿ) ಆಗಿದೆ. ಅಮೆರಿಕದಂತಹ ಹೆಚ್ಚಿನ ಆದಾಯದ ದೇಶಗಳು 13,205 (10,56,400 ರೂಪಾಯಿ) ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ತಲಾದಾಯ ಹೊಂದಿವೆ. ಭಾರತವು ಮುಂದುವರಿದ ರಾಷ್ಟ್ರವಾಗಿ ಪರಿಗಣಿತವಾಗಬೇಕಾದರೆ ಅದು ಮೇಲಿನ ಮಧ್ಯಮ ಆರ್ಥಿಕತೆಯನ್ನು ತಲುಪಬೇಕು. ಅಂದರೆ, ಅದರ ತಲಾದಾ ಯವು ಕನಿಷ್ಠ 4256 ಡಾಲರ್​ಗೆ (3,40,480 ರೂಪಾಯಿಗೆ) ತಲುಪಬೇಕು.
ಭಾರತದ ಸಾಧನೆಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
