ನವದೆಹಲಿ:ಅದೊಂದು ಕಾಲವಿತ್ತು…ಇಂದಿನಂತೆ ಮನೆಯಲ್ಲಿ ಟಿವಿ, ಕಂಪ್ಯೂಟರ್​, ಕೈಯ್ಯಲ್ಲಿ ಮೊಬೈಲ್​, ಇಂಟರ್​ನೆಟ್​ ಇರಲಿಲ್ಲ. ಇದು ತೀರಾ ಶತಮಾನದ ಹಿಂದಿನ ಮಾತಲ್ಲ, ಕೇವಲ 40ವರ್ಷ ಹಿಂದಕ್ಕೆ ನೋಟ ಹರಿಸಿದರೆ ಸಾಕು. 80ರ ದಶಕದ ತನಕ ನಾಟಕ, ಚಲನ ಚಿತ್ರಗಳದ್ದೇ ದರ್ಬಾರು. ನಾಟಕಗಳು ಆಯಾ ಗ್ರಾಮದಲ್ಲಿ ರಂಗಸಂಜ್ಜಿಕೆಗಳಲ್ಲಿ ನಡೆದರೆ, ದೊಡ್ಡ ಊರುಗಳಲ್ಲಿ ಚಿತ್ರಮಂದಿರ, ಟೂರಿಂಗ್​ ಟಾಕೀಸ್​ಗಳಲ್ಲಿ ಚಲನಚಿತ್ರಗಳು ಪ್ರದರ್ಶಿತವಾಗುತ್ತಿದ್ದವು. ನಾಟಕಗಳು ತೆರೆಮರೆಗೆ ಸರಿದ ನಂತರ ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸುತ್ತಿದ್ದರು.
ಆದರೆ ಥಿಯೇಟರ್​ಗೆ ಹೋಗಿ ಸಿನಿಮಾ ವೀಕ್ಷಿಸುವುದು ಕಡಿಮೆಯಾಗಿರಬಹುದು, ಆದರೆ ಐದಾರು ದಶಕಗಳ ಕಾಲ ಸಹಸ್ರಾರು ಚಿತ್ರಮಂದಿರಗಳು ನಿರ್ಮಾಣಗೊಂಡಿದ್ದು, ದೇಶದಲ್ಲಿ ಮೊದಲು ನಿರ್ಮಿಸಿದ ಚಿತ್ರಮಂದಿರ ಯಾವುದು? ಇಂತಹ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಮುಂದೆ ಓದಿ…
ದೇಶದಲ್ಲಿ ಮೊದಲು ನಿರ್ಮಾಣವಾದ ಚಿತ್ರಮಂದಿರ ಚಾಪ್ಲಿನ್ ಸಿನಿಮಾ ಹಾಲ್​. ಇದನ್ನು ಎಲ್ಫಿನ್‌ಸ್ಟೋನ್ ಪಿಕ್ಚರ್ ಪ್ಯಾಲೇಸ್ ಎಂದೂ ಕರೆಯುತ್ತಾರೆ. ಚಾಪ್ಲಿನ್ ಚಿತ್ರಮಂದಿರವನ್ನು 1907 ರಲ್ಲಿ ಜಮ್ ಶೆಡ್​ಜೀ ನಿರ್ಮಿಸಿದರು. ಈ ಚಿತ್ರಮಂದಿರ 5/1, ಚೌರಿಂಗೀ ಪ್ಲೇಸ್, ಕೋಲ್ಕತ್ತಾದಲ್ಲಿದೆ. ಇದನ್ನು ನಂತರ “ಮಿನರ್ವಾ” ಎಂದು ಹೆಸರಿಸಲಾಯಿತು.
ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಉಡುಗೊರೆ ; ನಟ ದರ್ಶನ್​ಗೆ ಧ್ರುವ ಮೂರು ಪ್ರಶ್ನೆಗಳು!
ಜಮ್ ಶೆಡ್​ಜೀ ಅವರನ್ನು ದೇಶದ ಚಲನಚಿತ್ರ ನಿರ್ಮಾಣದ ಪಿತಾಮಹ ಎಂದು ಸಹ ಕರೆಯಲಾಗುತ್ತದೆ. ಅವರು ಎಲ್ಫಿನ್‌ಸ್ಟೋನ್ ಡ್ರಾಮಾ ಕ್ಲಬ್‌ನಲ್ಲಿದ್ದು, ಇದು ಜನಪ್ರಿಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಯಶಸ್ವಿಯಾಯಿತು. ಈ ನಡುವೆ ಜಮ್ ಶೆಡ್​ಜೀ
ಪ್ರಸಿದ್ಧ ರಂಗಸಜ್ಜಿಕೆ ಕೊರಿಂಥಿಯನ್ ಹಾಲ್ ಅನ್ನು 1902ರಲ್ಲಿ ಖರೀದಿಸಿದರು. ಬಳಿಕ ಅದೇ ಸ್ಥಳದಲ್ಲಿ 1907 ರಲ್ಲಿ ಎಲ್ಫಿನ್‌ಸ್ಟೋನ್ ಪಿಕ್ಚರ್ ಪ್ಯಾಲೇಸ್ ಅನ್ನು ತೆರೆದರು. ನಂತರ ಇದನ್ನು “ಮಿನರ್ವಾ ಟಾಕೀಸ್​” ಎಂದು ಹೆಸರಿಸಲಾಯಿತು. ಇದು ಹಾಲಿವುಡ್ ಚಿತ್ರ ಪ್ರದರ್ಶನಕ್ಕೆ ಪ್ರಮುಖವೆನಿಸಿತ್ತು. ಮುಂದೆ ಇದು ಉಳಿಯಲು ಸಾಧ್ಯವಾಗಲಿಲ್ಲ. 2003 ರಲ್ಲಿ ಕೆಡವಲಾಯಿತು.
ಕರ್ನಾಟಕದಲ್ಲಿ ದೊಡ್ಡಣ್ಣ ಹಾಲ್: 1905ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣ ಹಾಲ್ (ಪ್ಯಾರಾಮೌಂಟ್ ). ಇದರಲ್ಲಿ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆಗೊಂಡಿತ್ತು. ಇದು 170 ನಿಮಿಷದ ಚಿತ್ರವಾಗಿದ್ದು 40ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾಗಿತ್ತು.
ನಟರೇ ಎಕ್ಸ್‌ಪೋಸ್ ಮಾಡಿದ್ದಾರೆ! ‘ಗರಡಿ’ ಚಿತ್ರದ ಬಗ್ಗೆ ನಾಯಕಿ ಸೋನಲ್ ಮೊಂಟೇರೊ ಮಾತು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + 14 =
Remember me
