ಜಿನೀವಾ:ಕರೊನಾ ಸಾಂಕ್ರಾಮಿಕತೆ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿದ್ದು ಜಗತ್ತು ತೀವ್ರ ಆಪತ್ತಿನ ಘಟ್ಟದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಹಾಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಸೋಮವಾರ ಹೇಳಿದರು. ಆದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಹಾಮಾರಿಯನ್ನು ಅಂತ್ಯಗೊಳಿಸಲು ಸಾಧ್ಯ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ. ಸಾಂಕ್ರಾಮಿಕತೆಯ ತೀವ್ರ ಹಂತವನ್ನು ಕೊನೆಗೊಳಿಸಲು ಎಲ್ಲ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಸಾಧನ ಸಲಕರಣೆಗಳು ಅವುಗಳಲ್ಲಿವೆ ಎಂದು ಜರ್ಮನಿಯ ಅಭಿವೃದ್ಧಿ ಸಚಿವೆ ಸ್ವೆಂಜಾ ಷೂಲ್ಝ್ ಜೊತೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಘೇಬ್ರಿಯೆಸಸ್ ಹೇಳಿದರು. ಭಾರತ ಸಹಿತ ಜಗತ್ತಿನ ಅನೇಕ ದೇಶಗಳಲ್ಲಿ ಕೋವಿಡ್ ವ್ಯಾಧಿಯ ಪ್ರಕರಣಗಳು ಹೆಚ್ಚುತ್ತಿದ್ದರೂ ಅದರ ಅಂತ್ಯದ ದಿನಗಳೂ ಸಮೀಪಿಸುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 2022ರಲ್ಲಿ ಕೋವಿಡ್ ಸಾಂಕ್ರಾಮಿಕತೆ ಅಂತ್ಯಗೊಳ್ಳುತ್ತದೆ ಎಂದು ಡಬ್ಲ್ಯುಎಚ್​ಒ ಪದೇ ಪದೆ ಹೇಳುತ್ತಿದೆ. ಒಮಿಕ್ರಾನ್ ರೂಪಾಂತರಿಯಿಂದಾಗಿ ಸಾಂಕ್ರಾಮಿಕತೆ ಹೊಸ ಘಟ್ಟವನ್ನು ಪ್ರವೇಶಿಸಿದ್ದು, ಯುರೋಪ್ ಖಂಡದಲ್ಲಿ ಒಮಿಕ್ರಾನ್ ಶೇ. 60 ವ್ಯಾಪಿಸಿದೆ. ಅದು ಮಾರ್ಚ್ ವೇಳೆಗೆ ಅಂತ್ಯಗೊಳ್ಳಬಹುದು ಎಂದು ಡಬ್ಲ್ಯುಎಚ್​ಒ ಐರೋಪ್ಯ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಹೇಳಿದ್ದಾರೆ.
ಭಾರತದಿಂದಾಗಿ ಆಗ್ನೇಯ ಏಷ್ಯಾದಲ್ಲಿ ಸೋಂಕು ಹೆಚ್ಚಳ:ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಕರೊನಾ ಸೋಂಕಿನ ಸಂಖ್ಯೆಯಲ್ಲಿ ಶೇಕಡ 150ರಷ್ಟು ಏರಿಕೆಯಾಗಿದ್ದು ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಕೇಸ್​ಗಳು ಹೆಚ್ಚಲು ಮುಖ್ಯ ಕಾರಣವಾಗಿದೆ ಎಂದು ಡಬ್ಲ್ಯುಎಚ್​ಒ ಅಭಿಪ್ರಾಯ ಪಟ್ಟಿದೆ. ಭಾರತದಲ್ಲಿ ಜ.23ರಂದು ಕೊನೆಗೊಂಡ ವಾರದಲ್ಲಿ 15,94,160 ಕರೊನಾ ಕೇಸ್​ಗಳು ವರದಿಯಾಗಿವೆ. ಅದಕ್ಕೂ ಹಿಂದಿನ ವಾರ 6,38,872 ಪ್ರಕರಣಗಳು ದಾಖಲಾಗಿದ್ದವು. ಅಂದರೆ ಒಂದು ವಾರದಲ್ಲಿ ಸುಮಾರು ಶೇಕಡ 150 ಏರಿಕೆಯಾಗಿದೆ. ಜಗತ್ತಿನ 171 ದೇಶಗಳಲ್ಲಿ ವೈರಸ್​ನ ಒಮಿಕ್ರಾನ್ ಪ್ರಭೇದ ದಾಖಲಾಗಿದೆ ಎಂದು ಡಬ್ಲ್ಯುಎಚ್​ಒ ಹೇಳಿದೆ.
ಭಾರತದಲ್ಲಿ ಸೋಮವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 3,06,064 ಲಕ್ಷ ಹೊಸ ಕೇಸ್​ಗಳು ದೃಢಪಟ್ಟಿವೆ. ಭಾನುವಾರ 3.33 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ದೇಶದಲ್ಲಿ ಸೋಂಕಿನ ಪಾಸಿಟಿವಿಟಿ ದರ ಶೇಕಡ 20.75ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆ ಪ್ರಮಾಣ ಶೇಕಡ 93.07 ಆಗಿದೆ. ಸೋಮವಾರದ ಕೇಸ್​ನೊಂದಿಗೆ ದೇಶದ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3,95,43,328ಕ್ಕೆ ಏರಿದೆ. 439 ಜನರು ಮೃತಪಡುವುದರೊಂದಿಗೆ ಸಾವಿನ ಸಂಖ್ಯೆ 4,89,848ಕ್ಕೆ ತಲುಪಿದೆ. ದೇಶದಲ್ಲಿ ಇದುವರೆಗೆ 71.69 ಕೋಟಿ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಈ ಮಧ್ಯೆ, ಸೋಮವಾರ ಸಂಜೆಯವರೆಗೆ ದೇಶಾದ್ಯಂತ 162.77 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಸೋಮವಾರ ಒಂದೇ ದಿನ 49 ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಈವರೆಗೂ 87 ಲಕ್ಷ ಮಂದಿ 3ನೇ ಡೋಸ್ ಪಡೆದಿದ್ದಾರೆ. ಅನ್ಯವಾಧಿಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಮತ್ತು ಕರೊನಾ ವಾರಿಯರ್ಸ್​ಗೆ ಜ. 10ರಿಂದಿ ಮುಂಜಾಗೃತಾ ಲಸಿಕೆಯನ್ನು ನೀಡಲಾಗುತ್ತಿದೆ. 15ರಿಂದ 18 ವರ್ಷ ವಯೋಮಿತಿಯ ಮಕ್ಕಳು ಜ. 3ರಿಂದ ಈವರೆಗೆ 4.25 ಲಕ್ಷ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ವಿದ್ಯಾರ್ಥಿಗಳ ಎಡವಟ್ಟು; ಅಂಕಪಟ್ಟಿಯಲ್ಲಿ ಹೆಚ್ಚು ಅಂಕ ಕೊಟ್ಟ ವಿಶ್ವವಿದ್ಯಾಲಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
