ನವದೆಹಲಿ:“ನಾನು ರಾಷ್ಟ್ರೀಯ ಸ್ವಯಂಸೇವಕ ಸಂದ ಸದಸ್ಯನಾಗಿದ್ದೆ’ ಎಂದು ಕಲ್ಕತ್ತ ಹೈಕೋರ್ಟ್​ ನ್ಯಾಯಾಧೀಶ ಚಿತ್ತರಂಜನ್​ದಾಸ್​ ತಮ್ಮ ನಿವೃತ್ತಿಯ ದಿನ ತಿಳಿಸಿದ್ದಾರೆ. ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ ಸದಸ್ಯನಾಗಿದ್ದ ನಾನು ವೃತ್ತಿ ಕಾರಣಕ್ಕೆ 37 ವರ್ಷಗಳ ಕಾಲ ಅದರಿಂದ ದೂರ ಇದ್ದೆ ಎಂದರು. ನನ್ನ ಮಾತು ಕೆಲವರಿಗೆ ಇರಿಸುಮುರಿಸು ಉಂಟಾಗಿಸಿದರೂ ನಾನು ಈ ಕ್ಷಣದಲ್ಲಿ ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಯಾವುದೇ ಸಹಾಯಕ್ಕಾಗಿ ಇಲ್ಲವೇ ಕೆಲಸಕ್ಕಾಗಿ ನನ್ನನ್ನು ಕರೆದರೆ ಆರ್​ಎಸ್​ಎಸ್​ಗೆ ಮರಳಲು ಸಿದ್ಧ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು. ನಾನು ಧೈರ್ಯದಿಂದ ಹಾಗೂ ನೇರವಾಗಿ ಮಾತನಾಡುವುದನ್ನು ಆರ್​ಎಸ್​ಎಸ್​ನಿಂದ ಕಲಿತಿದ್ದೇನೆ ಎಂದೂ ತಿಳಿಸಿದರು.
ಯಾವುದೇ ಸಹಾಯಕ್ಕಾಗಿ ಅಥವಾ ಅವರು ನನಗೆ ಗೊತ್ತಿರುವ ಯಾವುದೇ ಕೆಲಸಕ್ಕಾಗಿ ತಮ್ಮನ್ನು ಕರೆದರೆ ‘ಆರೆಸ್ಸೆಸ್​ಗೆ ಮರಳಲು ಸಿದ್ಧ’ ಎಂದು ಹೇಳಿದರು. ಕೆಲವು ವ್ಯಕ್ತಿಗಳಿಗೆ ಈಗ ನಾನು ಹೇಳುವ ಮಾತು ಇರಿಸುಮುರಿಸು ಉಂಟು ಮಾಡಬಹುದು. ಆದರೆ, ಇದನ್ನು ನಾನು ಹಾಗೂ ಈ ಣದಲ್ಲಿ ಒಪ್ಪಿಕೊಳ್ಳಲೇಬೇಕಾಗಿದೆ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂದ ಸದಸ್ಯನಾಗಿದ್ದೆ ಎಂದು ಹೇಳಿದ್ದಾರೆ. ನ್ಯಾಯಾಧೀಶರಾಗಿ 14 ವರ್ಷಗಳ ನಂತರ ಅಧಿಕಾರ ತ್ಯಜಿಸಿದ ಜಸ್ಟೀಸ್​ ದಾಸ್​, ಒರಿಸ್ಸಾ ಹೈಕೋರ್ಟ್​ನಿಂದ ಕಲ್ಕತ್ತಾ ಹೈಕೋರ್ಟ್​ಗೆ ವರ್ಗಾವಣೆಯಾಗಿದ್ದರು. ನಾನು ಆರೆಸ್ಸೆಸ್​ ಸಂಸ್ಥೆಗೆ ತುಂಬಾ ಋಣಿಯಾಗಿದ್ದೇನೆ… ನಾನು ನನ್ನ ಬಾಲ್ಯದಿಂದ ಮತ್ತು ನನ್ನ ಯೌವನದುದ್ದಕ್ಕೂ ಸಂದೊಂದಿಗೆ ಕಳೆದಿದ್ದೇನೆ ಎಂದು ಅವರು ಹೇಳಿದರು.
ನಾನು ಧೈರ್ಯದಿಂದ ಮಾತನಾಡಲು, ಬದುಕಿನಲ್ಲಿ ನೇರವಾಗಿರಲು, ಇತರರಿಗೆ ಸಮಾನವಾದ ದೃಷ್ಟಿಕೋನವನ್ನು ಹೊಂದಲು ಆರೆಸ್ಸೆಸ್​ನಿಂದಲೇ ಕಲಿತಿದ್ದೇನೆ. ಇದೇ ಸಂದಿಂದ ದೇಶಭಕ್ತಿ ಮತ್ತು ಕೆಲಸದ ಬದ್ಧತೆಯ ಪ್ರೆಯ ಮೇಲೆ ಬದುಕಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಒಮ್ಮೆ ನ್ಯಾಯಾಧೀಶನಾಗಿ ಪದವಿಗೆ ಏರಿದ ಬಳಿ ಅಂದರೆ, ಕಳೆದ 37 ವರ್ಷಗಳಿಂದ ಆರೆಸ್ಸೆಸ್​ ಜೊತೆ ನಾನು ಅಂತರ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ಸಂದ ಸದಸ್ಯತ್ವವನ್ನು ನನ್ನ ವೃತ್ತೀಜಿವನದ ಯಾವುದೇ ಪ್ರಗತಿಗೆ ಬಳಸಿಲ್ಲ ಏಕೆಂದರೆ ಅದು ಆರೆಸ್ಸೆಸ್​ನ ತತ್ವಗಳಿಗೂ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಜಸ್ಟಿಸ್​ ದಾಸ್​ ತೀರ್ಪು ನೀಡುವ ವೇಳೆ ಆತ ಶೀಮಂತ ವ್ಯಕ್ತಿಯಾಗಿರಲಿ, ಕಮ್ಯುನಿಸ್ಟ್​ ಆಗಿರಲಿ ಅಥವಾ ಬಿಜೆಪಿ, ಕಾಂಗ್ರೆಸ್​ ಅಥವಾ ಟಿಎಂಸಿಯಿಂದ ಬಂದವರೆಲ್ಲರನ್ನೂ ಸಮಾನವಾಗಿ ಪರಿಗಣಿಸಿದ್ದಾಗಿ ತಿಳಿಸಿದರು,
ನನ್ನ ಮುಂದೆ ಎಲ್ಲರೂ ಸಮಾನರು, ನಾನು ಯಾರಿಗೂ ಅಥವಾ ಯಾವುದೇ ರಾಜಕೀಯ ತತ್ತ$್ವಶಾಸ ಅಥವಾ ಕಾರ್ಯವಿಧಾನಕ್ಕಾಗಿ ಯಾವುದೇ ಪಪಾತವನ್ನು ಹೊಂದಿಲ್ಲ ಎಂದು ಅವರು ಹೇಳಿದರು, ಅವರು ಪರಾನುಭೂತಿಯ ತತ್ವಗಳ ಮೇಲೆ ನ್ಯಾಯವನ್ನು ವಿತರಿಸಲು ಪ್ರಯತ್ನಿಸಿದರು ಮತ್ತು ನ್ಯಾಯವನ್ನು ಮಾಡಲು ಕಾನೂನನ್ನು ಬಗ್ಗಿಸಬಹುದು, ಆದರೆ ಕಾನೂನಿಗೆ ತಕ್ಕಂತೆ ನ್ಯಾಯವನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದರು.
ಅವರು ಯಾವುದೇ ಸಹಾಯಕ್ಕಾಗಿ ಅಥವಾ ನಾನು ಮಾಡಲು ಸಾಮರ್ಥ್ಯವಿರುವ ಯಾವುದೇ ಕೆಲಸಕ್ಕಾಗಿ ಅವರನ್ನು ಕರೆದರೆ ಅವರು ‘ಆರೆಸ್ಸೆಸ್​ಗೆ ಮರಳಲು ಸಿದ್ಧ’ ಎಂದು ಹೇಳಿದರು. ನನ್ನ ಜೀವನದಲ್ಲಿ ನಾನು ಯಾವುದೇ ತಪ್ಪು ಮಾಡದ ಕಾರಣ, ನಾನು ಸಂಕ್ಕೆ ಸೇರಿದ್ದೇನೆ ಎಂದು ಹೇಳುವ ಧೈರ್ಯವಿದೆ, ಏಕೆಂದರೆ ಅದು ಕೂಡ ತಪ್ಪಲ್ಲ ಎಂದು ಅವರು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
