ಜಿನೇವಾ: ಸಾರ್ವಜನಿಕವಾಗಿ ಓಡಾಡುವಾಗ ಮೂರು ಪದರದ ಮಾಸ್ಕ್​ ಧರಿಸಿ. ಆ ಮೂಲಕ ಕರೊನಾ COVID19 ವೈರಸ್ ಸೋಂಕು ತಡೆಗಟ್ಟಬಹುದು. ಮೂರು ಪದರದ ಬಟ್ಟೆಯ ಅಥವಾ ವೈದ್ಯಕೀಯೇತರ ಮಾಸ್ಕ್​​ಗಳನ್ನು ಧರಿಸುವುದಕ್ಕೆ ಆದ್ಯತೆ ನೀಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ತಿಳಿಸಿದೆ.
ಆರೋಗ್ಯ ಸಮಸ್ಯೆ ಹೊಂದಿರುವಂಥ 60 ವರ್ಷ ಮೇಲ್ಪಟ್ಟವರು ಅಥವಾ 60 ವರ್ಷ ಮೇಲ್ಪಟ್ಟವರು ಸಾಮಾಜಿಕ ಅಂತರವನ್ನು ಎಲ್ಲಿ ಕಾಪಾಡಲಾಗುತ್ತಿಲ್ಲವೋ ಅಲ್ಲಿ ಕಡ್ಡಾಯವಾಗಿ ವೈದ್ಯಕೀಯ ಮಾಸ್ಕ್ ಧರಿಸಬೇಕು. ಉಳಿದವರೆಲ್ಲರೂ ಮೂರು ಪದರದ ಬಟ್ಟೆಯ ಮಾಸ್ಕ್​ ಧರಿಸುವುದು ಕಡ್ಡಾಯ. ಸಂಭಾವ್ಯ ಅಪಾಯಕಾರಿ ಸೋಂಕಿನ ಕಣಗಳು ಶರೀರ ಪ್ರವೇಶಿಸದಂತೆ ತಡೆಯಲು ಇದು ಸಹಕಾರಿ ಎಂದು ಡಬ್ಲ್ಯುಎಚ್​ಒ ಹೇಳಿದೆ.
ಇದನ್ನೂ ಓದಿ:ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ
ಎಲ್ಲ ಸರ್ಕಾರಗಳೂ ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾಸ್ಕ್​ ಧರಿಸಲು ಪ್ರೇರೇಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉದಾಹರಣೆಗೆ ಬಸ್​ ಮುಂತಾದ ಸಾರಿಗೆ ವ್ಯವಸ್ಥೆಯಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಮತ್ತು ಇತರೆ ಜನದಟ್ಟಣೆ ಇರುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟದ ಮಾತು. ಹೀಗಾಗಿ ಅಂಥ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದರಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯ. ಈ ಸಂಬಂಧಿತ ಅಧ್ಯಯನ ಪ್ರಕಾರವೇ ಈಗ ಮೂರು ಪದರದ ಮಾಸ್ಕ್ ಧರಿಸುವ ಶಿಫಾರಸು ಮಾಡುತ್ತಿರುವುದು ಎಂದು ಡಬ್ಲ್ಯುಎಚ್​ಒ ಸ್ಪಷ್ಟವಾಗಿ ಹೇಳಿದೆ.
ಭಾರತ, ಸಿಂಗಾಪುರ, ಫ್ರಾನ್ಸ್​, ಸ್ಪೇನ್​, ಜರ್ಮನಿ, ಅರ್ಜೆಂಟೀನಾ ಮತ್ತು ಇತರೆ ದೇಶಗಳಲ್ಲಿ ಈಗಾಗಲೇ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗ ಮೂರು ಪದರದ ಮಾಸ್ಕ್ ಧರಿಸುವುದನ್ನು ಪ್ರೇರೇಪಿಸಬೇಕಾಗಿದೆ. (ಏಜೆನ್ಸೀಸ್)
50 ಮನೆಗೆ ಕನ್ನ ಹಾಕಿದ್ದ ಕಳ್ಳ ಸಿಕ್ಕಿಬಿದ್ದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 15 =
Remember me
