ನವದೆಹಲಿ:ಕರೊನಾ ವೈರಸ್​ ಕೋವಿಡ್ 19 ಸೋಂಕಿನ ಕುರಿತಾಗಿ ಆರಂಭಿಕ ಹಂತದಲ್ಲೇ ಚೀನಾ ಮಾಹಿತಿ ನೀಡಿರಲಿಲ್ಲ ಎಂದು ಮಾಹಿತಿ ತಿದ್ದುಪಡಿ ಮಾಡುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ ) ತನ್ನ ವರಸೆಯನ್ನು ಸ್ವಲ್ಪ ಬದಲಾಯಿಸಿಕೊಂಡಿದೆ.ಆರಂಭಿಕ ಹಂತದಲ್ಲಿ ಡಬ್ಲ್ಯುಎಚ್​ಒ ವರದಿ ಗಮನಿಸಿದರೆ ಅಲ್ಲಿ ಅದು, ಚೀನಾ ಮಾಹಿತಿ ಒದಗಿಸಿತ್ತು ಎಂದೇ ಹೇಳುತ್ತ ಬಂದಿತ್ತು. ಆದರೆ, ಹೊಸ ಮಾಹಿತಿಯಲ್ಲಾದ ಪರಿಷ್ಕರಣೆ ಎಲ್ಲರನ್ನೂ ಚಿಂತೆಗೀಡು ಮಾಡುವಂತೆ ಇದೆ. ಅಮೆರಿಕದ ವಾಷಿಂಗ್ಟನ್ ಎಕ್ಸಾಮಿನರ್ ಎಂಬ ವಾರಪತ್ರಿಕೆ ಈ ವಿಷಯದತ್ತ ಜಗತ್ತಿನ ಗಮನಸೆಳೆದಿದೆ.
ಡಬ್ಲ್ಯುಎಚ್​ಒ ವೆಬ್​ಸೈಟ್​ನಲ್ಲಿ ಬದಲಾಗಿದ್ದೇನು?ಕರೊನಾ ವೈರಸ್ ಸೋಂಕು ಆರಂಭಿಕ ಹಂತದಲ್ಲಿ ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರಕ್ಕೆ ಮಾತ್ರ ಸೀಮಿತವಾಗಿತ್ತು ಎಂಬ ಟೈಮ್​ಲೈನ್​ ಅನ್ನು ಡಬ್ಲ್ಯುಎಚ್​ಒ ಸೈಟ್​ ನಿರ್ವಹಿಸುತ್ತ ಬಂದಿದೆ.
ಟೈಮ್​ಲೈನ್​ನಲ್ಲಿರುವಹಳೆಯ ಮಾಹಿತಿಹೀಗಿದೆ:ಡಿಸೆಂಬರ್ 31, 2019 – ಚೀನಾದ ವುಹಾನ್​ ಮುನ್ಸಿಪಲ್ ಹೆಲ್ತ್ ಕಮಿಷನ್​ ನೀಡಿದ ಮಾಹಿತಿ ಪ್ರಕಾರ ಹುಬೈ ಪ್ರಾಂತ್ಯದ ವುಹಾನ್​ನಲ್ಲಿ ಒಂದಷ್ಟು ನ್ಯುಮೋನಿಯಾ ಕೇಸ್​ಗಳು ಕಂಡುಬಂದಿವೆ. ನಂತರದಲ್ಲಿ ಇದು ನೋವೆಲ್ ಕರೊನಾ ವೈರಸ್​ ಸೋಂಕು ಎಂಬುದನ್ನು ದೃಢೀಕರಿಸಲಾಗಿದೆ.
ಪರಿಷ್ಕೃತ ಮಾಹಿತಿಹೀಗಿದೆ:ಡಿಸೆಂಬರ್ 31, 2019 – ಪೀಪಲ್ಸ್ ರಿಪಬ್ಲಿಕ್ ಆಫ್​ ಚೀನಾದಲ್ಲಿನ ಡಬ್ಲ್ಯುಎಚ್​ಒ ಕಂಟ್ರಿ ಆಫೀಸ್​ ಅಲ್ಲಿ ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್​ ನೀಡಿದ ಮಾಧ್ಯಮ ಹೇಳಿಕೆಯನ್ನು ಅವರ ವೆಬ್​ಸೈಟ್​ನಿಂದ ಸಂಗ್ರಹಿಸಿದೆ. ಅದರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್​ ಚೀನಾದ ವುಹಾನ್​ನಲ್ಲಿ “ವೈರಲ್ ನ್ಯುಮೋನಿಯಾ” ಕೇಸ್​ಗಳು ಕಂಡುಬಂದಿವೆ ಎಂದಿತ್ತು.
ಪರಿಣಾಮ ಏನು?:ಚೀನಾದಿಂದ ಹೊರಬಿದ್ದಿರುವ ಕರೊನಾ ವೈರಸ್​ ಸಾಂಕ್ರಾಮಿಕ ಜಗತ್ತನ್ನು ವ್ಯಾಪಿಸಿದ್ದು, ಚೀನಾ ಬಗ್ಗೆ ಅನೇಕ ಸಂದೇಹಗಳನ್ನು ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಚೀನಾ ಮತ್ತು ಡಬ್ಲ್ಯುಎಚ್​ಒ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ್ದರು. ಅಲ್ಲದೆ, ಡಬ್ಲ್ಯುಎಚ್​ಒದ ಚೀನಾ ಪರ ಮೃದು ನೀತಿಯನ್ನು ಪ್ರಶ್ನಿಸಿದ್ದರಲ್ಲದೆ, ಅನುದಾನವನ್ನು ತಡೆಹಿಡಿದಿದ್ದರು.
ಈಗ ಡಬ್ಲ್ಯುಎಚ್​ಒ ತನ್ನ ವೆಬ್​ಸೈಟ್​ನಲ್ಲಿ ಮಾಹಿತಿ ಪರಿಷ್ಕರಿಸಿರುವುದರಿಂದ ಅಮೆರಿಕ ಅಧ್ಯಕ್ಷರ ಹೇಳಿಕೆ ಮತ್ತು ಇತರೆ ಪಿತೂರಿ ಸಿದ್ಧಾಂತಗಳ ವಾದಗಳಿಗೆ ಪುಷ್ಟಿ ಸಿಕ್ಕಂತಾಗಿದೆ. ಜಾಗತಿಕವಾಗಿ ಈಗಾಗಲೇ ಎಲ್ಲರ ವಿರೋಧ ಎದುರಿಸುತ್ತಿರುವ ಚೀನಾಕ್ಕೆ ಇದು ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
