ಚೆನ್ನೈ:ಮದುವೆ ಹೆಸರಲ್ಲಿ ನಂಬಿಸಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ತಮಿಳುನಾಡಿನ ಮಾಜಿ ಸಚಿವ ಮಣಿಕಂಠನ್ ವಿರುದ್ಧ ನಟಿ ಚಾಂದನಿ ಚೆನ್ನೈ ಪೊಲೀಸ್​ ಆಯುಕ್ತರ ಕಚೇರಿಗೆ ದೂರು ನೀಡಿದ್ದಾರೆ. ​​
ದೂರಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಚಾಂದಿನಿ, ಸುಮಾರು ಐದು ವರ್ಷಗಳಿಂದ ಮಣಿಕಂಠನ್​ ನನ್ನ ಜೊತೆ ವಾಸವಿದ್ದರು. ನಾನು ಅವರನ್ನು ಪ್ರೀತಿಸುತ್ತಿದ್ದೇನೆ ಮತ್ತು ಮದುವೆ ಆಗಬೇಕೆಂದುಕೊಂಡಿದ್ದೇನೆ. ನಮ್ಮ ನಡುವೆ ದೈಹಿಕ ಸಂಬಂಧವು ನಡೆದಿದ್ದು, ಮೂರು ಬಾರಿ ಗರ್ಭಿಣಿಯಾಗಿದ್ದೆ. ಆದರೆ, ಬಲವಂತದಿಂದ ತೆಗೆಸಿದ್ದಾರೆಂದು ಚಾಂದಿನಿ ದೂರಿದ್ದಾರೆ.
ಮದುವೆ ಆಗುವಂತೆ ಕೇಳಿದರೆ ತನ್ನ ಗುಂಡಾಗಳನ್ನು ಬಿಟ್ಟು ಬೆದರಿಸುತ್ತಾರೆ. ನನ್ನ ಕುಟುಂಬಕ್ಕೂ ಬೆದರಿಕೆ ಹಾಕಿದ್ದಾರೆ. ನನಗೂ ನಿರಂತರವಾಗಿ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಚಾಂದಿನಿ ಮನವಿ ಮಾಡಿಕೊಂಡಿದ್ದಾರೆ.

ಅವಳು ಯಾರೆಂಬುದು ನನಗೆ ಗೊತ್ತಲ್ಲಚಾಂದಿನಿ ನೀಡಿರುವ ದೂರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಮಣಿಕಂಠನ್​, ಅವಳು ಯಾರೆಂಬುದು ಸಹ ನನಗೆ ತಿಳಿದಿಲ್ಲ ಎಂದಿದ್ದಾರೆ. ನಾನು ಸಚಿವನಾಗಿದ್ದ ಸಮಯದಲ್ಲಿ ಅನೇಕರು ನನ್ನ ಭೇಟಿ ಮಾಡಿದ್ದಾರೆ. ಇದೇ ರೀತಿ ನಟಿ ಚಾಂದಿನಿ ಸಹ ಭೇಟಿ ಮಾಡಿರಬಹುದೆಂದು ಹೇಳಿದ್ದಾರೆ.
ಭೇಟಿಯ ವೇಳೆ ಫೋಟೋ ತೆಗೆದುಕೊಂಡು ತಪ್ಪಾಗಿ ದೂರನ್ನು ನೀಡಿದ್ದಾರೆ. ನನಗೆ ಈಗಾಗಲೇ ಮದುವೆ ಆಗಿದ್ದು, ಮೂರು ಮಕ್ಕಳಿದ್ದಾರೆ. ನನ್ನ ಹೆಸರನ್ನು ಕೆಡಿಸಲು ರಾಜಕೀಯ ವಿರೋಧಿಗಳು ಚಾಂದಿನಿಯನ್ನು ಛೂ ಬಿಟ್ಟಿದ್ದಾರೆ. ಮೂರು ದಿನಗಳ ಹಿಂದೆ ಅಪರಿಚಿತನೊಬ್ಬ ಕರೆ ಮಾಡಿ ಚಾಂದಿನಿಯನ್ನು ಭೇಟಿ ಮಾಡಿದ್ದರ ಬಗ್ಗೆ ಫೋಟೋಗಳು ಇವೆ ಎಂದು ಬೆದರಿಕೆ ಹಾಕಿದ್ದ. ಅವರು ಮೂರು ಕೋಟಿ ರೂಪಾಯಿಗೆ ಬೇಡಿಕೆ ಇಡುತ್ತಿದ್ದಾರೆ. ನಾನು ಒಪ್ಪಿಕೊಳ್ಳಲಿಲ್ಲ. ನಾನು ಈ ಪ್ರಕರಣವನ್ನು ಕಾನೂನಾತ್ಮಕವಾಗಿಯೇ ಎದುರಿಸುತ್ತೇನೆಂದು ಹೇಳಿದ್ದಾರೆ.(ಏಜೆನ್ಸೀಸ್​)
ಕರೊನಾದಿಂದ ತಬ್ಬಲಿಯಾದ ಮಕ್ಕಳ ನೆರವಿಗೆ ಧಾವಿಸಿದ ಸರ್ಕಾರ: ವಿಮಾ, ಪೆನ್ಷನ್‌ ಜತೆಗೆ ಶಿಕ್ಷಣ ವ್ಯವಸ್ಥೆ

ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ: ಮುದ್ದಾದ ಮಕ್ಕಳನ್ನು ತಬ್ಬಲಿ ಮಾಡಿದ ಕ್ರೂರಿ ಕರೊನಾ

ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್​ಗೆ ಹಸ್ತಾಂತರಿಸಿ ಸರಳ ವಿವಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
