ನವದೆಹಲಿ:ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಅನೇಕ ದೇಶಗಳಿಗೆ ಹಬ್ಬಿದೆ. ಭಾರತಕ್ಕೂ ಕೂಡ ಈ ವೈರಸ್​ ಕಾಲಿಟ್ಟಿದ್ದು ಅನೇಕ ರಾಜ್ಯಗಳಲ್ಲಿ ಈ ವೈರಸ್​ ಇರುವುದು ಧೃಡವಾಗಿದೆ. ಯಾವ ಯಾವ ರಾಜ್ಯದಲ್ಲಿ ಎಷ್ಟು ಜನರಲ್ಲಿ ಕರೊನಾ ಪತ್ತೆಯಾಗಿದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ದೇಶದ 10 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 73 ಜನರಲ್ಲಿ ಸೋಂಕಿರುವುದು ಧೃಡವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕರೊನಾ ಸೋಂಕಿತರ ಪೈಕಿ 57 ಜನರು ಮೂಲ ಭಾರತೀಯರಾಗಿದ್ದು, 17 ಜನರು ಬೇರೆ ಬೇರೆ ದೇಶದಿಂದ ಇಲ್ಲಿಗೆ ಬಂದವರಾಗಿದ್ದಾರೆ. ಇದುವರೆಗೆ ಭಾರತದ ವಿಮಾನ ನಿಲ್ದಾಣಗಳಲ್ಲಿ 10,57,506 ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕರೊನಾ ಕಂಡುಬಂದಿರುವ ರಾಜ್ಯಗಳು ಇಂತಿವೆ:ಕೇರಳ: 17ಹರಿಯಾಣ: 14ಮಹಾರಾಷ್ಟ್ರ: 11ಉತ್ತರ ಪ್ರದೇಶ: 11ದೆಹಲಿ: 6ಕರ್ನಾಟಕ: 4ಲಡಾಕ್​: 3ರಾಜಸ್ಥಾನ: 3ತೆಲಂಗಾಣ: 1ತಮಿಳುನಾಡು: 1ಜಮ್ಮು ಕಾಶ್ಮೀರ: 1ಪಂಜಾಬ್​: 1
ಹರಿಯಾಣದಲ್ಲಿ 14 ಜನರಲ್ಲಿ ಕರೊನಾ ವೈರಸ್​ ಪತ್ತೆಯಾಗಿದ್ದು ಅವರೆಲ್ಲರೂ ವಿದೇಶಿಯರಾಗಿದ್ದಾರೆ. ದೇಶದಲ್ಲಿ ಒಟ್ಟು 17 ವಿದೇಶಿಗರಲ್ಲಿ ಕರೊನಾ ವೈರಸ್​ ಪತ್ತೆಯಾಗಿದ್ದು, ಅದರಲ್ಲಿ 16 ಜನರು ಇಟಲಿ ಮೂಲದವರು ಎನ್ನುವ ಮಾಹಿತಿ ಲಭಿಸಿದೆ.
ಭಾರತದಲ್ಲಿ ಕರೊನಾ ವೈರಸ್​ ತಪಾಸಣೆಗೆ 52 ಕೇಂದ್ರಗಳನ್ನು ಗುರುತಿಸಲಾಗಿದ್ದು, ಕರ್ನಾಟಕದಲ್ಲಿ ಐದು ಕೇಂದ್ರಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಎರಡು, ಮೈಸೂರಿನಲ್ಲಿ ಒಂದು, ಹಾಸನದಲ್ಲಿ ಒಂದು ಮತ್ತು ಶಿವಮೊಗ್ಗದಲ್ಲಿ ಒಂದು ಕೇಂದ್ರ ಈ ತಪಾಸಣೆಗೆ ಲಭ್ಯವಿದೆ. ದೇಶದಲ್ಲಿ ಒಟ್ಟು 56 ಕೇಂದ್ರಗಳಲ್ಲಿ ಪರೀಕ್ಷೆಗೆ ಸ್ಯಾಂಪಲ್​ ಸ್ವೀಕಾರ ಮಾಡಲಾಗುವುದು.(ಏಜೆನ್ಸೀಸ್​)
ಮೈ ನಡುಕ ಹುಟ್ಟಿಸುವ ಸುದ್ದಿ ಇದು- ದೆಹಲಿ ಹಿಂಸಾಚಾರದ ವೇಳೆ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಹತ್ಯೆ ಮಾಡುವ ಮುನ್ನ ದುಷ್ಕರ್ಮಿಗಳು ನಡೆಸಿದ್ದರು ನೀಚ ಕೃತ್ಯ

FACT CHECK| ಆಲ್ಕೋಹಾಲ್​ ಕುಡಿದ್ರೆ ಕರೊನಾ ಬರಲ್ವಾ? ವೋಡ್ಕಾವನ್ನ ಸ್ಯಾನಿಟೈಸರ್​ ಆಗಿ ಬಳಸಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
