ಬೆಂಗಳೂರು:ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಶನಿವಾರ ಮಾತನಾಡಿದ್ದಾಗ ಪ್ರಧಾನಿ ಮೋದಿ ಅವರು ನೀಡಿದ ಭರವಸೆಗೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್​ ಅಧನಾಮ್​ ಗೆಬ್ರೇಸಸ್​ ಅವರು ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಜಗತ್ತಿನಲ್ಲಿ ಲಸಿಕೆ ಉತ್ಪಾದಿಸುವ ಬೃಹತ್​ ರಾಷ್ಟ್ರವಾಗಿರುವ ಭಾರತದ ಪರವಾಗಿ ನಾನು ಜಾಗತಿಕ ಸಮುದಾಯಕ್ಕೆ ಮತ್ತೊಂದು ಭರವಸೆ ನೀಡುತ್ತಿದ್ದೇನೆ. ಭಾರತದ ಲಸಿಕೆ ಉತ್ಪಾದನೆ ಹಾಗೂ ವಿತರಣಾ ಸಾಮರ್ಥ್ಯವನ್ನು ಸದ್ಯದ ಕೋವಿಡ್​ ಸಂಕಷ್ಟದಲ್ಲಿರುವ ಎಲ್ಲರಿಗೂ ನೆರವಾಗುವ ನಿಟ್ಟಿನಲ್ಲಿ ಬಳಸಲಾಗುವುದು ಎಂದು ಮೋದಿ ವಿಶ್ವಸಂಸ್ಥೆ ಅಧಿವೇಶನದಲ್ಲಿ ಮಾತನಾಡುವ ವೇಳೆ ಭರವಸೆ ನೀಡಿದ್ದರು.
ಅದಕ್ಕೆ ಈಗ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿಯವರು ತೋರಿದ ಐಕ್ಯತೆಯ ಬದ್ಧತೆಗೆ ಅಭಿನಂದನೆಗಳು. ಸಾಮಾನ್ಯ ಒಳಿತಿಗೆ ನಾವು ಜಂಟಿಯಾಗಿ ನಮ್ಮ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡಾಗ ಮಾತ್ರ ಕೋವಿಡ್​ 19 ಪಿಡುಗನ್ನು ನಾವು ತೊಲಗಿಸಲು ಸಾಧ್ಯ ಎಂಬುದಾಗಿ ಅವರು ಹೇಳಿದ್ದಾರೆ.
Thank you for your commitment to solidarity, 🇮🇳 Prime Minister@narendramodi. Only together, by mobilizing our forces and resources jointly for the common good, can we end the#COVID19pandemic.#UNGA@PMOIndia@CDMissionIndia@IndiaUNNewYorkhttps://t.co/UgHjNgmKlM
— Tedros Adhanom Ghebreyesus (@DrTedros)September 26, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
