ನವದೆಹಲಿ:ಕುಖ್ಯಾತ ಪಾತಕಿ ವಿಕಾಸ್​ ದುಬೆಯನ್ನು ಕಾನ್ಪುರಕ್ಕೆ ಕರೆತರುವಾಗ ಎದುರಿಗೆ ದನದ ಹಿಂಡು ಬಂದಿತು. ಅದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ವಾಹನ ಪಲ್ಟಿಯಾಯಿತು ಎಂದು ದುಬೆ ಬಂಧನಕ್ಕೆ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ಕಾರ್ಯಪಡೆ ಹೇಳಿದೆ.
ಈ ಬಗ್ಗೆ ಶುಕ್ರವಾರ ಸಂಜೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಯಪಡೆ, ವಾಹನ ಪಲ್ಟಿ ಹೊಡೆಯುತ್ತಲೇ ಅದರಿಂದ ಜಿಗಿದ ವಿಕಾಸ್​ ದುಬೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ನಾವು ಆತನನ್ನು ಬೆನ್ನಟ್ಟಿದೆವು. ಜೀವಂತವಾಗಿ ಆತನನ್ನು ಸೆರೆಹಿಡಿಯಬೇಕು ಎನ್ನುವುದು ನಮ್ಮ ಪ್ರಯತ್ನವಾಗಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ:ಸಹೋದರಿಯಂತೆ ವಿಕಾಸ್​ ದುಬೆಗೆ ತಪ್ಪದೆ ರಾಖಿ ಕಟ್ಟುತ್ತಿದ್ದ ಮಾಜಿ ಶಾಸಕ
ಆದರೆ, ಅತ ನಮ್ಮ ಸಿಬ್ಬಂದಿಯಿಂದ ಅಪಹರಿಸಿದ್ದ ಪಿಸ್ತೂಲ್​ನಿಂದ ನಿರಂತರವಾಗಿ ಗುಂಡು ಹಾರಿಸಲಾರಂಭಿಸಿದ. ಆಗ ನಮ್ಮ ಸಿಬ್ಬಂದಿ ಅನಿವಾರ್ಯವಾಗಿ ಆತನತ್ತ ಗುಂಡು ಹಾರಿಸಬೇಕಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಹೇಳಿದೆ.
ಎದೆ, ಕೈಗೆ ಗುಂಡು:ವಿಕಾಸ್​ ದುಬೆಯನ್ನು ಆಸ್ಪತ್ರೆಗೆ ಕರೆತಂದಾಗ ಆತನಿಗೆ ನಾಲ್ಕು ಗುಂಡುಗಳು ತಗುಲಿದ್ದವು ಎಂದು ಕಾನ್ಪುರದ ಎಲ್​ಎಲ್​ಆರ್​ ಆಸ್ಪತ್ರೆಯ ಪ್ರಿನ್ಸಿಪಾಲ್​ ಡಾ. ಆರ್​.ಬಿ. ಕಮಲ್​ ಹೇಳಿದ್ದಾರೆ. ಮೂರು ಗುಂಡುಗಳು ಆತನ ಎದೆಭಾಗದಲ್ಲಿದ್ದರೆ, ಒಂದು ಗುಂಡು ಆತನ ಕೈಗೆ ತಗುಲಿತ್ತು ಎಂದು ವಿವರಿಸಿದ್ದಾರೆ.
ವಿಕಾಸ್​ ದುಬೆ ಸಿಡಿಸಿದ ಗುಂಡುಗಳು ತಗುಲಿ ಪೊಲೀಸ್​ ಸಿಬ್ಬಂದಿಗೂ ಗಾಯಗಳಾಗಿವೆ. ಆದರೆ, ಗುಂಡುಗಳು ಅವರನ್ನು ಸವರಿಕೊಂಡು ಹೋಗಿವೆ ಎಂದು ಹೇಳಿದ್ದಾರೆ.
ನಟೋರಿಯಸ್‌ ರೌಡಿ ದುಬೆ ಸಾವಿನ ಕುರಿತು ವೈದ್ಯರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + ten =
Remember me
