ಮುಂಬೈ:ದೇಶದಲ್ಲಿ ಅಂತಿಮ ಹಂತದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಬಹುಮತ ಪಡೆಯಬಹುದೆಂಬ ಅಂದಾಜುಗಳು ವ್ಯಕ್ತವಾಗುತ್ತಿವೆ. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ, ಆರ್ಥಿಕ ರಂಗದಲ್ಲಿ ಪ್ರಸ್ತುತ ಸರ್ಕಾರದ ನೀತಿಗಳೇ ಮುಂದುವರಿಯುತ್ತವೆ. ಮೂಲಸೌಕರ್ಯ, ರಕ್ಷಣೆ, ಗ್ರಾಹಕ ಸರಕುಗಳು, ಹೊಸ ಇಂಧನ, ಪ್ರವಾಸೋದ್ಯಮ ಮತ್ತು ಇತರ ವಿಷಯಗಳಲ್ಲಿ ಉತ್ತಮ ಕಾರ್ಯಕ್ಷಮತೆ ಇರುತ್ತದೆ ಎಂದು ದೇಶೀಯ ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್ ಭರವಸೆ ವ್ಯಕ್ತಪಡಿಸಿದರು.
ಕನ್ಸೂಮರ್​, ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳು ಹೆಚ್ಚಿದ ಗ್ರಾಮೀಣ ಬೇಡಿಕೆ ಮತ್ತು ಸಾಮಾನ್ಯ ಮಾನ್ಸೂನ್‌ನ ನಿರೀಕ್ಷೆಗಳಿಂದ ಉತ್ತೇಜನ ಪಡೆಯಬಹುದು. ಎನ್‌ಡಿಎ ಸರ್ಕಾರದ ಪುನರಾಗಮನದಿಂದ ಲಾಭ ಗಳಿಸಬಹುದಾದ ಕೆಲ ವಲಯಗಳಲ್ಲಿನ ಹಲವು ಉನ್ನತ ಷೇರುಗಳನ್ನು ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್​ ಹೆಸರಿಸಿದೆ.
ಮೂಲಸೌಕರ್ಯ: ಎಲ್​ ಆ್ಯಂಡ್​ ಟಿ, ಅದಾನಿ ಪೋರ್ಟ್ಸ್, ರಸ್ತೆ ಮತ್ತು ಮೆಟ್ರೋ ಇಪಿಸಿ ಕಂಪನಿಗಳು ಮೂಲಸೌಕರ್ಯ ವಲಯದಲ್ಲಿವೆ. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತಮ ಪ್ರದರ್ಶನ ನೀಡಲಿವೆ ಎಂದು ಪ್ರಭುದಾಸ್ ಲೀಲಾಧರ್​ ಹೇಳಿದೆ.
ಬಂಡವಾಳ ಸರಕುಗಳು: ಸೀಮೆನ್ಸ್, ABB, ಕಾರ್ಬೊರಂಡಮ್, ಷ್ನೇಯ್ಡರ್, ESAB, ಇಂಗರ್ಸಾಲ್ ರಾಂಡ್, ಕಿರ್ಲೋಸ್ಕರ್ ನ್ಯೂಮ್ಯಾಟಿಕ್ ಇವು ಬಂಡವಾಳ ಸರಕು ವಲಯದ ಈ ಕಂಪನಿಗಳಾಗಿವೆ. ಎನ್‌ಡಿಎ ಅಧಿಕಾರಕ್ಕೆ ಮರಳಿದರೆ ಇವು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇವುಗಳ ಷೇರುಗಳ ಬೆಲೆ ಹೊಸ ಎತ್ತರವನ್ನು ಮುಟ್ಟಬಹುದು ಪ್ರಭುದಾಸ್ ಲೀಲಾಧರ್​ ಅಂದಾಜಿಸಿದೆ.
ರಕ್ಷಣೆ:HAL, BEL, BDL, BEML, ಮಜಗಾನ್ ಡಾಕ್, ಕೊಚ್ಚಿನ್ ಶಿಪ್‌ಯಾರ್ಡ್ ಇವು ರಕ್ಷಣಾ ವಲಯದ ಕಂಪನಿಗಳಾಗಿವೆ. ಎನ್‌ಡಿಎ ಅಧಿಕಾರಕ್ಕೆ ಮರಳುವುದರೊಂದಿಗೆ ಈ ಷೇರುಗಳ ಬೆಲೆಗಳು ವೇಗವಾಗಿ ಹೆಚ್ಚಾಗುತ್ತವೆ ಎಂದು ಪ್ರಭುದಾಸ್ ಲೀಲಾಧರ್​ ಹೇಳಿದೆ.
ಸಿಮೆಂಟ್:ಅಲ್ಟ್ರಾಟೆಕ್ ಸಿಮೆಂಟ್, ಅಂಬುಜಾ ಸಿಮೆಂಟ್ ಇವು ಸಿಮೆಂಟ್ ವಲಯದ ಕಂಪನಿಗಳಾಗಿವೆ. ಎನ್‌ಡಿಎ ಅಧಿಕಾರಕ್ಕೆ ವಾಪಸಾದರೆ ಈ ಷೇರುಗಳ ಬೆಲೆಗಳು ಹೆಚ್ಚಾಗುತ್ತವೆ ಎಂದು ಪ್ರಭುದಾಸ್ ಲೀಲಾಧರ್​ ಅಂದಾಜಿಸಿದೆ.
ಹೊಸ ಇಂಧನ:ರಿಲಯನ್ಸ್ ಇಂಡಸ್ಟ್ರೀಸ್, ಸ್ಟರ್ಲಿಂಗ್ ವಿಲ್ಸನ್, ವೆರಿ, ಎಲ್ & ಟಿ, ಪ್ರಜ್ ಇಂಡಸ್ಟ್ರೀಸ್.
ಲೋಹ:JSL, JSPL.
ಪಿಎಸ್​ಯು ಬ್ಯಾಂಕ್: ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಪಿಎನ್‌ಬಿ
ಪಿಎಸ್​ಯು:ತೈಲ ಮಾರುಕಟ್ಟೆ ಕಂಪನಿಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ.
ವೈರ್ ಮತ್ತು ಕೇಬಲ್:ಪಾಲಿಕ್ಯಾಬ್, ಆರ್​ಆರ್ ಕೇಬಲ್, ಡಿಕ್ಸನ್, ಅಂಬರ್, ಕೈನ್ಸ್ ಟೆಕ್ನಾಲಜಿ, ಸೆರ್ಮಾ ಎಸ್ಜಿಎಸ್ ಟೆಕ್ನಾಲಜಿ ಷೇರುಗಳು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳಿದರೆ ಈ ಕಂಪನಿಗಳ ಷೇರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

ವಿದೇಶಿ ಹೂಡಿಕೆದಾರರಿಂದ ಮತ್ತೆ ಖರೀದಿ ಜೋರು: ವಿಶೇಷ ವಹಿವಾಟಿನಲ್ಲೂ ಷೇರುಪೇಟೆ ನೆಗೆತ

ಹೊಸ ಸರ್ಕಾರದಲ್ಲಿ ಎಫ್‌ಡಿಐ ನಿಯಮಗಳು ಇನ್ನಷ್ಟು ಸಡಿಲ: ಡಿಪಿಐಐಟಿ ಕಾರ್ಯದರ್ಶಿ ಇಂಗಿತ

ಸೋಮವಾರದಂದು ಷೇರು ಮಾರುಕಟ್ಟೆಯಲ್ಲಿ ನಡೆಯುವುದಿಲ್ಲ ವಹಿವಾಟು: ಮೇ 20ರಂದು ರಜೆ ಘೋಷಿಸಿರುವುದೇಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + five =
Remember me
